Thursday, Oct 1 2020 | Time 22:40 Hrs(IST)
 • ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಇನ್ನಷ್ಟು ಚಟುವಟಿಕೆಗೆ ಅವಕಾಶ ಕಲ್ಪಿಸುವ ಮಾರ್ಗಸೂಚಿ ಬಿಡುಗಡೆ
 • ಬಿಬಿಎಂಪಿ ಕಾಮಗಾರಿ, ಯೋಜನೆಗಳ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು; ಮಂಜುನಾಥ್‌ ಪ್ರಸಾದ್
 • ‘ಜಲ ಜೀವನ್ ಮಿಷನ್’ ಪರಿಣಾಮಕಾರಿ ಅನುಷ್ಠಾನ ಪ್ರಯತ್ನಗಳ ಮುಂದುವರಿಸುವಂತೆ ಗ್ರಾಮಪಂಚಾಯಿತಿಗಳಿಗೆ ಪ್ರಧಾನಿ ಕರೆ
 • ಒಂದು ವಾರ ವಿಶ್ರಾಂತಿಯ ಸಂಪೂರ್ಣ ಲಾಭ ಪಡೆದಿದ್ದೇವೆ: ಸಿಎಸ್‌ಕೆ ಕೋಚ್‌ ಫ್ಲೆಮಿಂಗ್
 • ರೋಹಿತ್ ಅರ್ಧಶತಕದ ಮಿಂಚು, ಮುಂಬಯಿ ಸವಾಲಿನ ಮೊತ್ತ
 • ರಾಹುಲ್, ಪ್ರಿಯಾಂಕಾ ಮೇಲಿನ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ; ನಾಯಕರ ಬಂಧನ
 • ರಾಹುಲ್ ಗಾಂಧಿ, ಪ್ರಿಯಾಂಕಾ ಬಂಧನಕ್ಕೆ ಸಿದ್ದರಾಮಯ್ಯ ಕಿಡಿ
 • ರಾಜ್ಯದಲ್ಲಿ 10,070 ಕೊರೋನಾ ಸೋಂಕು ಪತ್ತೆ: ಒಂದೇ ದಿನ 96,588 ದಾಖಲೆಯ ಸೋಂಕು ಪತ್ತೆ ಪರೀಕ್ಷೆ
 • ವಿಧಾನ ಪರಿಷತ್ ನ 4 ಸ್ಥಾನಗಳಿಗೆ ಚುನಾವಣೆಗೆ ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಆರಂಭ
 • ಭಾರತೀಯ ತೈಲ ನಿಗಮದಿಂದ ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಮಾರಾಟ ದರ ಇಳಿಕೆ
 • ರಾಜ್ಯದಲ್ಲಿ ಮುಂದುವರಿದ ಕೋವಿಡ್‌ ಪ್ರಕರಣಗಳ ಏರಿಕೆ; 1 10 ಲಕ್ಷ ತಲುಪಿದ ಸಕ್ರಿಯ ಪ್ರಕರಣಗಳು
 • ರಾಹುಲ್, ಪ್ರಿಯಾಂಕಾ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿದ ಜೆಡಿಎಸ್
 • ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಹೆಸರು ಅಖೈರು
 • ಮೀಸಲು ಅರಣ್ಯದಲ್ಲಿ ಕಡವೆ ಬೇಟೆ; ಆರೋಪಿಗಳು ಅರಣ್ಯ ಇಲಾಖೆ ಬಲೆಗೆ
 • ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮೊದಲ ಬಾರಿಗೆ ಚಿಟ್ಟೆ ಪ್ರಬೇಧಗಳ ಸಮೀಕ್ಷೆ
Entertainment Share

ಬೋಲ್ಡ್ ಅಂದ್ರೆ ವಲ್ಗ್ಯಾರಿಟಿ ಅಲ್ಲ : ‘ನವರತ್ನ’ ಮೋಕ್ಷ ಕುಶಾಲ್‍

ಬೋಲ್ಡ್ ಅಂದ್ರೆ ವಲ್ಗ್ಯಾರಿಟಿ ಅಲ್ಲ : ‘ನವರತ್ನ’ ಮೋಕ್ಷ ಕುಶಾಲ್‍
ಬೋಲ್ಡ್ ಅಂದ್ರೆ ವಲ್ಗ್ಯಾರಿಟಿ ಅಲ್ಲ : ‘ನವರತ್ನ’ ಮೋಕ್ಷ ಕುಶಾಲ್‍

