Friday, Apr 10 2020 | Time 08:36 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
business economy Share

ಬ್ರಿಕ್ಸ್ ಸಿಸಿಐ ಅಧ್ಯಕ್ಷರಾಗಿ ಯುಎನ್‍ಐ ಅಧ್ಯಕ್ಷ ವಿಶ್ವಾಸ್ ತ್ರಿಪಾಠಿ ಆಯ್ಕೆ

ಬ್ರಿಕ್ಸ್ ಸಿಸಿಐ ಅಧ್ಯಕ್ಷರಾಗಿ ಯುಎನ್‍ಐ ಅಧ್ಯಕ್ಷ ವಿಶ್ವಾಸ್ ತ್ರಿಪಾಠಿ ಆಯ್ಕೆ
ಬ್ರಿಕ್ಸ್ ಸಿಸಿಐ ಅಧ್ಯಕ್ಷರಾಗಿ ಯುಎನ್‍ಐ ಅಧ್ಯಕ್ಷ ವಿಶ್ವಾಸ್ ತ್ರಿಪಾಠಿ ಆಯ್ಕೆ

ನವದೆಹಲಿ, ಮಾ 25 (ಯುಎನ್‍ಐ) ಯುಎನ್‍ಐ ಸುದ್ದಿ ಸಂಸ್ಥೆ ಅಧ್ಯಕ್ಷ, ಯುಎನ್‍ಐ ನಿರ್ದೇಶಕ ಮಂಡಳಿಯ ಮುಖ್ಯಸ್ಥ ವಿಶ್ವಾಸ್ ತ್ರಿಪಾಠಿ ಅವರು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ವಾಣಿಜ್ಯ ಮತ್ತು ಉದ್ಯಮ (ಬ್ರಿಕ್ಸ್ ಸಿಸಿಐ) ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬ್ರಿಕ್ಸ್ ಸಿಸಿಐ ಬ್ರಿಕ್ಸ್ ನೆರೆಹೊರೆ ಹಾಗೂ ಮಿತ್ರ ರಾಷ್ಟ್ರಗಳ ಜತೆಗೂಡಿ ವಾಣಿಜ್ಯ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುವ ಮೂಲ ಸಂಸ್ಥೆಯಾಗಿದೆ.

ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿ ಚುನಾಯಿತರಾಗಿರುವ ವಿಶ್ವಾಸ್ ತ್ರಿಪಾಠಿ ಹಾಗೂ ಡಾ. ಬಿಬಿಎಲ್ ಮಧುಕರ್, ಇನ್ನಿತರ ಪದಾಧಿಕಾರಿಗಳ ಜತೆ ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸ್ಪರ್ಧಿಯೊಬ್ಬರು ಬ್ರಿಕ್ಸ್ ಸಿಸಿಐ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಉಳಿದೆಲ್ಲ ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಏಪ್ರಿಲ್ 2020 ರಿಂದ ಮಾರ್ಚ್ 2023 ರ ವರೆಗೆ ಅಧಿಕಾರಾವಧಿ ಇರುತ್ತದೆ.

ಅಶೋಕ್ ಕುಮಾರ್ ಸಿಂಗ್ ಮತ್ತು ಸಮೀಪ್ ಶಾಸ್ತ್ರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಜಯ್ ವರ್ಮಾ ವಿತ್ತ ನಿರ್ದೇಶಕ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ. ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿರುವ ಕಾರಣ ಮತಗಳ ಸಂಖ್ಯೆಯನ್ನುಜ ಪರಿಗಣಿಸುವ ಅಗತ್ಯವಿಲ್ಲ ಎಂದು ರಿಟರ್ನಿಂಗ್ ಅಧಿಕಾರಿ ನಿರ್ಮಲ್ ಸಿನ್ಹಾ ಹೇಳಿದ್ದಾರೆ.

ಮುಂದಿನ ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕವನ್ನು ನಿಗದಿತ ಸಮಯದಲ್ಲಿ ಪ್ರಧಾನ ನಿರ್ದೇಶಕರು ಗೊತ್ತುಪಡಿಸಲಿದ್ದಾರೆ.ಬ್ರಿಕ್ಸ್ ಸಿಸಿಐ ಆಡಳಿತ ಮಂಡಳಿಯ ಸದಸ್ಯರಲ್ಲಿ ಪಿಕೆ ಗುಪ್ತಾ, ಡಾ. ಜೆಕೆ ದಾಸ್‍, ಡಾ. ಹೇಮಂತ್ ಗುಪ್ತಾ, ರುಹೇಲ್ ರಂಜನ್, ಅಜಿತ್ ಕುಮಾರ್ ಸಿಂಗ್, ವಿನೋದ್ ಕುಮಾರ್ ವರ್ಮಾ, ನೀತು ಕಿಶೋರ್, ರಾಜೀವ್ ಅಗರ್ ವಾಲ್‍, ಪ್ರೇಮ್ ಪಂಕಜ್, ರಾಜೀವ್ ಸೋಲಂಕಿ ಇದ್ದಾರೆ.

ಅತುಲ್ ಬನ್ಸಾಲ್‍, ಅನಿರುದ್ಧ ರೇ, ಶಬಾನಾ ನಾಸಿಮ್, ರಾಜೇಶ್ ಮೆಹ್ತಾ, ಎಸ್‍ ಕೆ ತ್ರಿಪಾಠಿ, ಶೇಖರ್ ಗುಪ್ತಾ ಮತ್ತು ಸುಶಿ ಸಿಂಗ್ ಕೂಡ ಸದಸ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.ವಾಣಿಜ್ಯ ಮತ್ತು ಉದ್ಯಮ ವಲಯಕ್ಕೆ ಬೆಂಬಲ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಉದ್ದೇಶವನ್ನು ಬ್ರಿಕ್ಸ್ ಸಿಸಿಐ ಹೊಂದಿದೆ. ಎಂಎಸ್‍ಎಂಇ ವಿಭಾಗದಲ್ಲಿ ಎಲ್ಲ ಭೌಗೋಳಿಕ ವಲಯದ ವ್ಯಾಪಾರ ಹಾಗೂ ಯುವೋದ್ಯಮಿಗಳ ಬಗ್ಗೆ ಬ್ರಿಕ್ಸ್ ಸಿಸಿಐ ವಿಶೇಷ ಗಮನ ನೀಡುತ್ತದೆ.

