SportsPosted at: Jan 13 2021 6:57PM Shareಬ್ರಿಸ್ಬೇನ್ ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಇತಿಹಾಸಬೆಂಗಳೂರು, ಜ.13 (ಯುಎನ್ಐ)- ಭಾರತ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲ್ಲಬೇಕಾದರೆ, ಟೀಮ್ ಇಂಡಿಯಾ ಬ್ರಿಸ್ಬೇನ್ ಮೈದಾನದಲ್ಲಿ ತಮ್ಮ ಇತಿಹಾಸವನ್ನು ಬದಲಾಯಿಸಬೇಕಾಗುತ್ತದೆ. ಈ ಮೈದಾನದಲ್ಲಿ ಭಾರತ ಎಂದಿಗೂ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯ ಜನವರಿ 15 ರಿಂದ ಬ್ರಿಸ್ಬೇನ್ನಲ್ಲಿ ನಡೆಯಲಿದೆ. ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್ಗಳಿಂದ ಜಯಗಳಿಸಿದರೆ, ಮೆಲ್ಬೋರ್ನ್ನಲ್ಲಿ ಭಾರತ ಎಂಟು ವಿಕೆಟ್ಗಳಿಂದ ಜಯಗಳಿಸಿ ಸರಣಿಯನ್ನು 1–1ರಲ್ಲಿ ಸಮಗೊಳಿಸಿತು. ಮೂರನೇ ಟೆಸ್ಟ್ ಡ್ರಾ ಆಗಿದ್ದರಿಂದ, ಈಗ ಸರಣಿ ಫಲಿತಾಂಶ ಬ್ರಿಸ್ಬೇನ್ನಲ್ಲಿ ನಡೆಯಲಿರುವ ಪಂದ್ಯದ ಮೇಲೆ ನಿಂತಿದೆ. ಭಾರತ ಬ್ರಿಸ್ಬೇನ್ ಟೆಸ್ಟ್ ಗೆದ್ದರೆ ಅಥವಾ ಡ್ರಾ ಆದರೆ, ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳುತ್ತಾರೆ. ಏಕೆಂದರೆ ಭಾರತವು ಹಿಂದಿನ ಸರಣಿಯನ್ನು ಆಸ್ಟ್ರೇಲಿಯಾದಿಂದ 2018–19ರಲ್ಲಿ 2–1ರಿಂದ ಗೆದ್ದಿತು. ಬ್ರಿಸ್ಬೇನ್ ಮೈದಾನವು ಆಸ್ಟ್ರೇಲಿಯಾದ ಅಜೇಯ ಕೋಟೆ ಎಂದು ಪರಿಗಣಿಸಲ್ಪಟ್ಟಿದೆ. ಅಲ್ಲಿ ಕಳೆದ 33 ವರ್ಷಗಳಲ್ಲಿ ಇದುವರೆಗೆ ಸೋತಿಲ್ಲ ಮತ್ತು ಈ ನೆಲದಲ್ಲಿ ಭಾರತಕ್ಕೆ ಎಂದಿಗೂ ಗೆದ್ದಿಲ್ಲ. ಆಸ್ಟ್ರೇಲಿಯಾ ಬ್ರಿಸ್ಬೇನ್ನಲ್ಲಿ ಕಳೆದ ಏಳು ಟೆಸ್ಟ್ಗಳನ್ನು ಸತತವಾಗಿ ಗೆದ್ದಿದೆ. ಆಸ್ಟ್ರೇಲಿಯಾ ಕೊನೆಯದಾಗಿ 1988 ರ ನವೆಂಬರ್ನಲ್ಲಿ ಬ್ರಿಸ್ಬೇನ್ನಲ್ಲಿ ವೆಸ್ಟ್ ಇಂಡೀಸ್ನಿಂದ ಒಂಬತ್ತು ವಿಕೆಟ್ಗಳಿಂದ ಸೋಲನುಭವಿಸಿತ್ತು. ನವೆಂಬರ್ - ಡಿಸೆಂಬರ್ 1931 ರಿಂದ ಬ್ರಿಸ್ಬೇನ್ನಲ್ಲಿ ಟೆಸ್ಟ್ ಕ್ರಿಕೆಟ್ ಪ್ರಾರಂಭವಾಗಿತ್ತು. ಮತ್ತು ಭಾರತವು ತಮ್ಮ ಮೊದಲ ಟೆಸ್ಟ್ ಅನ್ನು ನವೆಂಬರ್ - ಡಿಸೆಂಬರ್ 1947 ರಲ್ಲಿ ಮೈದಾನದಲ್ಲಿ ಆಡಿತ್ತು. ಇದರಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 226 ರನ್ಗಳಿಂದ ಜಯಗಳಿಸಿತ್ತು. 1968 ರ ಜನವರಿಯಲ್ಲಿ ಭಾರತ ಟೆಸ್ಟ್ ಪಂದ್ಯವನ್ನು 39 ರನ್ಗಳಿಂದ ಸೋತಿತ್ತು. 1977 ರ ಡಿಸೆಂಬರ್ನಲ್ಲಿ ಬ್ರಿಸ್ಬೇನ್ನಲ್ಲಿ ಭಾರತವು 16 ರನ್ಗಳಿಂದ ಸೋಲನುಭವಿಸಿತ್ತು. ನವೆಂಬರ್-ಡಿಸೆಂಬರ್ 1991 ರಲ್ಲಿ, ಆಸ್ಟ್ರೇಲಿಯಾವು ಬ್ರಿಸ್ಬೇನ್ನಲ್ಲಿ ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿತ್ತು. ಆದರೆ ಡಿಸೆಂಬರ್ 2003 ರಲ್ಲಿ ಆಡಿದ ಟೆಸ್ಟ್ ಪಂದ್ಯವು ಡ್ರಾ ಆಗಿತ್ತು. 2014 ರ ಡಿಸೆಂಬರ್ನಲ್ಲಿ ಆಡಿದ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತ್ತು. ಈ ಮೈದಾನದಲ್ಲಿ ಆಡಿದ ಕೊನೆಯ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ 2019 ರ ನವೆಂಬರ್ನಲ್ಲಿ ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು ಐದು ರನ್ಗಳಿಂದ ಮಣಿಸಿತ್ತು. ಭಾರತವು ಈಗ ಬ್ರಿಸ್ಬೇನ್ನಲ್ಲಿ ತನ್ನ ಇತಿಹಾಸವನ್ನು ಬದಲಾಯಿಸಬೇಕಾಗಿದೆ. ಯುಎನ್ಐ ವಿಎನ್ಎಲ್ 1853