Saturday, Aug 15 2020 | Time 10:05 Hrs(IST)
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
International Share

ಪೂರ್ವ ಬುರ್ಕಿನಾ ಫಾಸೊದಲ್ಲಿ ಚರ್ಚ್ ಮೇಲೆ ಉಗ್ರರ ದಾಳಿ: ಕನಿಷ್ಠ 14 ಮಂದಿ ಸಾವು

ಮಾಸ್ಕೋ, ಡಿ 2 (ಸ್ಪುಟ್ನಿಕ್)-ಆಫ್ರಿಕಾದ ಬುರ್ಕಿನಾ ಫಾಸೊದ ಪೂರ್ವ ಭಾಗದಲ್ಲಿ ಉಗ್ರರು ಭಾನುವಾರ ಚರ್ಚ್ ಮೇಲೆ ದಾಳಿ ನಡೆಸಿ ಕನಿಷ್ಠ 14 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬುರ್ಕಿನಾ ಫಾಸೊದಲ್ಲಿನ ಇನ್ಫೋವಾಕಟ್ ಸುದ್ದಿವಾಹಿನಿಯ ಪ್ರಕಾರ, ಬಂದೂಕುಧಾರಿಗಳ ಉಗ್ರರ ಗುಂಪು ಫೌಟೌರಿ ವಿಭಾಗದಲ್ಲಿರುವ ಚರ್ಚ್‌ಗೆ ನುಗ್ಗಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಮನೋಸೋಚ್ಛೆ ಗುಂಡು ಹಾರಿಸಿದೆ.
ಇದಲ್ಲದೆ, ಅಪರಿಚಿತ ಉಗ್ರರು ದಾಳಿ ಚರ್ಚ್‌ನಿಂದ ಸ್ವಲ್ಪ ದೂರದಲ್ಲಿನ ಭದ್ರತಾ ಪಡೆಗಳ ನೆಲೆಗಳ ಮೇಲೂ ದಾಳಿ ನಡೆಸಿ ಮೂವರು ಅಧಿಕಾರಿಗಳನ್ನು ಕೊಂದಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರರ ಸಂಘಟನೆ ಹೊತ್ತಿಲ್ಲ.

ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ (ಎರಡೂ ಸಂಘಟನೆಗಳನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ)ಗಳೊಂದಿಗೆ ನಂಟು ಹೊಂದಿರುವ ಇಸ್ಲಾಮಿಸ್ಟ್ ಗುಂಪುಗಳ ಕೃತ್ಯಗಳಿಂದ ಬುರ್ಕಿನಾ ಫಾಸೊ 2016 ರಿಂದ ನಲುಗುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಯುಎನ್‍ಐ ಎಸ್‍ಎಲ್‍ಎಸ್ 0800
More News
ಕಮಲಾ ಹ್ಯಾರಿಸ್ ಪೌರತ್ವ ಮತ್ತು ಅರ್ಹತೆ ಪ್ರಶ್ನಿಸಿದ ಟ್ರಂಪ್

ಕಮಲಾ ಹ್ಯಾರಿಸ್ ಪೌರತ್ವ ಮತ್ತು ಅರ್ಹತೆ ಪ್ರಶ್ನಿಸಿದ ಟ್ರಂಪ್

14 Aug 2020 | 6:01 PM

ವಾಷಿಂಗ್ಟನ್, ಆ 14 (ಯುಎನ್ಐ) ಸೆನೆಟರ್ ಕಮಲಾ ಹ್ಯಾರಿಸ್ ಅವರ ಜನ್ಮಸ್ಥಳ ಮತ್ತು ಅರ್ಹತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ಒಂದು ವೇಳೆ ಕಮಲಾ ಹ್ಯಾರಿಸ್ ಆಯ್ಕೆಯಾದಲ್ಲಿ, ಅಮೆರಿಕದ ಮೊದಲ ಕಪ್ಪು ಮತ್ತು ಏಷ್ಯನ್ ಉಪಾಧ್ಯಕ್ಷರಾಗುತ್ತಾರೆ.

 Sharesee more..
ಕೊರೊನಾ ಲಸಿಕೆ ಕುರಿತು ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಡಬ್ಲ್ಯುಎಚ್‌ಒ

ಕೊರೊನಾ ಲಸಿಕೆ ಕುರಿತು ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಡಬ್ಲ್ಯುಎಚ್‌ಒ

14 Aug 2020 | 5:52 PM

ಮಾಸ್ಕೊ, ಆ.14 (ಯುಎನ್ಐ)- ಕೊರೊನಾ ವೈರಸ್ (ಕೋವಿಡ್ -19) ಲಸಿಕೆ ಬಗ್ಗೆ ಮಾಹಿತಿ ಪಡೆಯಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಶುಕ್ರವಾರ ಡಬ್ಲ್ಯುಎಚ್‌ಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Sharesee more..