Wednesday, Jul 17 2019 | Time 12:26 Hrs(IST)
  • ಇಂಡೋನೇಷ್ಯಾ ಓಪನ್‌: ಸಿಂಧು, ಶ್ರೀಕಾಂತ್‌ ಶುಭಾರಂಭ
  • ಬಂಡಾಯ ಶಾಸಕರು ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ: ಸುಪ್ರೀಂ ತೀರ್ಪು
  • ನರೇಂದರ್‌ : ಅಂತಾರಾಷ್ಟ್ರೀಯ ಗೋಲು ಗಳಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ
  • ನಾಲ್ಕೈದು ದಿನಗಳಲ್ಲಿ ಬಿಜೆಪಿ ಸರ್ಕಾರಅಸ್ಥಿತ್ವಕ್ಕೆ : ಬಿಎಸ್ ಯಡಿಯೂರಪ್ಪ ವಿಶ್ವಾಸ
International Share

ಪಾಕಿಸ್ತಾನದಲ್ಲಿ ಬಸ್ ಕಮರಿಗೆ ಬಿದ್ದು 13 ಮಂದಿ ಸಾವು

ಇಸ್ಲಾಮಾಬಾದ್, ಜುಲೈ 11 (ಯುಎನ್‌ಐ) ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಅಟೋಕ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಪ್ರಯಾಣಿಕರ ಬಸ್ ಕಮರಿಗೆ ಬಿದ್ದು 13 ಜನರು ಸಾವನ್ನಪ್ಪಿದ್ದು, ಇತರೆ 30 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಟೋಕ್ ಜಿಲ್ಲೆಯ ಹಸನ್ ಅಬ್ದಾಲ್ ಪ್ರದೇಶದ ಸಮೀಪದಲ್ಲಿರುವ ಕಮರಿಗೆ ಬಸ್ ಬಿದ್ದು ಅಪಘಾತ ಸಂಭವಿಸಿದೆ. ಬಸ್ ವಾಯುವ್ಯ ಗುಡ್ಡಗಾಡು ನಗರವಾದ ಸ್ವಾತ್‌ನಿಂದ ದೇಶದ ಪೂರ್ವ ನಗರವಾದ ಲಾಹೋರ್ ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ.
ಪೊಲೀಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಶವಗಳನ್ನು ಸ್ಥಳಾಂತರಿಸಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲು ಮಾಡಿವೆ.

ಗಾಯಗೊಂಡವರಲ್ಲಿ ಕನಿಷ್ಠ ಐವರು ಗಂಭೀರ ಸ್ಥಿತಿಯಲ್ಲಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗ ಬಹುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಒದ್ದೆಯಾದ ಮತ್ತು ಇಳಿಜಾರು ರಸ್ತೆಯಲ್ಲಿ ಅಜಾಗರೂಕತೆಯಿಂದ ಮತ್ತು ವೇಗವಾಗಿ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿ ಬಸ್ ಚಾಲಕ ಮೊಬೈಲ್ ಫೋನ್ ಬಳಸುತ್ತಿದ್ದು, ಇದೇ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಿದ್ದಾರೆ.
ಯುಎನ್ಐ ಕೆಎಸ್ಆರ್ ಎಎಚ್ 1401