Monday, Aug 2 2021 | Time 14:19 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
National Share

ನ 24ರಂದು ತಿರುಮಲಕ್ಕೆ ರಾಷ್ಟ್ರಪತಿ ರಾಮ್‍ನಾಥ್‍ ಕೋವಿಂದ್ ಭೇಟಿ

ಚಿತ್ತೂರು, ನ 21 (ಯುಎನ್‌ಐ) -ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಆಂಧ್ರಪ್ರದೇಶ ರಾಜ್ಯಪಾಲ ಬಿಸ್ವಭೂಷಣ್ ಹರಿಚಂದನ್ ಮತ್ತು ಮುಖ್ಯಮಂತ್ರಿ ಜಗನ್‍ಮೋಹನ್‍ ರೆಡ್ಡಿ ಈ ತಿಂಗಳ 24 ರಂದು ತಿರುಮಲಕ್ಕೆ ಆಗಮಿಸಲಿದ್ದಾರೆ.
ರಾಷ್ಟ್ರಪತಿಯವರ ಭೇಟಿಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ತಿರುಮಲ ದೇವಸ್ಥಾನದ ವರೆಗೆ ಭದ್ರತೆಯನ್ನು ಬಿಗಿಗೊಳಿಸಲಾಗುತ್ತಿದೆ.
ರಾಷ್ಟ್ರಪತಿಯವರು ತಿರುಚನೂರು ಪದ್ಮಾವತಿ ಅಮ್ಮಾವರಿ ದೇವಸ್ಥಾನ, ತಿರುಮಲ ಪದ್ಮಾವತಿ ಅತಿಥಿಗೃಹ ಮತ್ತು ತಿರುಮಲ ಮುಖ್ಯ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಭದ್ರತಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದರು. ಸಶಸ್ತ್ರ ವಿಶೇಷ ಪಡೆ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವು ವಿಮಾನ ನಿಲ್ದಾಣದಿಂದ ಮುಖ್ಯ ರಸ್ತೆಗಳಲ್ಲದೆ, ಮೇಲಿನ ಮತ್ತು ಕೆಳಭಾಗದ ಘಾಟ್ ರಸ್ತೆಗಳ ಸಂಪೂರ್ಣ ತಪಾಸಣೆ ನಡೆಸಿವೆ.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು, ಭದ್ರತಾ ಅಧಿಕಾರಿಗಳು, ಜಿಲ್ಲಾಧಿಕಾರಿ, ಐಜಿ (ಗುಪ್ತಚರ), ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಭದ್ರತೆ ಕುರಿತಂತೆ ಉನ್ನತ ಮಟ್ಟದ ಸಭೆ ಕರೆಯಲಾಗಿತ್ತು.
ಯುಎನ್‍ಐ ಎಸ್‍ಎಲ್ಎಸ್ 2045
More News

ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು

02 Aug 2021 | 11:02 AM

 Sharesee more..
ಕೇರಳದಲ್ಲಿ ಕೋವಿಡ್‍ ನ 20,728 ಹೊಸ ಪ್ರಕರಣಗಳು ವರದಿ

ಕೇರಳದಲ್ಲಿ ಕೋವಿಡ್‍ ನ 20,728 ಹೊಸ ಪ್ರಕರಣಗಳು ವರದಿ

01 Aug 2021 | 8:08 PM

ತಿರುವನಂತಪುರಂ, ಆಗಸ್ಟ್ 1 (ಯುಎನ್ಐ) ಕೇರಳದಲ್ಲಿ ಭಾನುವಾರ ಕೋವಿಡ್ ನ 20,278 ಹೊಸ ಪ್ರಕರಣಗಲು ವರದಿಯಾಗಿದ್ದು, ಈ ಅವಧಿಯಲ್ಲಿ 17,792 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

 Sharesee more..
ಬೆಂಗಳೂರಿನಲ್ಲಿ ಸೈಕಲ್‍ ಟ್ರ್ಯಾಕ್ ನಿರ್ಮಾಣ: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಸೈಕಲ್‍ ಟ್ರ್ಯಾಕ್ ನಿರ್ಮಾಣ: ಬಸವರಾಜ ಬೊಮ್ಮಾಯಿ

01 Aug 2021 | 6:00 PM

ಬೆಂಗಳೂರು, ಆಗಸ್ಟ್ 1(ಯುಎನ್ಐ) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಲ್ಕು ದಿಕ್ಕಿನಲ್ಲೂ ಸೈಕ್ಲಿಂಗ್ ಪಥ(ಟ್ರ್ಯಾಕ್) ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

 Sharesee more..
ದೇಶದಲ್ಲಿ 41,831 ಹೊಸ ಕೊರೋನ ಪ್ರಕರಣ, 541 ಜನರ ಸಾವು

ದೇಶದಲ್ಲಿ 41,831 ಹೊಸ ಕೊರೋನ ಪ್ರಕರಣ, 541 ಜನರ ಸಾವು

01 Aug 2021 | 3:47 PM

ನವದೆಹಲಿ, ಆ 1 (ಯುಎನ್ಐ ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41,831 ಜನರಿಗೆ ಕೊರೊನ ಸೋಂಕು ತಗುಲಿದ್ದು , ಚಿಕಿತ್ಸೆ ಫಲಕಾರಿಯಾಗದೇ 541ರೋಗಿಗಳು ಮೃತಪಟ್ಟಿದ್ದಾರೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 Sharesee more..