ಎಂಟು ವರ್ಷಗಳ ಹಿಂದೆ 2012ರಲ್ಲಿ ಶ್ರೇಷ್ಠ ವೃತ್ತಿಪರರು ಹಾಗೂ ಉದ್ಯಮಿಗಳ ಪರಿಶ್ರಮದಿಂದ ಸ್ಥಾಪನೆಯಾದ ಬ್ರಿಕ್ಸ್ ಸಿಸಿಐ, ಲಾಭದ ದೃಷ್ಟಿ ಹೊಂದಿಲ್ಲದ ಸರ್ಕಾರೇತರ ಸಂಸ್ಥೆಯಾಗಿದೆ.

ಭಾರತ ಸರ್ಕಾರದ ಸೊಸೈಟಿಗಳ ನೋಂದಣಿ ಕಾಯ್ದೆ 1860ರ ಅಡಿಯಲ್ಲಿ ನೋಂದಣಿಯಾಗಿರುವ ಬ್ರಿಕ್ಸ್ ಸಿಸಿಐ ಸಂಸ್ಥೆ ನೀತಿ ಆಯೋಗದ ಪಟ್ಟಿಗೆ ಸೇರಿರುವುದಲ್ಲದೆ ವಿಶ್ವಸಂಸ್ಥೆಯಿಂದಲೂ ಗುರುತಿಸಲ್ಪಟ್ಟಿದೆ.

ಯುಎನ್‍ಐ ಎಸ್‍ಎ ವಿಎನ್ 1842

More News
ಸೆನ್ಸೆಕ್ಸ್ 868 35 ಅಂಕ ಏರಿಕೆ

ಸೆನ್ಸೆಕ್ಸ್ 868 35 ಅಂಕ ಏರಿಕೆ

09 Apr 2020 | 4:12 PM

ಮುಂಬೈ, ಏಪ್ರಿಲ್ 9 (ಯುಎನ್ಐ) ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸೂಚ್ಯಂಕ, ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 868.35 ಅಂಕ ಏರಿಕೆ ಕಂಡು 30,762.31 ಕ್ಕೆ ತಲುಪಿದೆ.

 Sharesee more..
ಕಡಿಮೆ ವೆಚ್ಚದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ಕಡಿಮೆ ವೆಚ್ಚದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

09 Apr 2020 | 3:42 PM

ಬೆಂಗಳೂರು, ಏ. 9(ಯುಎನ್‌ಐ) ಎಲ್ಲೆಡೆ ಕೊರೊನಾ ವೈರಸ್ ಭೀತಿಯಿದೆ. ಇದು ಹರಡುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು/ ಕೃಷಿಗೆ ಬೇಕಾದ ಬಿತ್ತನೆ ಬೀಜ- ಗೊಬ್ಬರ – ಕೀಟನಾಶಕ – ಯಂತ್ರೋಪಕರಣಗಳ ಮಾರುಕಟ್ಟೆಗಳನ್ನು ಹೆಚ್ಚುಕಾಲ ಸ್ಥಗಿತಗೊಳಿಸುವುದು ಸಾಧ್ಯವಾಗುವುದಿಲ್ಲ

 Sharesee more..
ಲಾಕ್‌ಡೌನ್: ವೈನ್, ಜಾಮ್, ಟೊಮೆಟೊ ಸಾಸ್‍ ತಯಾರಿಸಲು ರೈತರಿಗೆ ಐಸಿಎಆರ್ ಸಲಹೆ

ಲಾಕ್‌ಡೌನ್: ವೈನ್, ಜಾಮ್, ಟೊಮೆಟೊ ಸಾಸ್‍ ತಯಾರಿಸಲು ರೈತರಿಗೆ ಐಸಿಎಆರ್ ಸಲಹೆ

08 Apr 2020 | 6:21 PM

ನವದೆಹಲಿ, ಏಪ್ರಿಲ್ 8 (ಯುಎನ್‌ಐ) ಲಾಕ್‌ಡೌನ್ ಅವಧಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ವೈನ್, ಜಾಮ್, ಜೆಲ್ಲಿ, ಸ್ಕ್ವ್ಯಾಷ್, ಟೊಮೆಟೊ ಸಾಸ್‌ ಮತ್ತಿತರ ಪದಾರ್ಥಗಳನ್ನು ತಯಾರಿಸುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ರೈತರಿಗೆ ಸಲಹೆ ಮಾಡಿದೆ .

 Sharesee more..
ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ

08 Apr 2020 | 5:29 PM

ವಾಷಿಂಗ್ಟನ್, ಏಪ್ರಿಲ್ 8 (ಯುಎನ್‌ಐ) ಮಾರಕ ಕೊರೊನವೈರಸ್ (ಕೊವಿದ್‍ -19) ವಿರುದ್ಧದ ಜಾಗತಿಕ ಹೋರಾಟಕ್ಕೆ ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸೆ ಒಂದು ಶತಕೋಟಿ ಡಾಲರ್‌ ದೇಣಿಗೆ ನೀಡಿದ್ದಾರೆ.

 Sharesee more..