-ಎಸ್ ಆಶಾ ಕಶ್ಯಪ್‍ಬೆಂಗಳೂರು, ಫೆ 13 (ಯುಎನ್‍ಐ) ಇಂಜಿನಿಯರಿಂಗ್ ಓದುತ್ತಿದ್ದ ಹುಡುಗಿ. . .ಮಗಳು ಐಎಎಸ್‍ ಓದಬೇಕು ಎಂದು ಬಯಸಿದ್ದ ಅಪ್ಪ, ಅಮ್ಮ. . ಆದರೆ ಇಂಜಿನಿಯರಿಂಗ್ ಮುಗಿಸಿದ ಈಕೆಯನ್ನು ಕೈ ಬೀಸಿ ಕರೆದಿದ್ದು ಚಂದನವನ!ಕಾಲೇಜಿನ ದಿನಗಳಲ್ಲಿ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತ, ರ್ಯಾಂಪ್ ವಾಕ್ ಮಾಡುತ್ತಲೇ ಅಭಿಮಾನಿಗಳ ಹಿಂಡು ಗಳಿಸಿದ್ದಾಕೆ ‘ಚಿತ್ರಗಳಲ್ಲಿ ನಟಿಸಿದರೆ ಜನರಿಗೆ ಮತ್ತಷ್ಟು ಇಷ್ಟವಾಗಬಹುದು’ ಎಂಬ ದೃಷ್ಟಿಯಿಂದ ಆಯ್ದುಕೊಂಡಿದ್ದು ಸಿನಿಮಾರಂಗವನ್ನ. . .ಈಕೆ ಮತ್ಯಾರೂ ಅಲ್ಲ, ‘ಅಯನ’ದಲ್ಲಿ ನಾಯಕನ ತಂಗಿಯಾಗಿ, ‘ಆದಿ ಪುರಾಣ’ ದಲ್ಲಿ ಎರಡನೇ ನಾಯಕಿಯಾಗಿ ನಟಿಸಿ ಇದೀಗ ‘ನವರತ್ನ’ದಲ್ಲಿ ಮಿಂಚಿರುವ ಬೆಡಗಿ ಮೋಕ್ಷ ಕುಶಾಲ್‘ನವರತ್ನ’ ಚಿತ್ರ ಇದೇ ಶುಕ್ರವಾರ ಫೆ 14 ರಂದು ತೆರೆಗೆ ಬರುತ್ತಿದೆ ಈ ಸಂದರ್ಭದಲ್ಲಿ ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೋಕ್ಷ ಕುಶಾಲ್, “ಈ ಹಿಂದೆ ಎರಡು ಚಿತ್ರಗಳಲ್ಲಿ ನಟಿಸಿದ್ದು, ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದೆ ಆದರೆ ‘ನವರತ್ನ’ ನನ್ನಲ್ಲಿನ ಪ್ರತಿಭೆಯ ಅನಾವರಣಕ್ಕೆ ಭರಪೂರ ಅವಕಾಶ ಸಿಕ್ಕಿದೆ ನಾಯಕನಟಿಯಾಗಿ ಬೋಲ್ಡ್, ಕ್ಯೂಟ್‍, ಹಾಟ್ ಕೋಪ, ಅಳು, ನಗು. . . .ಹೀಗೆ ಎಲ್ಲ ಬಗೆಯ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದೇನೆ ಎಂದರುಬೋಲ್ಡ್ ಅಂದ್ರೆ ಆತ್ಮವಿಶ್ವಾಸ!ಬೋಲ್ಡ್ ಅಂದ್ರೆ ವಲ್ಗ್ಯಾರಿಟಿ ಅಂತ ತುಂಬಾ ಜನ ಅಂದ್ಕೊಳ್ತಾರೆ ಆದ್ರೆ ಅದು ಹಾಗಲ್ಲ, ಅತ್ಯಂತ ಆತ್ಮವಿಶ್ವಾಸದಿಂದ, ಯಾರಿಗೂ ಹೆದರದೆ ನಮ್ಮನ್ನು ನಾವು ತೋರಿಸಿಕೊಳ್ಳುವುದು, ಮಾಡುವ ಕೆಲಸದಿಂದ ಸಂತೋಷ ಅನುಭವಿಸುವುದು ಬೋಲ್ಡ್ ನೆಸ್ ಅಂತ ವ್ಯಾಖ್ಯಾನಿಸಿದರು

