Monday, Feb 24 2020 | Time 16:34 Hrs(IST)
 • ಮಹದಾಯಿ ತೀರ್ಪು: ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಎಚ್ ಕೆ ಪಾಟೀಲ್ ಸರ್ಕಾರಕ್ಕೆ ಒತ್ತಾಯ
 • ಟ್ರಂಪ್ ಭೇಟಿ ಹಿನ್ನೆಲೆ-ಕಾಶ್ಮೀರದಾದ್ಯಂತ ಭದ್ರತಾಪಡೆ ಹದ್ದಿನ ಕಣ್ಣು
 • ಕೆ2 ಸಮಸ್ಯೆಯಿಂದ ಶಿಕ್ಷಕರ ವೇತನ ವಿಳಂಬ: ರಮೇಶ್ ಬಾಬು ಆರೋಪ
 • ಭೂಗತ ಪಾತಕಿ ರವಿ ಪೂಜಾರಿಗೆ ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ
 • ಗೌತಮ್ ಸ್ಪಿನ್ ಮೋಡಿ : ಸತತ ಮೂರನೇ ಬಾರಿ ಸೆಮಿಫೈನಲ್ ತಲುಪಿದ ಕರ್ನಾಟಕ
 • ಮೂರು ಶತಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ನಾಳೆ ಸಹಿ: ಟ್ರಂಪ್
 • ಬನ್ನೇರುಘಟ್ಟ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕುಗ್ಗಿಸುವ ಪ್ರಸ್ತಾವನೆಗೆ ಬೆಂಗಳೂರು ಪ್ರತಿಷ್ಠಾನ ವಿರೋಧ
 • ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ
 • ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ನೂರು ಕೋಟಿ : ದೇಶಕ್ಕೆ ಲಾಭವಿಲ್ಲ -ರಾಜ್ಭರ್
 • ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಯುವಜನತೆಗೆ ಉಪರಾಷ್ಟ್ರಪತಿ ಕರೆ
 • ಡಿ ವೈ ಪಾಟೀಲ್ ಟಿ20 ಆಡಲು ಸಜ್ಜಾದ ಹಾರ್ದಿಕ್ ಪಾಂಡ್ಯ
 • ಕಾರನ್ನು ವಿದ್ಯುತ್ ಕಂಬಕ್ಕೆ ಗುದ್ದಿ, ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾದ ಶಾಸಕರ ಮೊಮ್ಮಗ
 • ರಸ್ತೆ ಅಪಘಾತ: ಇಬ್ಬರು ಸಾವು
 • ವಿಚಾರಣೆಗೆ ಹಾಜರಾಗುವಂತೆ ವಾರಿಸ್ ಪಠಾಣ್ ಗೆ ನೋಟಿಸ್
 • ಟ್ರಂಪ್ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ: ಸಿದ್ದರಾಮಯ್ಯ
National Share

ಪುಲ್ವಾಮಾ ಹುತಾತ್ಮರಿಗೆ ರಾಹುಲ್ ಗಾಂಧಿ ಶ್ರದ್ಧಾಂಜಲಿ, ಕೇಂದ್ರದ ವಿರುದ್ಧ ವಾಗ್ದಾಳಿ

ಪುಲ್ವಾಮಾ ಹುತಾತ್ಮರಿಗೆ ರಾಹುಲ್ ಗಾಂಧಿ ಶ್ರದ್ಧಾಂಜಲಿ, ಕೇಂದ್ರದ ವಿರುದ್ಧ ವಾಗ್ದಾಳಿ
ಪುಲ್ವಾಮಾ ಹುತಾತ್ಮರಿಗೆ ರಾಹುಲ್ ಗಾಂಧಿ ಶ್ರದ್ಧಾಂಜಲಿ, ಕೇಂದ್ರದ ವಿರುದ್ಧ ವಾಗ್ದಾಳಿ

ನವದೆಹಲಿ, ಫೆ 14(ಯುಎನ್ಐ) ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಈ ದಾಳಿಯಿಂದ ಯಾರು ಲಾಭ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಈ ದಾಳಿಯಿಂದ ಯಾರು ಲಾಭ ಪಡೆದಿದ್ದಾರೆ ಮತ್ತು ವಿಚಾರಣೆಯ ಫಲಿತಾಂಶ ಏನು ಎಂದಿದ್ದಾರೆ.

