Wednesday, Dec 2 2020 | Time 08:06 Hrs(IST)
International Share

ಬ್ರೆಜಿಲ್ ನಲ್ಲಿ 60 ಲಕ್ಷ ದಾಟಿದ ಕೊರೋನ ಸೋಂಕು ಪ್ರಕರಣಗಳು

ಮಾಸ್ಕೋ, ನವೆಂಬರ್ 21 (ಯುಎನ್ಐ) ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ದೃ ಡಪಡಿಸಿದ ಕರೊನ ಸೋಂಕು ಪ್ರಕರಣಗಳ ಸಂಖ್ಯೆ 38,ಸಾವಿರಕ್ಕೆ ಏರಿಕೆಯಾಗಿ ಈಗ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 60 ಲಕ್ಷ ದಾಟಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಶುಕ್ರವಾರ ತಡರಾತ್ರಿ ತಿಳಿಸಿದೆ.
ಹೊಸದಾಗಿ 552 ರೋಗಿಗಳು ಮೃತಪಟ್ಟಿದ್ದು , ಈವರೆಗೆ 168,613 ಜನ ಮಾರಕ ಸೋಂಕಿಗೆ ಬಲಿಯಾಗಿದ್ದರೆ 55 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ.
ಒಂದು ದಿನದ ಹಿಂದೆ, ದೇಶದಲ್ಲಿ 35,918 ಹೊಸ ಪ್ರಕರಣಗಳು ಮತ್ತು 606 ಹೊಸ ಸಾವುನೋವುಗಳು ವರದಿಯಾಗಿತ್ತು.
ಯುಎನ್ಐ ಕೆಎಸ್ಆರ್ 0938