Tuesday, Jan 21 2020 | Time 22:44 Hrs(IST)
 • ಸೌಹಾರ್ದತೆಯನ್ನು ಕೆಡಿಸುವ ರೇಣುಕಾಚಾರ್ಯ ಹೇಳಿಕೆ: ಎಸ್‍ಡಿಪಿಐ
 • ವುಹಾನ್‌ ವೈರಸ್‌: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
Sports Share

ಬುಧವಾರದಿಂದ ಶ್ರೀಲಂಕಾ-ನ್ಯೂಜಿಲೆಂಡ್ ಮೊದಲ ಟೆಸ್ಟ್

ಗಾಲೆ, ಆ 13 (ಯುಎನ್ಐ)- ಬಾಂಗ್ಲಾದೇಶದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಉತ್ಸಾಹದಲ್ಲಿರುವ ಶ್ರೀಲಂಕಾ ತಂಡ, ಬುಧವಾರದಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಚೇತೋಹಾರಿ ಪ್ರದರ್ಶನ ಮುಂದುವರೆಸುವ ವಿಶ್ವಾಸ ಹೊಂದಿದೆ.

ಸ್ಪಿನ್ ಸ್ನೇಹಿ ಪಿಚ್ ಇದ್ದು, ದಿಮುತ್ ಕರುಣರತ್ನೆ ಪಡೆ ಮುನ್ನಡೆ ಸಾಧಿಸುವ ಕನಸು ಹೊಂದಿದೆ. 2017ರ ಬಳಿಕ ನ್ಯೂಜಿಲೆಂಡ್ ಒಟ್ಟು 5 ಟೆಸ್ಟ್ ಸರಣಿಗಳನ್ನು ಗೆದ್ದು ಬೀಗಿದೆ. ಆದರೆ, ದ್ವೀಪರಾಷ್ಟ್ರದಲ್ಲಿ ಒಂದೂ ಸರಣಿ ಗೆದ್ದಿಲ್ಲ. ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರ ಪರಿಣಾಮ ನ್ಯೂಜಿಲೆಂಡ್ ತಂಡ 65.5 ಓವರ್ ಬೌಲಿಂಗ್ ಮಾಡಿತ್ತು. ಆದರೆ ಬ್ಯಾಟಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ. ಅಭ್ಯಾಸ ಪಂದ್ಯದಲ್ಲಿ ಕಿವೀಸ್ ಪರ ಅಜಾಜ್ ಪಟೇಲ್ 10 ಓವರ್ ಬೌಲಿಂಗ್ ಮಾಡಿ 41 ರನ್ ನೀಡಿ 5 ವಿಕೆಟ್ ಕಬಳಿಸಿದ್ದು, ಭರವಸೆ ಮೂಡಿಸಿದ್ದಾರೆ.

ಉಭಯ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಟಾರ್ ಆಟಗಾರರನ್ನು ಹೊಂದಿದ್ದು, ಮೊದಲ ದಿನ ಯಾವ ತಂಡದ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಹೆಚ್ಚಿಸಿದೆ.

‘ಯುವ ಆಟಗಾರರಿಗೆ ಆದ್ಯತೆ ನೀಡಿ, ಮುಂದಿನ ಸರಣಿಗೆ ತಯಾರಿ ನಡೆಸುವುದೇ ನಮ್ಮ ಗುರಿ. ತಂಡದಲ್ಲಿದ್ದ ತೊಡಕನ್ನು ಮೆಟ್ಟಿ ನಿಲ್ಲುವ ವಿಶ್ವಾಸವಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ನೆರವಾಗುವ ಅನಿವಾರ್ಯತೆ ಯುವ ಆಟಗಾರರಿಗೆ ಇದೆ ಎಂದು ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ತಿಳಿಸಿದ್ದಾರೆ.
ಯುಎನ್ಐ ವಿಎನ್ಎಲ್ ಕೆಎಸ್ವಿ 2026
More News

ಖೇಲೋ ಇಂಡಿಯಾ: ಹಿತೇನ್, ಸಂಜಯ್ ಗೆ ಬಂಗಾರ

21 Jan 2020 | 8:13 PM

 Sharesee more..

ಆಸ್ಟ್ರೇಲಿಯನ್ ಓಪನ್: ಸಿಮೋನಾ ಗೆಲುವಿನ ಆರಂಭ

21 Jan 2020 | 7:49 PM

 Sharesee more..

ಆಸ್ಟ್ರೇಲಿಯನ್ ಓಪನ್: ನಡಾಲ್ ಶುಭಾರಂಭ

21 Jan 2020 | 7:48 PM

 Sharesee more..