Monday, Jul 13 2020 | Time 02:08 Hrs(IST)
Sports Share

ಬೆಂಗಳೂರು ದೇಹದಾರ್ಢ್ಯ ಫಿಟ್‌ನೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರೋ. ನರಸಿಂಹರಾವ್ ನಿಧನ

ಬೆಂಗಳೂರು, ಜೂ 30 [ಯುಎನ್ಐ] ಬೆಂಗಳೂರು ದೇಹದಾರ್ಢ್ಯ ಫಿಟ್‌ನೆಟ್ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಈಜು ಮತ್ತು ದೇಹದಾರ್ಢ್ಯ ಕ್ರೀಡೆಗಳಲ್ಲಿ ರೆಫರಿಯಾಗಿದ್ದ ಪ್ರೊ. ನರಸಿಂಹರಾವ್ ಬೆಂಗಳೂರಿನಲ್ಲಿ ನಿನ್ನೆ ನಿಧನರಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು.
ಎಂ.ಇ.ಎಸ್. ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಅವರು ಕ್ರೀಡಾ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ಬೆಂಗಳೂರಿನ ಸೆಂಚೂರಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಬೆಂಗಳೂರು ಪ್ರೆಸ್ ಕ್ಲಬ್ ನ ಸದಸ್ಯರಾಗಿ ಹಲವು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಯುಎನ್ಐ ವಿಎನ್ 0828
More News
ವಿವಿಧ ರಾಜ್ಯಗಳ ಕ್ರೀಡಾ ಸಚಿವರೊಂದಿಗೆ ರಿಜಿಜು 2 ದಿನ ವಿಡಿಯೋ ಕಾನ್ಫರೆನ್ಸ್

ವಿವಿಧ ರಾಜ್ಯಗಳ ಕ್ರೀಡಾ ಸಚಿವರೊಂದಿಗೆ ರಿಜಿಜು 2 ದಿನ ವಿಡಿಯೋ ಕಾನ್ಫರೆನ್ಸ್

12 Jul 2020 | 8:53 PM

ನವದೆಹಲಿ, ಜುಲೈ 12 (ಯುಎನ್ಐ) ದೇಶಾದ್ಯಂತ ಕ್ರೀಡೆಗಳನ್ನು ಬೇರು ಮಟ್ಟದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಸಂಬಂದಿಸಿದಂತೆ ನೀಲನಕ್ಷೆ ಸಿದ್ಧಪಡಿಸಲು ಹಾಗೂ ನೆಹರೂ ಯುವ ಕೇಂದ್ರ ಸಂಘಟನೆ (ಎನ್ ವೈಕೆಎಸ್)ಯ ಚಟುವಟಿಕೆಗಳನ್ನು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕುರಿತು ಸಮಾಲೋಚನೆ ನಡೆಸುವುದಕ್ಕಾಗಿ ಕೇಂದ್ರ ಕ್ರೀಡಾ ಸಚಿವಾ ಕಿರಣ್ ರಿಜಿಜು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಸಚಿವರೊಂದಿಗೆ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಸಭೆ ನಡೆಸಲಿದ್ದಾರೆ.

 Sharesee more..