Saturday, Jan 16 2021 | Time 08:48 Hrs(IST)
Sports Share

ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಸೋಲು

ಬೆಂಗಳೂರು, ಜ.12 (ಯುಎನ್ಐ)- ವೇಗಿ ಸಿದ್ಧಾರ್ಥ್ ಕೌಲ್ (26ಕ್ಕೆ 4) ಆರ್ಷದೀಪ್ ಸಿಂಗ್ (18ಕ್ಕೆ 2) ಇವರುಗಳ ಬಿಗುವಿನ ದಾಳಿಯ ನೆರವಿನಿಂದ ಕರ್ನಾಟಕ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ವಿರುದ್ಧ 9 ವಿಕೆಟ್ ಗಳ ಸೋಲು ಕಂಡಿದೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರ್ ಗಳಲ್ಲಿ 8 ವಿಕೆಟ್ ಗೆ 125 ರನ್ ಗಳಿಸಿತು. ರಾಜ್ಯದ ಪರ ದೇವದತ್ ಪಡೀಕ್ಕಲ್ 19, ರೋಹನ್ ಕದಂ 32, ಪವನ್ ದೇಶಪಾಂಡೆ 16, ಕರುಣ್ ನಾಯರ್ 13, ಕೆ.ಗೌತಮ್ 13 ರನ್ ಬಾರಿಸಿ ತಂಡಕ್ಕೆ ನೆರವಾದರು. ಕೆಳ ಕ್ರಮಾಂಕದಲ್ಲಿ ಜೆ.ಸುಚಿತ್ 11 ರನ್ ಸಿಡಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.

ಪಂಜಾಬ್ ಪರ ಪ್ರಭಾಸಿಮರನ್ ಸಿಂಗ್ ಹಾಗೂ ಅಭಿಷೇಕ್ ಶರ್ಮಾ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 11.2 ಓವರ್ ಗಳಲ್ಲಿ 93 ರನ್ ಗಳ ಜೊತೆಯಾಟವನ್ನು ನೀಡಿತು. ಅಭೀಷೇಕ್ ಶರ್ಮಾ 30 ರನ್ ಸಿಡಿಸಿ ಗೌತಮ್ ಗೆ ವಿಕೆಟ್ ಒಪ್ಪಿಸಿದರು. ಪ್ರಭಾಸಿಮರನ್ ಸಿಂಗ್ 52 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ 89 ರನ್ ಸಿಡಿಸಿ ಅಜೇಯರಾಗುಳಿದರು. ಅಂತಿಮವಾಗಿ ಪಂಜಾಬ್ 14.4 ಓವರ್ ಗಳಲ್ಲಿ 1 ವಿಕೆಟ್ ಗೆ 127 ರನ್ ಸೇರಿಸಿತು.

ಯುಎನ್ಐ ವಿಎನ್ಎಲ್ 1850