Friday, Dec 13 2019 | Time 02:39 Hrs(IST)
National Share

ಪ್ರಿಯಾಂಕಾ ವಾದ್ರಾ ನಿವಾಸದ ಬಳಿ ಭದ್ರತಾ ಲೋಪ: ಸಮಸ್ಯೆಯ ಚರ್ಚೆಗೆ ಸಚಿವರ ಭರವಸೆ

ನವದೆಹಲಿ, ಡಿ ೦೨ (ಯುಎನ್‌ಐ) ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ದೆಹಲಿ ನಿವಾಸದಲ್ಲಿ ಭದ್ರತಾ ಲೋಪದ ವರದಿಯಾಗಿದ್ದು, ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಗೃಹಖಾತೆ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ ಸೋಮವಾರ ಹೇಳಿದ್ದಾರೆ.
ನವೆಂಬರ್ ೨೫ ರಂದು ನಡೆದಿದೆ ಎನ್ನಲಾಗಿರುವ ಭದ್ರತಾ ಉಲ್ಲಂಘನೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, "ಭದ್ರತಾ ಲೋಪದ ಕುರಿತು ನನಗೆ ಇನ್ನೂ ವಿವರಗಳು ತಿಳಿದಿಲ್ಲ, ಅದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ" ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಉತ್ತರ ಪ್ರದೇಶದ ಐದು ಜನರಿದ್ದ ಕಾರೊಂದು ಲೋಧಿ ಉದ್ಯಾನದ ಹೆಚ್ಚಿನ ಭದ್ರತಾ ಪ್ರದೇಶದಲ್ಲಿರುವ ಪ್ರಿಯಾಂಕಾ ಅವರ ಮನೆಗೆ ಪ್ರವೇಶಿಸಿ ಫೋಟೊ ತೆಗೆಸಿಕೊಳ್ಳುವಂತೆ ಬೇಡಿಕೆಯಿಟ್ಟಿತ್ತು ಎನ್ನಲಾಗಿದೆ.
ಘಟನೆಯ ಬಗ್ಗೆ ಪ್ರಿಯಾಂಕಾ, ರಾಹುಲ್ ಹಾಗೂ ಸೋನಿಯಾ ಗಾಂಧಿಯವರಿಗೆ ರಕ್ಷಣೆ ನೀಡುತ್ತಿರುವ ಸಿಆರ್‌ಪಿಎಫ್‌ಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ಬೆದರಿಕೆ ಗ್ರಹಿಕೆ ಪರಿಷ್ಕರಣೆಯ ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗಾಂಧಿ-ನೆಹರೂ ಕುಟುಂಬಕ್ಕಾಗಿ ನೀಡುತ್ತಿದ್ದ ವಿಶೇಷ ಸಂರಕ್ಷಣಾ ಗುಂಪಿನ (ಎಸ್‌ಪಿಜಿ) ಭದ್ರತೆ ತೆಗೆದುಹಾಕಿದ ಒಂದು ವಾರದ ನಂತರ ಈ ಘಟನೆ ನಡೆದಿದೆ.
ಪ್ರಸ್ತುತ ಸೋನಿಯಾ, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಸಿಆರ್‌ಪಿಎಫ್‌ನ ಝಡ್ ಪ್ಲಸ್ ಭದ್ರತಾ ವ್ಯಾಪ್ತಿಯಲ್ಲಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ೧೯೯೧ ರಲ್ಲಿ ಶ್ರೀಲಂಕಾದ ಭಯೋತ್ಪಾದಕ ಗುಂಪು ಎಲ್‌ಟಿಟಿಇ ಹತ್ಯೆಗೈದ ನಂತರ ಗಾಂಧಿ-ನೆಹರೂ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ರಕ್ಷಣೆ ನೀಡಲಾಗಿತ್ತು.
ಯುಎನ್‌ಐ ಎಸ್‌ಎ ವಿಎನ್ ೨೦೧೧
More News
ಹವಾಮಾನ ವೈಪ್ಯರೀತ್ಯದಿಂದ ಕೃಷಿ ವಲಯದಲ್ಲಿ ಹಾನಿ, ಸರ್ಕಾರದಿಂದ ಅಗತ್ಯ ಕ್ರಮ-ನರೇಂದ್ರ ಸಿಂಗ್ ತೋಮರ್

ಹವಾಮಾನ ವೈಪ್ಯರೀತ್ಯದಿಂದ ಕೃಷಿ ವಲಯದಲ್ಲಿ ಹಾನಿ, ಸರ್ಕಾರದಿಂದ ಅಗತ್ಯ ಕ್ರಮ-ನರೇಂದ್ರ ಸಿಂಗ್ ತೋಮರ್

12 Dec 2019 | 9:07 PM

ನವದೆಹಲಿ, ಡಿ 12(ಯುಎನ್‍ಐ)- ನೈಸರ್ಗಿಕ ವಿಕೋಪಗಳಿಂದ ಕೃಷಿ ವಲಯದಲ್ಲಿ ವ್ಯಾಪಕ ಹಾನಿಯುಂಟಾಗುತ್ತಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿಂದು ತಿಳಿಸಿದ್ದಾರೆ.

 Sharesee more..
ಹೈದರಾಬಾದ್ ಎನ್ ಕೌಂಟರ್:  ತನಿಖೆಗೆ ವಿಚಾರಣಾ ಆಯೋಗ ನೇಮಿಸಿದ ಎಸ್ ಸಿ

ಹೈದರಾಬಾದ್ ಎನ್ ಕೌಂಟರ್: ತನಿಖೆಗೆ ವಿಚಾರಣಾ ಆಯೋಗ ನೇಮಿಸಿದ ಎಸ್ ಸಿ

12 Dec 2019 | 6:11 PM

ನವದೆಹಲಿ, ಡಿ12(ಯುಎನ್ಐ) ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಪೊಲೀಸ್ ಎನ್ ಕೌಂಟರ್ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ಸದಸ್ಯರ ವಿಚಾರಣಾ ಆಯೋಗ ನೇಮಕ ಮಾಡಿದೆ.

 Sharesee more..
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ  ದಾವೆ

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದಾವೆ

12 Dec 2019 | 6:00 PM

ನವದೆಹಲಿ, ಡಿ12(ಯುಎನ್ಐ) ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರದ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ದಾವೆ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ನಿರ್ಧರಿಸಿದೆ.

 Sharesee more..