Saturday, Jan 18 2020 | Time 20:40 Hrs(IST)
 • ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್
 • “ಉತ್ತರ ಕೊಡಿ ಅಮಿತ್ ಶಾ’ ರಾಜ್ಯ ಕಾಂಗ್ರೆಸ್ ನಿಂದ ಸರಣಿ ಟ್ವೀಟ್ ಸವಾಲು
 • ಸಿನಿಮಾ, ದಾರಾವಾಹಿಗಳ ಅಬ್ಬರದ ನಡುವೆಯೂ ರಂಗಭೂಮಿ ಪ್ರೇಕ್ಷಕರಿಗೆ ಕೊರೆತೆಯಾಗಿಲ್ಲ: ಶೇಖ್ ಮಾಸ್ತರ
 • ರಜನಿಕಾಂತ್ ವಿರುದ್ದ ಪ್ರಕರಣ ದಾಖಲು
 • ಪಣಂಬೂರ್‌ ಬೀಚ್‌ನಲ್ಲಿ ಗಮನ ಸೆಳೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
 • ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ: ರಾಜ್ಯದಲ್ಲಿ 64 65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
 • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
 • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
 • ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?
 • ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು ಸುಳ್ಳು ಹೇಳಲು: ಸಿದ್ದರಾಮಯ್ಯ
 • ಸೊಮಾಲಿಯಾ ದಕ್ಷಿಣ ಪ್ರಾಂತ್ಯದಲ್ಲಿ ಸೇನಾ ಪಡೆಗಳಿಂದ 16 ಅಲ್-ಷರಾಬ್ ಉಗ್ರರ ಹತ್ಯೆ
 • ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ಓಪನ್‌ಗೆ ಅರ್ಹತೆ ಪಡೆದ ಪ್ರಜ್ಞೇಶ್ ಗುಣೇಶ್ವರನ್
 • ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ
 • ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಹಾದಿ ತಪ್ಪುವುದಿಲ್ಲ: ಅಮಿತ್ ಷಾ
Sports Share

ಪ್ರೊ ಲೀಗ್: ಭಾರತ ಸವಾಲು ಎದುರಿಸಲಿದೆ ಹಾಲೆಂಡ್

ನವದೆಹಲಿ, ಜ.14 (ಯುಎನ್ಐ)- ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ಹಾಕಿ ತಂಡ, ಮೊದಲ ಬಾರಿಗೆ ಎಫ್‌ಐಹೆಚ್ ಹಾಕಿ ಪ್ರೊ ಲೀಗ್‌ನಲ್ಲಿ ಭಾಗವಹಿಸಲಿದ್ದು, ಜನವರಿ 18 ಮತ್ತು 19 ರಂದು ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ವಿಶ್ವ ಶ್ರೇಯಾಂಕದಲ್ಲಿ ಹಾಲೆಂಡ್ ಮೂರನೇ ಸ್ಥಾನದಲಿದ್ದು, ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಪ್ರೊ ಲೀಗ್‌ನ ಮೊದಲ ಆವೃತ್ತಿಯಲ್ಲಿ ಹಾಲೆಂಡ್ ಮೂರನೇ ಸ್ಥಾನದಲ್ಲಿದ್ದರೆ, ಭಾರತ ತಂಡವು ಪ್ರಸಕ್ತ ವರ್ಷ ಲೀಗ್‌ ಗೆ ಪದಾರ್ಪಣೆ ಮಾಡಲಿದೆ. 15,000 ಪ್ರೇಕ್ಷಕರ ಸಮ್ಮುಖದಲ್ಲಿ ತವರಿನ ಪಂದ್ಯಗಳನ್ನು ಆಡಲಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗಾ ಕ್ರೀಡಾಂಗಣದಲ್ಲಿ ರಷ್ಯಾವನ್ನು ಸುಲಭವಾಗಿ ಸೋಲಿಸುವ ಮೂಲಕ ವಿಶ್ವದ ಐದನೇ ಶ್ರೇಯಾಂಕಿತ ಭಾರತ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆಯಿತು. ಭಾರತ ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಮತ್ತು ಕೊನೆಯ ಬಾರಿಗೆ 1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಆದರೆ ಅಂದಿನಿಂದ ಭಾರತೀಯ ಹಾಕಿ ತನ್ನ ಮೊದಲ ಒಲಿಂಪಿಕ್ ಪದಕಕ್ಕಾಗಿ ಕಾಯುತ್ತಿದೆ.

