Monday, Aug 2 2021 | Time 14:45 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
International Share

ಪಾಕಿಸ್ತಾನದಲ್ಲಿ ರಸ್ತೆ ಅಪಘಾತ: 30 ಮಂದಿ ಸಾವು, ಅನೇಕರಿಗೆ ಗಾಯ

ಪಾಕಿಸ್ತಾನದಲ್ಲಿ ರಸ್ತೆ ಅಪಘಾತ: 30 ಮಂದಿ ಸಾವು, ಅನೇಕರಿಗೆ ಗಾಯ
ಪಾಕಿಸ್ತಾನದಲ್ಲಿ ರಸ್ತೆ ಅಪಘಾತ: 30 ಮಂದಿ ಸಾವು, ಅನೇಕರಿಗೆ ಗಾಯ

ಇಸ್ಲಾಮಾಬಾದ್, ಜುಲೈ 19 (ಯುಎನ್‍ ಐ) ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್‌ನ ಸಿಂಧೂ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದು, ಇತರ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನತದೃಷ್ಟ ಬಸ್ ಸಿಯಾಲ್‌ಕೋಟ್‌ನಿಂದ ರಾಜನ್‌ಪುರಕ್ಕೆ ತೆರಳುತ್ತಿತ್ತು. ಅಪಘಾತ ಸ್ಥಳಕ್ಕೆ ತಕ್ಷಣವೇ ರಕ್ಷಣಾ ಸಿಬ್ಬಂದಿ ಧಾವಿಸಿ,ಗಾಯಾಳುಗಳನ್ನು ಡೇರಾ ಘಾಜಿ ಖಾನ್‌ನ ಡಿಎಚ್‌ಕ್ಯು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡೇರಾ ಘಾಜಿ ಖಾನ್‌ನ ಆಯುಕ್ತ ಡಾ.ಇರ್ಷಾದ್ ಅಹ್ಮದ್ ತಿಳಿಸಿದ್ದಾರೆ.

ಗಾಯಗೊಂಡ ನಾಲ್ವರ ಸ್ಥಿತಿ ಗಂಭೀರವಾಗಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿರುವುದನ್ನು ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ದೃಢಪಡಿಸಿದ್ದಾರೆ.

ರಸ್ತೆ ಅಪಘಾತಗಳನ್ನು ತಪ್ಪಿಸಲು ಮತ್ತು ಜನರ ಜೀವ ಉಳಿಸಲು ಜನರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಫವಾದ್ ಹೇಳಿದ್ದಾರೆ. ಘಟನೆಯ ಬಗ್ಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಮತ್ತು ಆಂತರಿಕ ಸಚಿವ ಶೇಖ್ ರಶೀದ್ ಸಹ ದುಃಖ ವ್ಯಕ್ತಪಡಿಸಿದ್ದಾರೆ.

ಯುಎನ್‍ಐ ಎಸ್ಎಲ್ಎಸ್ 1635

More News
ಚೀನಾದ ಮುಖ್ಯ ಭೂಭಾಗದಲ್ಲಿ 53 ಸ್ಥಳೀಯ ಕೊರೋನ ಪ್ರಕರಣ ದಾಖಲು

ಚೀನಾದ ಮುಖ್ಯ ಭೂಭಾಗದಲ್ಲಿ 53 ಸ್ಥಳೀಯ ಕೊರೋನ ಪ್ರಕರಣ ದಾಖಲು

01 Aug 2021 | 4:05 PM

ಬೀಜಿಂಗ್, ಆಗಸ್ಟ್ 1 (ಯುಎನ್ಐ) ಚೀನಾದ ಮುಖ್ಯ ಭೂಭಾದಲ್ಲಿ ಶನಿವಾರ ಸ್ಥಳೀಯವಾಗಿ, 53 ಹೊಸ ಕೊರೋನ ಪ್ರಕರಣಗಳನ್ನು ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ವರದಿಯಲ್ಲಿ ತಿಳಿಸಿದೆ.

 Sharesee more..
ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

31 Jul 2021 | 7:20 PM

ಕಾಬೂಲ್, ಜುಲೈ 31 (ಯುಎನ್ಐ) ಅಫ್ಘಾನಿಸ್ತಾನದ ಉತ್ತರ ಜಾವ್ಜಾನ್ ಪ್ರಾಂತ್ಯದಲ್ಲಿ ಶುಕ್ರವಾರ ತಾಲಿಬಾನ್ ಪ್ರಮುಖ ನೆಲೆಗಳ ಮೇಲೆ ಸೇನಾ ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 21 ಉಗ್ರರು ಮೃತಪಟ್ಟಿದ್ದಾರೆ.

 Sharesee more..
ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

31 Jul 2021 | 6:42 PM

ಮಾಸ್ಕೊ, ಜುಲೈ 31(ಯುಎನ್ಐ/ಸ್ಪುಟ್ನಿಕ್)- ಪೂರ್ವ ಆಫ್ಘಾನಿಸ್ತಾನದಲ್ಲಿ ಭಾರೀ ಪ್ರವಾಹಗಳಿಂದ 113ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಟೊಲೋ ನ್ಯೂಸ್ ವರದಿ ಮಾಡಿದೆ.

 Sharesee more..

ಪೆರುವಿನಲ್ಲಿ ಭೂಕಂಪನ: 40 ಜನರಿಗೆ ಗಾಯ

31 Jul 2021 | 8:59 AM

 Sharesee more..