Saturday, Aug 15 2020 | Time 10:27 Hrs(IST)
  • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Health -Lifestyle Share

ನ 25 ರಿಂದ ನಗರದಲ್ಲಿ ಕ್ಷಯ ರೋಗ ನಿಯಂತ್ರಣ ಆಂದೋಲನ

ಬೆಂಗಳೂರು, ನ.,21(ಯುಎನ್ಐ) ಕ್ಷಯರೋಗ ತಡೆಗಟ್ಟುವ ಉದ್ದೇಶದಿಂದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ನ.25 ರಿಂದ ಡಿ.10 ವರೆಗೆ ಬೆಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಕುಮಾರ್ ಎಂ.ವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವನ್ನು ಸಂಪೂರ್ಣವಾಗಿ ಕ್ಷಯರೋಗದಿಂದ ನಿಯಂತ್ರಿಸುವ ಉದ್ದೇಶದಿಂದ ಹಾಗೂ ಜನರಲ್ಲಿ ಕ್ಷಯರೋಗ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಂದೋಲನ ಹಮ್ಮಿಕೊಳ್ಳಾಗಿದೆ ಎಂದು ಅವರು ತಿಳಿಸಿದರು.
ಕೊಳಚೆ ಪ್ರದೇಶಗಳು, ವೃದ್ಧಾಶ್ರಮಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರಾಶ್ರಿತರ ಶಿಬಿರಗಳು, ವಲಸಿಗರು, ಅನಾಥಾಶ್ರಮಗಳು ಹಾಗೂ ಹೆಚ್ಚಿನ ಜನಸಾಂದ್ರತಾ ಪ್ರದೇಶಗಳಲ್ಲಿ ಈ ಸೇವೆ ಒದಗಿಸಲಾಗುವುದು ಎಂದು ಅವರು ಹೇಳಿದರು.
ಕ್ಷಯ ಇರುವ ವ್ಯಕ್ತಿಗಳು ಮೂಢನಂಬಿಕೆಯಿಂದ ಹೊರಬಂದು ಚಿಕಿತ್ಸೆ ಪಡೆಯಲು ಕೇಂದ್ರಸರ್ಕಾರದಿಂದ ಪ್ರತಿ ತಿಂಗಳು ೫೦೦ ಮಾಶಾಸನ ನೀಡಲಾಗುತ್ತದೆ. ಕ್ಷಯ ಪ್ರಕರಣಗಳನ್ನು ಕಂಡುಹಿಡಿಯುವುದು, ಹೆಚ್ಚು ಅಪಾಯದ ಪ್ರದೇಶಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಕ್ಷಯ ರೋಗದ ಕುರಿತು ಅರಿವು ಮೂಡಿಸುವುದು, ವ್ಯಕ್ತಿಗತ ರೋಗ ಲಕ್ಷಣಗಳ ತಪಾಸಣೆ ಮಾಡುವುದು. ಪತ್ತೆಯಾದ ಎಲ್ಲಾ ಕ್ಷಯರೋಗ ಪ್ರಕರಣಗಳು ಹಾಗೂ ಶಂಕಿತ ಕ್ಷ -ಕಿರಣ ಪ್ರಕರಣಗಳ ಕಫದ ಮಾದರಿಗಳನ್ನು ಪಡೆದು ಉಚಿತವಾಗಿ ಸಿಬಿಎನ್ ಎನ್ ಎಟಿ ಪರೀಕ್ಷೆ ಮಾಡಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಧೃಡಪಟ್ಟ ಕ್ಷಯ ರೋಗಿಗೆ ಎಲ್ಲಾ ಆಸ್ಪತ್ರೆ ಗಳಲ್ಲೂ ಉಚಿತವಾಗಿ ಔಷಧಿ, ಚಿಕಿತ್ಸೆ ದೊರೆಯುತ್ತದೆ ಎಂದು ತಿಳಿಸಿದರು.
ಯುಎನ್ಐ ಡಿಸಿ ವಿಎನ್ 1854