ಚೀನಾದ ಜಾಂಗ್ ಹುಜೌನ್ ದಲ್ಲಿನ ವುಜಿನ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಹಾಲೆಂಡ್ ತಂಡ ಜನವರಿ 11 ಮತ್ತು 12 ರಂದು ನಡೆದ ಪಂದ್ಯದಲ್ಲಿ ಆತಿಥೇಯ ತಂಡವನ್ನು 3–0 ಮತ್ತು 4–2ರಲ್ಲಿ ಸೋಲಿಸಿತು.

ಭಾರತ ಮತ್ತು ಹಾಲೆಂಡ್ ಕೊನೆಯ ಬಾರಿಗೆ 2018 ರ ವಿಶ್ವಕಪ್‌ನಲ್ಲಿ ಕಳಿಂಗಾ ಕ್ರೀಡಾಂಗಣದಲ್ಲಿ ಆಡಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಭಾರತವನ್ನು ಸೋಲಿಸಿತ್ತು. 2013 ರಿಂದ ಉಭಯ ತಂಡಗಳ ನಡುವಿನ ಕೊನೆಯ 10 ಪಂದ್ಯಗಳಲ್ಲಿ ಹಾಲೆಂಡ್ ಐದು ಮತ್ತು ಭಾರತ ನಾಲ್ಕರಲ್ಲಿ ಜಯಗಳಿಸಿದೆ.

ಯುಎನ್ಐ ವಿಎನ್ಎಲ್ 1829
More News

ಕುಸ್ತಿ: ವಿನೇಶ ಪೋಗಟ್ ಗೆ ಚಿನ್ನ

18 Jan 2020 | 7:33 PM

 Sharesee more..

ನಾಡಕರ್ಣಿ ನಿಧನಕ್ಕೆ ಬಿಸಿಸಿಐ ಸಂತಾಪ

18 Jan 2020 | 7:31 PM

 Sharesee more..
ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?

ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?

18 Jan 2020 | 6:50 PM

ಬೆಂಗಳೂರು, ಜ 18 (ಯುಎನ್ಐ) ಸೀಮಿತ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲೂ ರಾಷ್ಟ್ರೀಯ ತಂಡದ ಆಯ್ಕೆೆದಾರರ ಗಮನ ಸೆಳೆದಿರುವ ಕೆ.ಎಲ್ ರಾಹುಲ್ ಇದೀಗ ಟೆಸ್ಟ್‌ ತಂಡಕ್ಕೂ ಮರಳುವ ಹಾದಿಯಲ್ಲಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿಗೆ ಮರಳುವ ಸಾಧ್ಯತೆ ದಟ್ಟವಾಗಿದೆ.

 Sharesee more..
ಹೊಬರ್ಟ್ ಇಂಟರ್ ನ್ಯಾಷನಲ್ ಟೂರ್ನಿ ಗೆದ್ದ ಸಾನಿಯಾ ಮಿರ್ಜಾ

ಹೊಬರ್ಟ್ ಇಂಟರ್ ನ್ಯಾಷನಲ್ ಟೂರ್ನಿ ಗೆದ್ದ ಸಾನಿಯಾ ಮಿರ್ಜಾ

18 Jan 2020 | 6:18 PM

ನವದೆಹಲಿ, ನ 18 (ಯುಎನ್ಐ) ಭಾರತ ಹಿರಿಯ ಟೆನಿಸ್ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಇಂದಿಲ್ಲಿ ಮುಕ್ತಾಯವಾದ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಮಹಿಳೆಯರ ಡಬಲ್ಸ್ ವಿಬಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

 Sharesee more..