Friday, Apr 10 2020 | Time 09:00 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
National Share

ಬಡವರು, ದಿನಗೂಲಿ ನೌಕರರರಿಗೆ ಡಿಬಿಟಿ ಮೂಲಕ ಆರ್ಥಿಕ ನೆರವು ಕೊಡಿ:ರಾಹುಲ್

ನವದೆಹಲಿ, ಮಾ 25 (ಯುಎನ್ಐ) ಕರೋನ ಸೋಂಕಿನ ಕಾರಣದಿಂದಾಗಿ ಬಡವರು ಮತ್ತು ದಿನಗೂಲಿ ನೌಕರರರಿಗೆ ಅನುಕೂಲವಾಗುವಂತೆ ನೇರ ನಗದು ವರ್ಗಾವಣೆಯ ಮೂಲಕ ತಕ್ಷಣದ ಆರ್ಥಿಕ ನೆರವು ನೀಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಒತ್ತಾಯಿಸಿದ್ದಾರೆ.
ಇದನ್ನು ವಿಳಂಬ ಮಾಡುವುದರಿಂದ ವ್ಯಾಪಕ ವಿನಾಶ ಮತ್ತು ಅವ್ಯವಸ್ಥೆ ಉಂಟಾಗುತ್ತದೆ.
ಎಂದು ಹೇಳಿದ್ದಾರೆ .
ಕರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರಿ ಉದ್ಯೋಗ ನಷ್ಟವನ್ನು ತಡೆಗಟ್ಟಲು ಹೆಣಗಾಡುತ್ತಿರುವ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ಮತ್ತು ಆರ್ಥಿಕ ಸಹಾಯವನ್ನು ಘೋಷಿಸಲು ಸರ್ಕಾರ ಶೀಘ್ರವಾಗಿಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ .
"ಭಾರತವು ಕರೋನ ವಿರುದ್ಧ ಸಮರ ಸಾರಿದೆ ಈ ಯುದ್ಧದಲ್ಲಿ ನಾವು ಹೇಗೆ ಸಾವುನೋವುಗಳನ್ನು ಕಡಿಮೆ ಮಾಡಬಹುದು? ನಮ್ಮ ತಂತ್ರವು ಕೋವಿಡ್ -19 ಅನ್ನು ನಿಭಾಯಿಸುವುದು ಮತ್ತು ವೈರಸ್ ಅನ್ನು ಪ್ರತ್ಯೇಕಿಸಿ ಅದರಿಂದ ಪಾರಾಗುವ ಗುರಿ ಹೊಂದಿರಬೇಕು ಕರೋನ ಸೋಂಕು ಗುರುತಿಸುವ ಪರೀಕ್ಷೆಯನ್ನು ನಡೆಸಲು ದೊಡ್ಡ ಮಟ್ಟದಲ್ಲಿಲ್ಯಾಬ್ ತೆರೆಯಬೇಕು ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ರೋಗಿಗಳಿಗೆ ಆರೈಕೆ ಮಾಡಲು ಪೂರ್ಣ ಐಸಿಯು ಸಾಮರ್ಥ್ಯ ಹೊಂದಿರುವ ಬೃಹತ್ ತುರ್ತು ಆಸ್ಪತ್ರೆಗಳನ್ನು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಯುಎನ್ಐ ಕೆಎಸ್ಆರ್ 2130
More News
ತಮಿಳುನಾಡಿನಲ್ಲಿ ಕೊರೊನವೈರಸ್‍ನ ಹೊಸ 96 ಪ್ರಕರಣಗಳು ದೃಢ, ಒಟ್ಟು ಸೋಂಕಿತರ ಸಂಖ್ಯೆ 834ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಕೊರೊನವೈರಸ್‍ನ ಹೊಸ 96 ಪ್ರಕರಣಗಳು ದೃಢ, ಒಟ್ಟು ಸೋಂಕಿತರ ಸಂಖ್ಯೆ 834ಕ್ಕೆ ಏರಿಕೆ

09 Apr 2020 | 10:03 PM

ಚೆನ್ನೈ, ಏಪ್ರಿಲ್ 9 (ಯುಎನ್‌ಐ) ತಮಿಳುನಾಡಿನಲ್ಲಿ ಕೊರೊನಾವೈರಸ್ ಪ್ರಕರಣಗಳ ಏರಿಕೆ ತೀವ್ರಗತಿಯಲ್ಲಿ ಮುಂದುವರೆದಿದ್ದು, ಒಂದೇ ದಿನದಲ್ಲಿ 96 ಜನರಿಗೆ ಸೋಂಕು ದೃಢಪಡುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 834 ಕ್ಕೆ ಏರಿದೆ.

 Sharesee more..
ಲಾಕ್ ಡೌನ್; 8 5 ಲಕ್ಷಕ್ಕೂ ಹೆಚ್ಚಿನ ಬೇಯಿಸಿದ ಆಹಾರ ಪೂರೈಕೆ ಮಾಡಿದ ರೈಲ್ವೆ

ಲಾಕ್ ಡೌನ್; 8 5 ಲಕ್ಷಕ್ಕೂ ಹೆಚ್ಚಿನ ಬೇಯಿಸಿದ ಆಹಾರ ಪೂರೈಕೆ ಮಾಡಿದ ರೈಲ್ವೆ

09 Apr 2020 | 9:45 PM

ನವದೆಹಲಿ, ಏ 9 (ಯುಎನ್ಐ) ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಭಾರತೀಯ ರೈಲ್ವೆ ಬಡವರಿಗೆ ಒಟ್ಟು 8.5 ಲಕ್ಷ ತಯಾರಿಸಿದ ಆಹಾರಗಳನ್ನು ವಿತರಿಸಿದೆ.

 Sharesee more..
ಜಮ್ಮು ಕಾಶ್ಮೀರದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಪುನಾರಂಭ ಕೋರಿಕೆ; ನೋಟಿಸ್ ಜಾರಿ

ಜಮ್ಮು ಕಾಶ್ಮೀರದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಪುನಾರಂಭ ಕೋರಿಕೆ; ನೋಟಿಸ್ ಜಾರಿ

09 Apr 2020 | 9:34 PM

ನವದೆಹಲಿ, ಏ 9 (ಯುಎನ್ಐ) ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳು, ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಇತರರಿಗೆ ನೆರವಾಗಲು ಜಮ್ಮು ಕಾಶ್ಮೀರದಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಪುನಾರಂಭಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಅಲ್ಲಿನ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

 Sharesee more..
ಕೋವಿಡ್; ದೇಶದಲ್ಲಿ ಒಂದೇ ದಿನದಲ್ಲಿ 663 ಹೊಸ ಪ್ರಕರಣ, 20 ಸಾವು; ಒಟ್ಟು 5865 ಸೋಂಕಿತರು

ಕೋವಿಡ್; ದೇಶದಲ್ಲಿ ಒಂದೇ ದಿನದಲ್ಲಿ 663 ಹೊಸ ಪ್ರಕರಣ, 20 ಸಾವು; ಒಟ್ಟು 5865 ಸೋಂಕಿತರು

09 Apr 2020 | 8:57 PM

ನವದೆಹಲಿ, ಏ 9 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 663 ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ.

 Sharesee more..