-:ವನ್ಯಜೀವಿ ಫೋಟೊಗ್ರಾಫರ್:-

'ನವರತ್ನ' ಥ್ರಿಲ್ಲಿಂಗ್ ಸಬ್ಜೆಕ್ಟ್ ಇರೋ ಚಿತ್ರವಾಗಿದ್ದು, ಮೋಕ್ಷಾ ವನ್ಯಜೀವಿ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ ‘ಚಿತ್ರದ ಬಹುತೇಕ ಶೂಟಿಂಗ್ ಶೃಂಗೇರಿಯ ಕಿಗ್ಗ ಅರಣ್ಯ ಪ್ರದೇಶದಲ್ಲಿ ನಡೆದಿದೆ ದಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯನ್ನೂ ಲೆಕ್ಕಿಸದೆ ಹಲವು ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ ನಾವು ಅಂದುಕೊಂಡಂತೆಯೇ ಸಿನಿಮಾ ಮೂಡಿಬಂದಿದೆ’ ಎನ್ನುತ್ತಾರೆ ಮೋಕ್ಷಾಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಲು ಇಷ್ಟಸ್ಯಾಂಡಲ್‍ ವುಡ್‍ ಹೊರತುಪಡಿಸಿ ಬೇರಿ ಭಾಷೆಯ ಚಿತ್ರಗಳಲ್ಲಿ ನಟಿಸಲು ಇಷ್ಟವೇ ಎಂಬ ಪ್ರಶ್ನೆಗೆ, “ಕನ್ನಡಕ್ಕೆ ಮೊದಲ ಆದ್ಯತೆ ಇಲ್ಲಿ ಬೇರೂರಿದ ಬಳಿಕ ಒಳ್ಳೆಯ ಕಥೆಯಿರುವ ಚಿತ್ರಗಳು ಬಂದಲ್ಲಿ ನಟಿಸಲು ಇಷ್ಟ ಮಹಿಳಾ ಪ್ರಧಾನ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳು ಬಯಕೆಯಿದೆ ಇಲ್ಲಿಯೂ ಅಷ್ಟೆ ಕಥೆ ಮುಖ್ಯವಾಗಿದ್ದು, ಒಂದಷ್ಟು ಜನರಿಗಾದರೂ ಚಿತ್ರ ಸ್ಫೂರ್ತಿ ನೀಡುವಂತಿರಬೇಕು ಎನ್ನುತ್ತಾರೆ ಮೋಕ್ಷಾ

ನಾಯಕಿಯಾಗಿ ಇದು ನನ್ನ ಮೊದಲ ಸಿನಿಮಾ ಕಥೆ ಕೇಳಿಯೇ ನಾನು ತುಂಬ ಇಷ್ಟಪಟ್ಟಿದ್ದೆ ಇತ್ತೀಚಿನ ದಿನಗಳಲ್ಲಿ ಸಸ್ಪೆನ್ಸ್ ಶೈಲಿಯ ಸಿನಿಮಾಗಳಿಗೆ ಒಳ್ಳೆಯ ಸ್ಕೋಪ್ ಸಿಗುತ್ತಿದೆ. ಅಂಥ ಸಿನಿಮಾದಲ್ಲಿ ನಟಿಸಬೇಕೆಂಬುದು ನನ್ನ ಆಸೆ ಆಗಿತ್ತು ಇದೀಗ ಆ ಆಸೆಯನ್ನು ಈಡೇರಿಸಿಕೊಂಡಿದ್ದೇನೆ 'ನವರತ್ನ' ಸಸ್ಪೆನ್ಸ್ ಜತೆಗೆ ಕಾಮಿಡಿ, ರೊಮ್ಯಾನ್ಸ್ ಸಹ ಹೊಂದಿದೆ

ಈ ಹಿಂದೆ ‘ಹುಚ್ಚುಡುಗ್ರು’ ಸಿನಿಮಾ ನಿರ್ದೇಶನ ಮಾಡಿದ್ದ ಪ್ರತಾಪ್ ರಾಜ್ ‘ನವರತ್ನ’ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆಚೆಲುವಿಕೆ, ಬುದ್ಧಿವಂತಿಕೆಯೊಂದಿಗೆ ಅಭಿನಯದಲ್ಲಿಯೂ ಸೈ ಎನಿಸಿಕೊಳ್ಳುತ್ತಿರುವ ಮೋಕ್ಷಾ ಕುಶಾಲ್‍ ಗೆ 'ಆಲ್‍ ದಿ ಬೆಸ್ಟ್’ ಎನ್ನೋಣ.ಯುಎನ್‍ಐ ಎಸ್‍ಎ ವಿಎನ್

More News

ನಿರ್ಮಾಪಕ ಎಸ್‍‍ ಕೆ ಕೃಷ್ಣಕಾಂತ್ ವಿಧಿವಶ

01 Oct 2020 | 2:34 PM

 Sharesee more..

‘ಗಾಂಧಿ ಮತ್ತು ನೋಟು' ಚಿತ್ರೀಕರಣ ಪೂರ್ಣ

01 Oct 2020 | 11:28 AM

 Sharesee more..

ಸಲ್ಮಾನ್ ಖಾನ್ ರ ರಾಧೆ ಚಿತ್ರದ ಚಿತ್ರಿಕರಣ ಆರಂಭ

30 Sep 2020 | 5:23 PM

 Sharesee more..