Sunday, Apr 5 2020 | Time 14:33 Hrs(IST)
  • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
  • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
  • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
  • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
  • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
  • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
  • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
  • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
  • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
  • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
  • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
  • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
  • ಬಾಬು ಜಗಜೀವನ್‌ ರಾಮ್‌ ಜಯಂತಿ: ಪ್ರಧಾನಿ ಗೌರವ ಸಲ್ಲಿಕೆ
  • ಕೋವಿಡ್‌-19: ಸೋಂಕು ಪ್ರಕರಣಗಳ ಸಂಖ್ಯೆ 3374ಕ್ಕೇರಿಕೆ: 77 ಸಾವು, 266 ಮಂದಿ ಗುಣಮುಖ
  • ಬಾಬು ಜಗಜೀವನ್‌ ರಾಮ್‌ ಜಯಂತಿ: ಗಣ್ಯರಿಂದ ಗೌರವ ಸಲ್ಲಿಕೆ
Sports Share

ಬ್ಯಾಡ್ಮಿಂಟನ್: ಶ್ರೇಯಾಂಕ ಸ್ಥಿರವಾಗಿಡುವುದರತ್ತ ಚಿತ್ತ

ಟೋಕಿಯೊ, ಮಾ.25 (ಯುಎನ್ಐ)- ಟೋಕಿಯೋ 2020 ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು ಮುಂದೂಡುವ ನಿರ್ಧಾರವನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ (ಬಿಡಬ್ಲ್ಯುಎಫ್) ಸ್ವಾಗತಿಸುತ್ತದೆ. ಅಂತರರಾಷ್ಟ್ರೀಯ ಪಂದ್ಯಾವಳಿಗಳ ಪ್ರಾರಂಭದವರೆಗೂ ವಿಶ್ವ ಶ್ರೇಯಾಂಕಗಳನ್ನು ಸ್ಥಿರವಾಗಿಡುವುದರ ಬಗ್ಗೆ ಚಿಂತನೆ ನಡೆಸಿದೆ.

"ಇಂದು ನಾವು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮತ್ತು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ನಿರ್ಧಾರಕ್ಕೆ ಬೆಂಬಲ ನೀಡುತ್ತೇವೆ. ಮತ್ತು ಟೋಕಿಯೊ 2020 ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು ಮುಂದೂಡುವುದನ್ನು ಸ್ವಾಗತಿಸುತ್ತೇವೆ ಎಂದು ಬಿಡಬ್ಲ್ಯೂಎಫ್ ಹೇಳಿಕೆಯಲ್ಲಿ ತಿಳಿಸಿದೆ. ಈ ಆಟಗಳನ್ನು 2021 ಕ್ಕೆ ಸರಿಸುವ ನಿರ್ಧಾರವನ್ನು ಬಿಡಬ್ಲ್ಯೂಎಫ್ ಬೆಂಬಲಿಸುತ್ತದೆ. "

ಮುಂದಿನ ಹನ್ನೆರಡು ತಿಂಗಳಿನ ಸ್ಥಿತಿಗತಿಗಳನ್ನು ನೋಡುವ ಅವಶ್ಯಕತೆ ಇದೆ. ಇನ್ನು ಆಟಗಾರರಿಗೆ ಇನ್ನು ಹೆಚ್ಚಿನ ಅವಕಾಶ ಸಿಗಬೇಕು. ಅಂತರರಾಷ್ಟ್ರೀಯ ಪಂದ್ಯಾವಳಿಗಳು ಪುನರಾರಂಭವಾಗುವವರೆಗೂ ನಾವು ವಿಶ್ವ ಶ್ರೇಯಾಂಕಗಳನ್ನು ಸ್ಥಗಿತಗೊಳಿಸಬಹುದು, ಆದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಅಂಶಗಳನ್ನು ಸಹ ನಾವು ನೋಡಬೇಕಾಗಿದೆ ಮತ್ತು ಶೀಘ್ರದಲ್ಲೇ ಅದನ್ನು ಪ್ರಕಟಿಸುತ್ತೇವೆ” ಎಂದು ತಿಳಿಸಿದೆ.

ಭಾರತೀಯ ಆಟಗಾರರಾದ ಸೈನಾ ನೆಹ್ವಾಲ್, ಬಿ ಸಾಯಿ ಪ್ರಣೀತ್, ಪರುಪಲ್ಲಿ ಕಶ್ಯಪ್ ಮತ್ತು ಎಚ್.ಎಸ್.ಪ್ರಣಯ್ ಅವರಿಗೆ ಶ್ರೇಯಾಂಕದ ಬಗ್ಗೆ ಆತಂಕ ಹೆಚ್ಚಿದೆ. ವಿಶ್ವ ಶ್ರೇಯಾಂಕದಲ್ಲಿ ಅಗ್ರ -16 ಆಟಗಾರರು ಒಲಿಂಪಿಕ್ಸ್‌ಗೆ ನೇರ ಪ್ರವೇಶವನ್ನು ಪಡೆದರೆ, ಡಬಲ್ಸ್‌ನಲ್ಲಿ ಈ ಕಟ್-ಆಫ್ ಅಗ್ರ -8 ಸ್ಥಾನದಲ್ಲಿದೆ.

ಯುಎನ್ಐ ವಿಎನ್ಎಲ್ 2313