Monday, Sep 23 2019 | Time 02:27 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
business economy Share

ಬೆಳಗಾವಿಗೆ ಇಂಡಿಗೋ ಏರಲೈನ್ಸ್ ನ 58 ನೇ ದೇಶೀಯ ಸೇವೆ ಆರಂಭ

ಕೋಲ್ಕತ, ಸೆ 9 (ಯುಎನ್‌ಐ) ದಕ್ಷಿಣ ಭಾರತದಲ್ಲಿ ಸಂಪರ್ಕವನ್ನು ಬಲಪಡಿಸುವ ಉದ್ದೇಶದೊಂದಿಗೆ ಭಾರತದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಏರ್ ಲೈನ್ಸ್‍, ಬೆಳಗಾವಿ ಮತ್ತು ಬೆಂಗಳೂರು ನಡುವೆ ಸೇವೆ ಆರಂಭಿಸಿದೆ.
ಹೊಸ ಮಾರ್ಗದಲ್ಲಿ ಎಟಿಆರ್ -18 ವಿಮಾನ ಸಂಚರಿಸಲಿದೆ. ಬೆಳಗಾವಿ ಇಂಡಿಗೋನ 58 ನೇ ದೇಶೀಯ ಮಾರ್ಗವಾಗಿದ್ದು, ಒಟ್ಟಾರೆ 77 ನೇ ಸ್ಥಳವಾಗಿದೆ.

‘ಬೆಂಗಳೂರು ಮತ್ತು ಮಧುರೈ ನಡುವೆ ಹೆಚ್ಚುವರಿ ವಿಮಾನಗಳ ಸೇವೆಯ ಜೊತೆಗೆ ಬೆಳಗಾವಿಯನ್ನು ಹೊಸ ದೇಶೀಯ ಮಾರ್ಗವಾಗಿ ಘೋಷಸಿಸುತ್ತಿರುವುದಕ್ಕೆ ನಾವು ಹರ್ಷಪಡುತ್ತಿದ್ದೇವೆ. ಬೆಳಗಾವಿಯು ಹೆಚ್ಚು ಐತಿಹಾಸಿಕ ಮಹತ್ವ ಮತ್ತು ಪ್ರಕೃತಿ ಪ್ರವಾಸೋದ್ಯಮದಿಂದ ಕೂಡಿರುವುದರಿಂದ ರಾಜ್ಯದ ಪ್ರವಾಸೋದ್ಯಮ ಮತ್ತು ವಾಣಿಜ್ಯ ಅವಕಾಶಗಳನ್ನು ಒದಗಿಸಿಕೊಡಲಿದೆ ಎಂದು ಇಂಡಿಗೋ ಮುಖ್ಯ ವಾಣಿಜ್ಯ ಅಧಿಕಾರಿ ವಿಲಿಯಂ ಬೌಲ್ಟರ್ ಹೇಳಿದ್ದಾರೆ. ‘ಈ ವಿಮಾನಗಳು ಬೆಂಗಳೂರಿನಿಂದ ಹೊರಗೆ ಎರಡನೇ ದರ್ಜೆಯ ನಗರಗಳೊಂದಿಗೆ ಸಂಪರ್ಕ ಬಲಪಡಿಸುತ್ತವೆ. ಅಲ್ಲದೆ, ದಕ್ಷಿಣ ಭಾರತದಲ್ಲಿ ಸಂಚಾರ ವೃದ್ಧಿಸುತ್ತವೆ. ವಲಯ ಬೇಡಿಕೆಗೆ ಅನುಗುಣವಾಗಿ ಸಂಸ್ಥೆ ವಿಸ್ತರಣೆ ಮುಂದುವರಿಸಲಿದೆ. ಆರಾಮದಾಯಕ ಮತ್ತು ತೊಂದರೆ ರಹಿತ ಹಾಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವುದಕ್ಕೆ ಸಂಸ್ಥೆ ಬದ್ಧವಾಗಿದೆ.’ ಎಂದು ಅವರು ಹೇಳಿದ್ದಾರೆ.
ಹೊಸ ಮತ್ತು ಕೈಗೆಟುಕುವ ವಿಮಾನ ಯಾನ ಆಯ್ಕೆಗೆ ನಿರಂತರವಾಗಿ ಹುಡುಕುತ್ತಿರುವ ವ್ಯಾಪಾರ ಮತ್ತು ಪ್ರವಾಸಿ ಪ್ರಯಾಣಿಕರಿಗೆ ಅಗತ್ಯತೆಗಳನ್ನು ಪೂರೈಸಲು ಹೊಸ ವಿಮಾನಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಮಾನಗಳ ಸಂಚಾರ ವಿಮಾನಯಾನ ಸಂಸ್ಥೆಯ ಎಟಿಆರ್ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1300
More News

ಹೋಟೆಲ್ ಕೊಠಡಿಗಳ ಮೇಲಿನ ಜಿ ಎಸ್ ಟಿ ದರ ಇಳಿಕೆ

20 Sep 2019 | 11:12 PM

 Sharesee more..
ಕಾರ್ಪೊರೇಟ್ ತೆರಿಗೆ ಕಡಿತ ರಫ್ತಿನಡಿ ಬಂಡವಾಳ ಹರಿವಿಗೆ ಸಹಕಾರಿ : ಎಫ್ ಐ ಇ ಒ

ಕಾರ್ಪೊರೇಟ್ ತೆರಿಗೆ ಕಡಿತ ರಫ್ತಿನಡಿ ಬಂಡವಾಳ ಹರಿವಿಗೆ ಸಹಕಾರಿ : ಎಫ್ ಐ ಇ ಒ

20 Sep 2019 | 8:12 PM

ನವದೆಹಲಿ, ಸೆ 20 (ಯುಎನ್ಐ) ಕಾರ್ಪೊರೇಟ್ ತೆರಿಗೆಯನ್ನು ಶೇ 22 ಕ್ಕೆ ಮತ್ತು ಹೊಸ ತಯಾರಿಕಾ ಕಂಪೆನಿಗಳಿಗೆ ಶೇ 15 ಕ್ಕೆ ಇಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತೀಯ ರಫ್ತು ಸಂಘದ ಒಕ್ಕೂಟ (ಎಫ್ಐಇಒ) ಶುಕ್ರವಾರ ಸ್ವಾಗತಿಸಿದೆ.

 Sharesee more..