Wednesday, Mar 3 2021 | Time 20:30 Hrs(IST)
 • ಕರ್ನಾಟಕ,ಮಹಾ, ಕೇರಳ, ಪಂಜಾಬ್‌, ತಮಿಳುನಾಡು, ಗುಜರಾತ್‌ನಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳ
 • ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅಧಿವೇಶನ: ಬೆಲೆ ಏರಿಕೆ, ಬಿಜೆಪಿ ಆಂತರಿಕ ಕಚ್ಚಾಟ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆರೆದುಕೊಳ್ಳಲು ವಿಪಕ್ಷ ಸಜ್ಜು
 • ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ
 • ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ
 • ‘ಸಂಘ’ ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿಗೆ ಇನ್ನೂ ಬಹಳಷ್ಟು ಸಮಯಬೇಕಿದೆ; ಜಾವಡೇಕರ್
 • 'ಚಿನ್ನಮ್ಮ' ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಣ್ಣಾ ಡಿಎಂಕೆ ಮೇಲೆ ಬಿಜೆಪಿ ನಾಯಕರ ಒತ್ತಡ ?
 • ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ:ಬಿಸಿಪಾ
 • ನವೀಕರಿಸಬಹುದಾದ ಇಂಧನ ವಲಯಲ್ಲಿ ಭಾರತ, ಫ್ರಾನ್ಸ್ ನಡುವೆ ಸಹಕಾರ ಕುರಿತ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
 • ರಾಸಲೀಲೆ ಪ್ರಕರಣ:ರಮೇಶ್ ಜಾರಕಿಹೊಳಿ ರಾಜೀನಾಮೆ
 • ಮದರಸಾಗಳಲ್ಲಿ ಭಗವದ್ಗೀತೆ, ರಾಮಾಯಣ !
 • ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ
 • ಕೋವಿಡ್ ಲಸಿಕೆ ಹಾಕಿಸಿಕೊಂಡ: ರಾಷ್ಟ್ರಪತಿ ರಾಮನಾಥ್ ಕೋವಿಂದ್
 • ಲಡಾಖ್ಗೆ ಕಾಶ್ಮೀರ ಸಂಪರ್ಕಿಸುವ ಹೆದ್ದಾರಿ ಬಂದ್: ವೈಮಾನಿಕವಾಗಿ 500 ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಳಾಂತರ
 • ನಟ ತಾಪ್ಸಿ ಪನ್ನು , ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಆಸ್ತಿಗಳ ಮೇಲೆ ಐಟಿ ದಾಳಿ
 • ದೇಶಾದ್ಯಂತ ಇದುವರೆಗೆ 1 56 ಕೋಟಿ ಜನರಿಗೆ ಕೋವಿಡ್ ಲಸಿಕೆ
National Share

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 56,368 ಹೊಸ ಮನೆಗಳ ನಿರ್ಮಾಣಕ್ಕೆ ಸರ್ಕಾರ ಅಸ್ತು

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 56,368 ಹೊಸ ಮನೆಗಳ ನಿರ್ಮಾಣಕ್ಕೆ ಸರ್ಕಾರ ಅಸ್ತು
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 56,368 ಹೊಸ ಮನೆಗಳ ನಿರ್ಮಾಣಕ್ಕೆ ಸರ್ಕಾರ ಅಸ್ತು

ನವದೆಹಲಿ, ಫೆ .23 (ಯುಎನ್ಐ)- ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಅಡಿಯಲ್ಲಿ ಇನ್ನೂ 56,368 ಮನೆಗಳನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ ಎಂದು ಮಂಗಳವಾರ ಅಧಿಕೃತವಾಗಿ ತಿಳಿದುಬಂದಿದೆ.

ಸೋಮವಾರ ಇಲ್ಲಿ ನಡೆದ 53 ನೇ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಒಟ್ಟು 11 ರಾಜ್ಯಗಳು ಭಾಗವಹಿಸಿದ್ದವು. ಈವರೆಗೆ 73 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಲಾಗಿದ್ದು, ಸುಮಾರು 43 ಲಕ್ಷ ಮನೆಗಳು ಪೂರ್ಣಗೊಂಡಿವೆ.

