Monday, Oct 26 2020 | Time 04:09 Hrs(IST)
National Share

ಪ್ರವಾಹ ಪೀಡಿತ ಹೈದರಾಬಾದ್ ನಲ್ಲಿ ಸಾಮಾನ್ಯ ಜನಜೀವನ ಕ್ರಮೇಣ ಸಹಜಸ್ಥಿತಿಯತ್ತ

ಹೈದರಾಬಾದ್, ಅ 17(ಯುಎನ್‍ಐ)- ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವ ತೆಲಂಗಾಣ ರಾಜಧಾನಿ ಹೈದರಾಬಾದ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಶನಿವಾರ ನಗರದಲ್ಲಿ ಸೂರ್ಯ ಪ್ರಕಾಶಮಾನವಾಗಿ ಗೋಚರಿಸುವುದರೊಂದಿಗೆ ವಾತಾವರಣದಲ್ಲಿ ತಿಳಿಯಾಗಿದೆ.
ಹಳೆಯ ನಗರದಲ್ಲಿ ಹೆಚ್ಚು ಹಾನಿಗೊಳಗಾದ ವಸತಿ ಪ್ರದೇಶಗಳಿಂದ ಪ್ರವಾಹದ ನೀರನ್ನು ಹೊರಹಾಕುವಲ್ಲಿ ಪರಿಹಾರ ಮತ್ತು ರಕ್ಷಣಾ ತಂಡಗಳು ನಿರತರಾಗಿವೆ. ಈ ಪ್ರದೇಶಗಳಲ್ಲಿ ಮಳೆ ಮತ್ತು ಗುಡುಗು ಸಹಿಸ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಎಲ್ಲವೂ ಸರೋವರಗಳಾಗಿ ಮಾರ್ಪಟ್ಟಿವೆ.
ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ಅವರು ಪರಿಹಾರ ಕಾರ್ಯಾಚರಣೆಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುವ ಮೂಲಕ ಸತತವಾಗಿ ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಅಗತ್ಯವಿರುವವರಿಗೆ ಆಹಾರ ಪ್ಯಾಕೆಟ್ ಮತ್ತು ಔಷಧಗಳನ್ನು ವಿತರಿಸುವ ಕಾರ್ಯ ಮುಂದುವರೆದಿದೆ.
ರಾಜೇಂದ್ರನಗರ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ ತಲಾ ಐದು ಲಕ್ಷ ರೂ.ಪರಿಹಾರ ಮೊತ್ತವನ್ನು ಕೆ.ಟಿ.ರಾಮಾರಾವ್ ಹಸ್ತಾಂತರಿಸಿದರು.
ಪ್ರವಾಹದ ನಂತರ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದ 8,000 ಜನರಲ್ಲಿ ಹೆಚ್ಚಿನವರು ತಮ್ಮ ಮನೆಗಳಿಗೆ ಮರಳಿದ್ದು, ಸಾಮಾನ್ಯ ಜೀವನ ನಡೆಸಲಾರಂಭಿಸಿದ್ದಾರೆ. ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮುಚ್ಚಲ್ಪಟ್ಟಿದ್ದ ಅಂಗಡಿಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳು ಸಹ ಪೀಡಿತ ಪ್ರದೇಶಗಳಲ್ಲಿ ತೆರೆಯಲ್ಪಟ್ಟಿವೆ.
ಈ ಮಧ್ಯೆ, ಮುಂದಿನ 48 ಗಂಟೆಗಳಲ್ಲಿ ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಮಳೆ, ಗುಡುಗು ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಯುಎನ್‍ಐ ಎಸ್ಎಲ್ಎಸ್‍ 1705
More News

ನಾಳೆಯಿಂದ ಸೇನಾ ಕಮಾಂಡರ್‌ಗಳ ಸಮಾವೇಶ

25 Oct 2020 | 10:45 PM

 Sharesee more..
ಆರ್‌ಎಸ್‌ಎಸ್‌-ಶಿಸ್ತು, ದೇಶಭಕ್ತಿಯ ಸಂಕೇತ; ಅಮಿತ್‌ ಶಾ

ಆರ್‌ಎಸ್‌ಎಸ್‌-ಶಿಸ್ತು, ದೇಶಭಕ್ತಿಯ ಸಂಕೇತ; ಅಮಿತ್‌ ಶಾ

25 Oct 2020 | 9:49 PM

ನವದೆಹಲಿ, ಅ 25 (ಯುಎನ್ಐ) ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್‌ಎಸ್‌ಎಸ್‌) ಕೇವಲ ಒಂದು ಸಂಘಟನೆಯಲ್ಲ, ಬದಲಿಗೆ ಶಿಸ್ತು, ದೇಶಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

 Sharesee more..
ಶ್ರೀವಾರಿ ಸರ್ವ ದರ್ಶನಕ್ಕೆ ಟಿಟಿಡಿಯಿಂದ ಪ್ರತಿದಿನ 3,000 ಉಚಿತ ಟೋಕನ್‍ ವಿತರಣೆ

ಶ್ರೀವಾರಿ ಸರ್ವ ದರ್ಶನಕ್ಕೆ ಟಿಟಿಡಿಯಿಂದ ಪ್ರತಿದಿನ 3,000 ಉಚಿತ ಟೋಕನ್‍ ವಿತರಣೆ

25 Oct 2020 | 9:30 PM

ತಿರುಮಲ, ಅ 25 (ಯುಎನ್‌ಐ) ಸೋಮವಾರದಿಂದ ಅಲಿಪಿರಿ ಬಳಿಯ ಭೂದೇವಿ ಕಾಂಪ್ಲೆಕ್ಸ್‌ನ ಕೌಂಟರ್‌ಗಳಲ್ಲಿ ಶ್ರೀವಾರಿ ಸರ್ವ ದರ್ಶನಕ್ಕೆ ದಿನವೊಂದಕ್ಕೆ 3,000 ಉಚಿತ ಟೋಕನ್‌ಗಳನ್ನು ನೀಡುವುದಾಗಿ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಪ್ರಕಟಿಸಿದೆ.

 Sharesee more..