Thursday, Aug 22 2019 | Time 15:05 Hrs(IST)
 • ವಿಚಾರಣೆಗೆ ಅಸಹಕಾರ: ಚಿದು ಬಂಧನ ಅವಧಿ ವಿಸ್ತರಿಸಲು ಸಿಬಿಐ ಕೋರಿಕೆ ಸಾಧ್ಯತೆ
 • ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ-ಎಚ್ ಡಿ ದೇವೇಗೌಡ
 • ಇಸ್ರೋ ಮುಖ್ಯಸ್ಥ ಸಿವನ್ ಗೆ, ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ
 • ಮಾದಕ ವಸ್ತು ಮಾರಾಟ ಯತ್ನ: ವ್ಯಕ್ತಿ ಬಂಧನ
 • ಕೋಕೇನ್ ಮಾರಾಟ: ನೈಜೀರಿಯಾ ದೇಶದ ನಾಗರಿಕನ ಬಂಧನ
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
 • ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಆರೋಪ
National Share

ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಬಿಡುಗಡೆ: ವಿಳಂಬಕ್ಕೆ ಕೋರ್ಟ್ ತರಾಟೆ

ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಬಿಡುಗಡೆ: ವಿಳಂಬಕ್ಕೆ ಕೋರ್ಟ್ ತರಾಟೆ
ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಬಿಡುಗಡೆ: ವಿಳಂಬಕ್ಕೆ ಕೋರ್ಟ್ ತರಾಟೆ

ನವದೆಹಲಿ, ಮೇ 15 (ಯುಎನ್ ಐ ) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರೂಪದ ಚಿತ್ರ ಪೋಸ್ಟ್‌ ಮಾಡಿದ ಆರೋಪದ ಮೇರೆಗೆ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಪಶ್ಚಿಮ ಬಂಗಾಳ ಸರಕಾರವು ಬುಧವಾರ ಬಿಡುಗಡೆ ಮಾಡಿದೆ.

ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸುಪ್ರಿಂಕೋರ್ಟ್ ಆದೇಶ ಮಾಡಿತ್ತು. ಆದರೆ ವಿಳಂಬ ಮಾಡಿದ ರಾಜ್ಯ ಸರ್ಕಾರದ ನಡೆಗೂ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು

ಶರ್ಮಾ ಅವರ ಪರ ವಕೀಲ ನೀರಜ್ ಕಿಶನ್ ಕೌಲ್ ಅವರು ಕೋರ್ಟ್ ಆದೇಶದಂತೆ ತಮ್ಮ ಕಕ್ಷಿದಾರರನ್ನು ಮಂಗಳವಾರ ಬಿಡುಗಡೆ ಮಾಡದೆ ವಿಳಂಬ ಮಾಡಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ತಕ್ಷಣವೇ ಬಿಜೆಪಿ ಯುವ ನಾಯಕಿಯನ್ನು ಬಿಡುಗಡೆ ಮಾಡಿ ಎಂದು ನ್ಯಾಯಾಲಯ ಆದೇಶ ನೀಡಿತು. ಬಳಕ ಸರ್ಕಾರ ಇಂದು ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಿದೆ.

ಇದು ನ್ಯಾಯಾಲಯದ ಆದೇಶಕ್ಕೆ ಮಾಡಿದ ಅಗೌರವ, ಆದೇಶ ನೀಡಿದ 22 ಗಂಟೆಗಳ ನಂತರವೂ ಏಕೆ ಪಾಲನೆ ಮಾಡಿಲ್ಲ ಎಂದು ಶರ್ಮಾ ಪರ ವಕೀಲ ನ್ಯಾಯಪೀಠದ ಗಮನಕ್ಕೆ ತಂದರು.

ಇದು ಸರಿಯಲ್ಲ, ನಮ್ಮ ಆದೇಶದ ನಂತರವೂ ಜೈಲಿನಲ್ಲಿ ಅಕ್ರಮವಾಗಿ ಇಟ್ಟಿದ್ದು ತಪ್ಪು ಎಂದು ಹೇಳಿದ ನ್ಯಾಯಮೂರ್ತಿ ಬ್ಯಾನರ್ಜಿ, ರಾಜ್ಯ ಸರ್ಕಾರದ ನಡೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.

ಶರ್ಮಾ ತನ್ನ ಬಿಡುಗಡೆಯ ನಂತರ ಕ್ಷಮೆ ಕೋರಬೇಕು ಎಂದು ಉನ್ನತ ನ್ಯಾಯಾಲಯದ ಆದೇಶವು ಹೇಳಿತ್ತು

ನ್ಯಾಯಮೂರ್ತಿ ಬ್ಯಾನರ್ಜಿ ನೇತೃತ್ವದ ಪೀಠ ಶರ್ಮಾ ಬಿಡುಗಡೆಯ ನಂತರ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು ಎಂದು ಕಟ್ಟಪ್ಪಣೆ ಮಾಡಿತ್ತು.

ಯುಎನ್ಐ ಕೆಎಸ್ಆರ್ ಎ ಎಚ್ 1430

More News

ನೂತನ ಗೃಹ ಕಾರ್ಯದರ್ಶಿಯಾಗಿ ಅಜಯ್ ಕುಮಾರ್

22 Aug 2019 | 2:43 PM

 Sharesee more..
ಕಾನೂನಿನ ಮೇಲೆ ವಿಶ್ವಾಸವಿದೆ, ಚಿದಂಬರಂ ಬೆಂಬಲಕ್ಕೆ ನಾವಿದ್ದೇವೆ: ಕಾಂಗ್ರೆಸ್

ಕಾನೂನಿನ ಮೇಲೆ ವಿಶ್ವಾಸವಿದೆ, ಚಿದಂಬರಂ ಬೆಂಬಲಕ್ಕೆ ನಾವಿದ್ದೇವೆ: ಕಾಂಗ್ರೆಸ್

22 Aug 2019 | 2:22 PM

ನವದೆಹಲಿ, ಆ 22 (ಯುಎನ್ಐ) ದೇಶದ ಹಿರಿಯ ರಾಜಕಾರಣಿ, ಮಾಜಿ ಸಚಿವರನ್ನು ಮಧ್ಯರಾತ್ರಿಯಲ್ಲಿ ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮ, ವೈಯಕ್ತಿಕ ಪ್ರತೀಕಾರ ಹಾಗೂ ರಾಜಕೀಯ ಪ್ರೇರಿತ ಎಂದು ಕಿಡಿಕಾರಿರುವ ಕಾಂಗ್ರೆಸ್, ಕಾನೂನಿನ ಮೇಲೆ ವಿಶ್ವಾಸವಿದ್ದು, ಚಿದಂಬರಂ ಬೆಂಬಲಕ್ಕಿದ್ದೇವೆ ಎಂದು ತಿಳಿಸಿದೆ

 Sharesee more..