Tuesday, Jan 21 2020 | Time 23:44 Hrs(IST)
 • ಸೌಹಾರ್ದತೆಯನ್ನು ಕೆಡಿಸುವ ರೇಣುಕಾಚಾರ್ಯ ಹೇಳಿಕೆ: ಎಸ್‍ಡಿಪಿಐ
 • ವುಹಾನ್‌ ವೈರಸ್‌: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
National Share

ಪರೀಕ್ಷಾ ಶುಲ್ಕ ಹೆಚ್ಚಳ ಅನಿವಾರ್ಯವಾಗಿತ್ತು; ಸಿಬಿಎಸ್ಇ ಸಮರ್ಥನೆ

ನವದೆಹಲಿ, ಆಗಸ್ಟ್ 13 (ಯುಎನ್‌ಐ) ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ 10 ಹಾಗೂ 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷಾ ಮೌಲ್ಯಮಾಪನ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಾಗೂ ಹಣಕಾಸಿನ ಕೊರತೆಯನ್ನು ನೀಗಿಸಲು ಶುಲ್ಕ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ

ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ಭಾಗಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಮಂಡಳಿ,5 ವರ್ಷಗಳ ನಂತರ ಶುಲ್ಕ ಏರಿಕೆ ಮಾಡಿರುವುದಕ್ಕೆ ಹಲವಾರು ಕಾರಣಗಳನ್ನು ನೀಡಿದೆ. ಕಾಗದಗಳ ವೆಚ್ಚದಲ್ಲಿ ಭಾರಿ ಹೆಚ್ಚಳ, ಗೌಪ್ಯ ವಸ್ತುಗಳ ಮುದ್ರಣ, ಸಾರಿಗೆ, ಸಂಗ್ರಹಣೆ ಮತ್ತು ಉಪಕರಣಗಳು, ಹೊಸ ತಾಂತ್ರಿಕ ಸಂಸ್ಕರಣೆಗಳ ಬಳಕೆಗೆ ಹೆಚ್ಚಿದ ವೆಚ್ಚಗಳು ಪರೀಕ್ಷಾ ಶುಲ್ಕದ ಹೆಚ್ಚಳಕ್ಕೆ ಕಾರಣಗಳಾಗಿವೆ ಎಂದು ತಿಳಿಸಿದೆ.

ಸಿಬಿಎಸ್ಇ ಸ್ವಯಂ ಹಣಕಾಸು ಸಂಸ್ಥೆಯಾಗಿದೆ ಮತ್ತು ಮಂಡಳಿಯು ಯಾವುದೇ ಲಾಭವಿಲ್ಲದೆ ನಷ್ಟದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ, ಪರಿವೀಕ್ಷಕರು, ಹೆಚ್ಚುವರಿ 5000 ಹೊಸ ಮತ್ತು ಉಪ ಕೇಂದ್ರ ಅಧೀಕ್ಷಕರ (5000 ಹೊಸಬರು) ನಿಯೋಜನೆ, ಪ್ರತಿ ಪರೀಕ್ಷೆಯ ಮೌಲ್ಯಮಾಪಕರು ಮತ್ತು ಪರಿವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ, ಮೌಲ್ಯಮಾಪಕರ ಗೌರವ ಧನ ಶೇ. 33 ರಷ್ಟು ಹೆಚ್ಚಳಗಳು ಕೂಡ ಶುಲ್ಕ ಹೆಚ್ಚಳಕ್ಕೆ ಕಾರಣಗಳಾಗಿವೆ ಎಂದು ಮಂಡಳಿ ತಿಳಿಸಿದೆ.

ಮಂಡಳಿಯು 2.5 ಲಕ್ಷ ಮೌಲ್ಯಮಾಪಕರು ಮತ್ತು ಇತರ ಎಲ್ಲ ಮಧ್ಯಸ್ಥಗಾರರಿಗೆ ಮುಖಾಮುಖಿ ತರಬೇತಿಯನ್ನು ನೀಡಿದೆ.

ಈ ಮೊದಲು, ದೇಶದ ಎಲ್ಲ ವಿದ್ಯಾರ್ಥಿಗಳಿಗೆ 750 ರೂ.ಇದ್ದ ಶುಲ್ಕವನ್ನು (ಅಥವಾ ಪ್ರತಿ ವಿಷಯಕ್ಕೆ 150 ರೂ.) 1500 ರೂ.ಗೆ (ಅಥವಾ ಪ್ರತಿ ವಿಷಯಕ್ಕೆ 300 ರೂ.) ಹೆಚ್ಚಿಸಲಾಗಿದೆ. ದೃಷ್ಟಿ ದೋಷ ಹೊಂದಿದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ ಈ ಹಿಂದೆ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ 375 ರೂ. ಇದ್ದು, ವಿದ್ಯಾರ್ಥಿಗಳು ಕೇವಲ 50 ರೂ. ಮಾತ್ರ ಪಾವತಿಸುತ್ತಿದ್ದರು. ಉಳಿದ 325 ರೂ.ಗಳನ್ನು ದೆಹಲಿ ಸರ್ಕಾರವು ಮರುಪಾವತಿ ಮಾಡುತ್ತಿತ್ತು.
ದೆಹಲಿಯ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಈ ಹಿಂದೆ ಭಾರತದ ಉಳಿದ ಭಾಗಗಳಂತೆ 750 ರೂ. ಪಾವತಿಸುತ್ತಿದ್ದರು ಮತ್ತು ಈಗ 1500 ರೂ. ಮಾಡಲಾಗಿದೆ.

ಮಂಡಳಿಯು ಆಡಳಿತ ಮಂಡಳಿಯ ನಿರ್ಣಯದ ಮೂಲಕ ಭಾರತ ಮತ್ತು ವಿದೇಶಗಳಲ್ಲಿನ ಸಿಬಿಎಸ್‌ಇಯ ಎಲ್ಲಾ ಅಂಗಸಂಸ್ಥೆಯ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಘೋಷಿಸಿತ್ತು.

ಯುಎನ್ಐ ಡಿಸಿ ಎಎಸ್ 2042
More News
ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ

ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ

21 Jan 2020 | 6:39 PM

ತಿರುವನಂತಪುರಂ, ಜ 21(ಯುಎನ್‍ಐ)- ನೇಪಾಳಕ್ಕೆ ಪ್ರವಾಸಕ್ಕಾಗಿ ತೆರಳಿದ್ದ ಎಂಟು ಕೇರಳಿಗರು ಮಂಗಳವಾರ ಉಸಿರುಗಟ್ಟಿ ಸತ್ತಿರುವ ಘಟನೆ ಕುರಿತಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದು:ಖ ವ್ಯಕ್ತಪಡಿಸಿದ್ದಾರೆ.

 Sharesee more..
ಪುಲ್ವಾಮ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ, ಇಬ್ಬರು ಜೆಇಎಂ ಉಗ್ರರು ಹತ

ಪುಲ್ವಾಮ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ, ಇಬ್ಬರು ಜೆಇಎಂ ಉಗ್ರರು ಹತ

21 Jan 2020 | 6:09 PM

ಶ್ರೀನಗರ, ಜ 21(ಯುಎನ್‍ಐ)- ದಕ್ಷಿಣ ಕಾಶ್ಮೀರ ಜಿಲ್ಲೆ ಪುಲ್ವಾಮದಲ್ಲಿ ಮಂಗಳವಾರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಭಯೋತ್ಪಾಕರು ಹತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..