‘ಯೋಜನೆ ಅನುಷ್ಠಾನ ಮತ್ತು ಕಾರ್ಯಗತ ವಿಧಾನ ಅಳವಡಿಸಿಕೊಳ್ಳಲಾಗುತ್ತಿದೆ.’ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಹೇಳಿದ್ದಾರೆ. ಯೋಜನೆಯ ಅವಧಿಯಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಿಎಂಎವೈ-ಯು ಮನೆಗಳ ಶೇ 100 ರಷ್ಟು ಪೂರ್ಣಗೊಳಿಸುವಿಕೆ ಮತ್ತು ವಿತರಣೆಯನ್ನು ಖಚಿಪಡಿಸಿಕೊಳ್ಳಬೇಕೆಂದು ಅವರು ರಾಜ್ಯಗಳನ್ನು ಕೋರಿದ್ದಾರೆ.

ಮಿಷನ್‌ನ ಸರಿಯಾದ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಆನ್‌ಲೈನ್ ಕಾರ್ಯವಿಧಾನವನ್ನು (ಎಂಐಎಸ್) ಬಳಸಿಕೊಳ್ಳುವಂತೆ ರಾಜ್ಯಗಳಿಗೆ ಅವರು ಸೂಚಿಸಿದ್ದಾರೆ. ಮಹಿಳಾ ಫಲಾನುಭವಿಗಳು ಅಥವಾ ಜಂಟಿ ಮಾಲೀಕತ್ವದ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡುವ ಮೂಲಕ ಯೋಜನೆ, ಮಹಿಳಾ ಸಬಲೀಕರಣವನ್ನು ಹೇಗೆ ಉತ್ತೇಜಿಸುತ್ತಿದೆ ಎಂಬುದರ ಕುರಿತು ಶಂಕರ್ ಮಿಶ್ರಾ ಹೇಳಿದರು.

ಪ್ರತಿ ಹಂತದಲ್ಲೂ ಸಚಿವಾಲಯ ಹೊರಡಿಸಿದ ಸಲಹೆಯನ್ನು ಪಾಲಿಸುವಂತೆ ಅವರು ರಾಜ್ಯಗಳಿಗೆ ನಿರ್ದಿಷ್ಟವಾಗಿ ಸೂಚಿಸಿದ ಅವರು, ಮುಖ್ಯವಾಗಿ ಮಹಿಳಾ ಫಲಾನುಭವಿಗಳ ಹೆಸರನ್ನು ಅವರ ಪಿಎಂಎವೈ-ಯು ಮನೆಯ ನಾಮ ಫಲಕದಲ್ಲಿ ನಮೂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.ಯುಎನ್ಐ ಎಸ್ಎಲ್ಎಸ್ 1305

More News
ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ

ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ

03 Mar 2021 | 5:54 PM

ನವದೆಹಲಿ, ಮಾರ್ಚ್ ೩ (ಯುಎನ್‌ಯ)- ಪ್ರಾಣಿಗಳನ್ನು ರಕ್ಷಿಸಿ, ಅರಣ್ಯಗಳನ್ನು ಸಂರಕ್ಷಿಸುವಂತೆ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರಮೋದಿ ಜನತೆಗೆ ಮನವಿ ಮಾಡಿದ್ದಾರೆ.

 Sharesee more..
ವಿಭಿನ್ನ ಅಭಿಪ್ರಾಯ, ದೇಶದ್ರೋಹವೆಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್

ವಿಭಿನ್ನ ಅಭಿಪ್ರಾಯ, ದೇಶದ್ರೋಹವೆಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್

03 Mar 2021 | 4:42 PM

ನವದೆಹಲಿ, ಮಾ 3 (ಯುಎನ್ಐ) ಸರ್ಕಾರದ ಅಭಿಪ್ರಾಯಗಳಿಗಿಂತ ವಿಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸುವುದನ್ನು ದೇಶದ್ರೋಹವೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

 Sharesee more..