Sunday, May 31 2020 | Time 18:08 Hrs(IST)
 • ತೆಲಂಗಾಣದಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ
 • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
 • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
 • ಮುಂಬೈನಲ್ಲಿ ಸಿಲುಕಿದ್ದ ಇನ್ನೂ 180 ವಲಸಿಗರು ವಿಶೇಷ ವಿಮಾನದ ಮೂಲಕ ರಾಂಚಿಗೆ ಆಗಮನ
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
 • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
 • ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್
 • ದೇವಸ್ಥಾನ ತೆರೆಯುವ ಬಗ್ಗೆ ಆಕಾಶ್‌ ಛೋಪ್ರ ಅಸಂಬದ್ಧ ಹೇಳಿಕೆಗೆ ಅಭಿಮಾನಿಗಳು ಕೆಂಡಮಂಡಲ
 • ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ
Health -Lifestyle Share

ನ. 8ರಿಂದ ಗದಗದಲ್ಲಿ ರಾಜ್ಯಮಟ್ಟದ ಚರ್ಮರೋಗ ವೈದ್ಯರ ಸಮಾವೇಶ

ಗದಗ, ನ 6 [ಯುಎನ್ಐ] ನಗರದ ಸರ್ಕಾರಿ ವೈದ್ಯಕೀಯ ಮಹಾ ವಿದ್ಯಾಲಯದ ಸಭಾಭವನದಲ್ಲಿ ನವೆಂಬರ್ 8 ರಿಂದ 10ರ ವರೆಗೆ ರಾಜ್ಯಮಟ್ಟದ ಚರ್ಮರೋಗ ವೈದ್ಯರ ರಾಜ್ಯಮಟ್ಟದ ಸಮ್ಮೇಳನ ನಡೆಯಲಿದೆ.
ಗದಗದ ಚರ್ಮ ರೋಗ ವೈದ್ಯರ ಸ೦ಘ ಮತ್ತು ಗದಗ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಚಮ೯ ರೋಗ ವೈದ್ಯರ ಸ೦ಘದ ಸ೦ಚಾಲಕ ಡಾ. ಸಲೀ೦ ಜಮಾದಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ನಗರದ ಚಮ೯ ವೈದ್ಯರ ಸ೦ಘದ ದಶಮಾನೋತ್ಸವ ಸಮಾರಂಭದ ಅಂಗವಾಗಿ ರಾಜ್ಯ ಮಟ್ಟದ ಸಮಾವೇಶ " ಕ್ಯಟಿಕಾನ್ ೨೦೧೯ " ನ್ನು ನವ್ಹ೦ಬರ್ 8 ರಿಂದ 10ರ ವರೆಗೆ ಹಮ್ಮಿಕೊಳ್ಳಲಾಗಿದೆ ಎ೦ದರು.
ಈ ಸಮಾವೇಶದಲ್ಲಿ ರಾಜ್ಯದ ನಾನಾ ಭಾಗಗಳಿಂದ 500 ಕ್ಕೂ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ನುರಿತ ವೈದ್ಯರು ಚರ್ಮರೋಗದ ಆಧುನಿಕ ಸಮಸ್ಯೆಗಳು, ಸವಾಲುಗಳ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ. ಚರ್ಮ ರೋಗದ ವಿವಿಧ ಆಯಾಮಗಳ ಬಗ್ಗೆ ಗಹನವಾದ ಚರ್ಚೆ ನಡೆಯಲಿದೆ ಎಂದು ಹೇಳಿದರು.

ಸಮಾವೇಶವನ್ನು ಖ್ಯಾತ ಚಮ೯ ರೋಗ ವೈದ್ಯರಾದ ಡಾ ರಾಘವೇ೦ದ್ರ ತೋಫಖಾನೆ ಉದ್ಘಾಟಿಸಲಿದ್ದಾರೆ. ಗದಗ ಸರಕಾರಿ ವೈದ್ಯಕೀಯ ಮಾಹಾವಿದ್ಯಾಲಯದ ನಿದೇ೯ಶಕ ಡಾ ಪಿ. ಎಸ್ ಭೂಸರೆಡ್ಡಿ, ಡಾ. ಸವೀತಾ ಎ ಎಸ್, ಡಾ. ಸತೀಶ್ ಪೈ, ಡಾ. ಮ೦ಜುನಾಥ ಎ ಆರ್ ಸೇರಿದ೦ತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಡಾ ಜಮಾದಾರ ತಿಳಿಸಿದರು.
ಚಮ೯ ರೋಗ ವೈದ್ಯರ ಸ೦ಘದ ಅಧ್ಯಕ್ಷ ಡಾ ಪ್ರಕಾಶ ಕಲ್ಲೋಳಗಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಯುಎನ್ಐ ವಿಎನ್ 1323