“ಇಂದು ನಾವು ಪುಲ್ವಾಮಾ ದಾಳಿಯಲ್ಲಿ ನಮ್ಮ 40 ಸಿಆರ್‌ಪಿಎಫ್ ಹುತಾತ್ಮರನ್ನು ನೆನಪಿಸಿಕೊಳ್ಳುತ್ತ, ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು? ದಾಳಿಯ ವಿಚಾರಣೆಯ ಫಲಿತಾಂಶ ಏನು? ದಾಳಿಗೆ ಅವಕಾಶ ನೀಡಿದ ಭದ್ರತಾ ಕೊರತೆಗಳಿಗೆ ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆಗಾರರಾಗಿದ್ದಾರೆ? ”ಎಂದು ರಾಹುಲ‍್ ಗಾಂಧಿ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

2019 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪಾಕಿಸ್ತಾನ ಬೆಂಬಲಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಕ್ಕೂ ಹೆಚ್ಚು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗಳು ಸಾವನ್ನಪ್ಪಿದರು, ಇದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು.

ತರುವಾಯ, ಫೆಬ್ರವರಿ 26 ರಂದು, ಭಾರತೀಯ ವಾಯುಪಡೆ (ಐಎಎಫ್) ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಯೋತ್ಪಾದನಾ ನಿಗ್ರಹ ದಾಳಿಯನ್ನು ಪ್ರಾರಂಭಿಸಿತು.

ಭೀಕರ ಭಯೋತ್ಪಾದಕ ದಾಳಿಯ ಆಧಾರದ ಮೇಲೆ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎಂಬ ಅಂಶವನ್ನು ರಾಹುಲ್ ಗಾಂಧಿ ಪರೋಕ್ಷವಾಗಿ ಈ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸಹ ಪುಲ್ವಾಮಾ ಹುತಾತ್ಮರಿಗೆ ಗೌರವ ಸಲ್ಲಿಸಿ, “ಒಂದು ವರ್ಷದ ಹಿಂದೆ ನಾವು ಪುಲ್ವಾಮಾದಲ್ಲಿ 40 ಕ್ಕೂ ಹೆಚ್ಚು ಕೆಚ್ಚೆದೆಯ ಯೋಧರನ್ನು ಭಯಾನಕ ಹಿಂಸೆ ಮತ್ತು ದ್ವೇಷಕ್ಕೆ ಕಳೆದುಕೊಂಡಿದ್ದೇವೆ. ಇಂದು ನಾವು ನಮ್ಮ ಹುತಾತ್ಮರನ್ನು ಗೌರವಿಸುತ್ತೇವೆ ಮತ್ತು ಅವರ ಅಪಾರ ಶೌರ್ಯ ಮತ್ತು ಸಮರ್ಪಣೆಗೆ ಗೌರವ ಸಲ್ಲಿಸುತ್ತೇವೆ. ಜೈ ಹಿಂದ್ ” ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದೆ.ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಗೌರವ ಸಲ್ಲಿಸಿ, “ಅವರು ನಮ್ಮ ರಾಷ್ಟ್ರದ ಸೇವೆ ಮತ್ತು ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು. ಭಾರತವು ಅವರ ಹುತಾತ್ಮತೆಯನ್ನು ಎಂದಿಗೂ ಮರೆಯುವುದಿಲ್ಲ ”. ಎಂದಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1145

More News
ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ

ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ

24 Feb 2020 | 3:59 PM

ಅಹಮದಾಬಾದ್, ಫೆ 24 (ಯುಎನ್ಐ)- ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಸೋಮವಾರ ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು

 Sharesee more..
ಅಹಮದಾಬಾದ್ ನಲ್ಲಿ ಡೊನಾಲ್ಡ್ ಟ್ರಂಪ್ ಬೃಹತ್ ರೋಡ್ ಶೋ: ಸಬರಮತಿ ಆಶ್ರಮಕ್ಕೆ ಭೇಟಿ

ಅಹಮದಾಬಾದ್ ನಲ್ಲಿ ಡೊನಾಲ್ಡ್ ಟ್ರಂಪ್ ಬೃಹತ್ ರೋಡ್ ಶೋ: ಸಬರಮತಿ ಆಶ್ರಮಕ್ಕೆ ಭೇಟಿ

24 Feb 2020 | 3:45 PM

ಅಹಮದಾಬಾದ್, ಫೆ 24 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಮತ್ತು ವರ್ಣರಂಜಿತ ಸ್ವಾಗತ ಪಡೆಯುವುದರ ಮೂಲಕ ತಮ್ಮ ಮೊದಲ ಅಧಿಕೃತ ಭಾರತ ಭೇಟಿಯನ್ನು ಆರಂಭಿಸಿದರು.

 Sharesee more..