Wednesday, Dec 11 2019 | Time 02:27 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
International Share

ಪೂರ್ವ ಬುರ್ಕಿನಾ ಫಾಸೊದಲ್ಲಿ ಚರ್ಚ್ ಮೇಲೆ ಉಗ್ರರ ದಾಳಿ: ಕನಿಷ್ಠ 14 ಮಂದಿ ಸಾವು

ಮಾಸ್ಕೋ, ಡಿ 2 (ಸ್ಪುಟ್ನಿಕ್)-ಆಫ್ರಿಕಾದ ಬುರ್ಕಿನಾ ಫಾಸೊದ ಪೂರ್ವ ಭಾಗದಲ್ಲಿ ಉಗ್ರರು ಭಾನುವಾರ ಚರ್ಚ್ ಮೇಲೆ ದಾಳಿ ನಡೆಸಿ ಕನಿಷ್ಠ 14 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬುರ್ಕಿನಾ ಫಾಸೊ ಅವರ ಇನ್ಫೋವಾಕಟ್ ಸುದ್ದಿವಾಹಿನಿಯ ಪ್ರಕಾರ, ಬಂದೂಕುಧಾರಿಗಳ ಉಗ್ರ ಗುಂಪು ಫೌಟೌರಿ ವಿಭಾಗದಲ್ಲಿರುವ ಚರ್ಚ್‌ಗೆ ನುಗ್ಗಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಮನೋಸೋಚ್ಛೆ ಗುಂಡು ಹಾರಿಸಿದೆ.
ಇದಲ್ಲದೆ, ಅಪರಿಚಿತ ಉಗ್ರರು ದಾಳಿ ಚರ್ಚ್‌ನಿಂದ ಸ್ವಲ್ಪ ದೂರದಲ್ಲಿನ ಭದ್ರತಾ ಪಡೆಗಳ ನೆಲೆಗಳ ಮೇಲೂ ದಾಳಿ ನಡೆಸಿ ಮೂವರು ಅಧಿಕಾರಿಗಳನ್ನು ಕೊಂದಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರರ ಸಂಘಟನೆ ಹೊತ್ತಿಲ್ಲ.

ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ (ಎರಡೂ ಸಂಘಟನೆಗಳನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ)ಗಳೊಂದಿಗೆ ನಂಟು ಹೊಂದಿರುವ ಇಸ್ಲಾಮಿಸ್ಟ್ ಗುಂಪುಗಳ ಕೃತ್ಯಗಳಿಂದ ಬುರ್ಕಿನಾ ಫಾಸೊ 2016 ರಿಂದ ನಲುಗುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಯುಎನ್‍ಐ ಎಸ್‍ಎಲ್‍ಎಸ್ 0800
More News
ಜ್ವಾಲಾಮುಖಿ ಸ್ಫೋಟಕ್ಕೆ ಕನಿಷ್ಠ  24  ಸಾವು,  ಹಲವರ ನಾಪತ್ತೆ ?

ಜ್ವಾಲಾಮುಖಿ ಸ್ಫೋಟಕ್ಕೆ ಕನಿಷ್ಠ 24 ಸಾವು, ಹಲವರ ನಾಪತ್ತೆ ?

10 Dec 2019 | 8:01 PM

ವೆಲಿಂಗ್ಟನ್ , ಡಿ10 (ಯುಎನ್ಐ) ನ್ಯೂಜಿಲೆಂಡಿನಲ್ಲಿ ಪ್ರಸಿದ್ಧ ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟ ದುರಂತದಲ್ಲಿ , ಕನಿಷ್ಠ 24 ಜನರು ಮೃತಪಟ್ಟಿದ್ದಾರೆ ಎಂದೂ ಶಂಕಿಸಲಾಗಿದ್ದು , ಹಲವರು ಕಾಣೆಯಾಗಿದ್ದಾರೆ, ಇನ್ನು ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

 Sharesee more..

ಚಿಲಿ ವಾಯುಪಡೆಯ ವಿಮಾನ ಪತನ

10 Dec 2019 | 10:15 AM

 Sharesee more..