Sunday, Nov 17 2019 | Time 14:53 Hrs(IST)
 • ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಬೆಲೆ ಹೆಚ್ಚಿಸುವುದಿಲ್ಲ ಟಿಟಿಡಿ ಅಧ್ಯಕ್ಷರ ಸ್ಪಷ್ಟನೆ
 • ಮೂವರು ಅಂತಾರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ
 • ಪೂಂಚ್‌ನಲ್ಲಿನ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ
 • ಅಧ್ಯಕ್ಷೀಯ ಚುನಾವಣೆ: ಶ್ರೀಲಂಕಾ ರಕ್ಷಣಾ ಸಚಿವ ಗೋಟಬಯಾ ರಾಜಪಕ್ಸೆಗೆ ಜಯ
 • ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾದ ಹಿಂದೂ ಕುಟುಂಬಗಳು
 • ಶಿಕಾರಿಪುರದಲ್ಲಿ 15, 17 ನೇ ಶತಮಾನದ ಎರಡು ಶಿಲಾಶಾಸನಗಳು ಪತ್ತೆ
 • ಡಿಸೆಂಬರ್ ಎರಡನೇ ವಾರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬದಲಾವಣೆ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ
 • ಶಿವಮೊಗ್ಗದಲ್ಲಿ ಎರಡು ಶಿಲಾಶಾಸನ ಪತ್ತೆ
 • ಪವನ್ ದೇಶ್‍ಪಾಂಡೆ ಸ್ಫೋಟಕ ಅರ್ಧ ಶತಕ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ
 • ಶ್ರೀ ಲಂಕಾ ಅಧ್ಯಕ್ಷೀಯ ಚುನಾವಣೆ; ಗೋಟಬಯಾ ರಾಜಪಕ್ಸೆ ಗೆಲುವು, ಅಧಿಕೃತ ಘೋಷಣೆ ಬಾಕಿ
 • ಮರಳಿದ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಪೃಥ್ವಿ ಶಾ
 • ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ಕೂಡಲೇ ರಾಜಕೀಯ ನಿವೃತ್ತಿ; ಕೇಂದ್ರ ಸಚಿವ ಗಿರಿರಾಜ್ ಸಿಂಗ್
 • ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ಕೂಡಲೇ ರಾಜಕೀಯ ನಿವೃತ್ತಿ; ಕೇಂದ್ರ ಸಚಿವ ಗಿರಿರಾಜ್ ಕಿಶೋರ್ ಸಿಂಗ್
 • ಟೆನಿಸ್ ವೃತ್ತಿ ಜೀವನಕ್ಕೆ ಥಾಮಸ್ ಬೆರ್ಡಿಚ್ ವಿದಾಯ
 • ಆಯೋಧ್ಯೆ ಕುರಿತ ಸುಪ್ರೀಂ ತೀರ್ಪು; ಚರ್ಚೆಗೆ ಲಕ್ನೋದಲ್ಲಿ ತುರ್ತು ಸಭೆ ಸೇರಿರುವ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
International Share

ಭಯೋತ್ಪಾದನೆ ವ್ಯಾಪಕದಿಂದ ಇಡೀ ಕೀನ್ಯಾ ಅಸ್ಥಿರ: ಗುಟೇರೆಸ್ ಕಳವಳ

ವಿಶ್ವಸಂಸ್ಥೆ, ಜುಲೈ 11 (ಯುಎನ್‌ಐ)- ಭಯೋತ್ಪಾದನೆ ಮತ್ತು ಸಂಘರ್ಷಗಳಿಂದ ಕೀನ್ಯಾದ ಇಡೀ ಪ್ರಾಂತ್ಯ ಅಸ್ಥಿರಗೊಳ್ಳುತ್ತಿದ್ದು, ಕುಟುಂಬಗಳು ಮತ್ತು ಸಮುದಾಯಗಳು ನಲುಗುತ್ತಿವೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೋ ಗುಟೇರಸ್‍ ಕಳವಳ ವ್ಯಕ್ತಪಡಿಸಿದ್ದಾರೆ.
ನೈರೋಬಿಯಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಕುರಿತ ಸಮಾವೇಶದ ಉದ್ಘಾಟನಾ ಗೋಷ್ಠಿಯಲ್ಲಿ ಮಾತನಾಡಿದ ಗುಟೆರೆಸ್, ಕಳೆದ ಜನವರಿಯಲ್ಲಿ ಕೀನ್ಯಾ ರಾಜಧಾನಿಯಾದ ಇಲ್ಲಿ ಹೋಟೆಲ್ ಸಂಕೀರ್ಣವೊಂದರ ಮೇಲೆ ದಾಳಿಕೋರರು ವಶಕ್ಕೆ ತೆಗೆದುಕೊಂಡ ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಆಫ್ರಿಕಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಗಂಭೀರ ವಿಷಯವಾಗಿದೆ ಎಂದ ಗುಟೇರಸ್‍, ಚಾಡ್ , ಮಧ್ಯ ಮಾಲಿ, ಬುರ್ಕಿನಾ ಫಾಸೊ ಮತ್ತು ನೈಜರ್ ದೇಶಗಳಲ್ಲಿ ಸಶಸ್ತ್ರ ಉಗ್ರರು ನಡೆಸುತ್ತಿರುವ ದಾಳಿಗಳಿಂದ ಜನರು ಭಯಭೀತರಾಗಿದ್ದು, ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಫ್ರಿಕಾದ ಭಯೋತ್ಪಾದನೆ ಪೀಡಿತ ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಸಮುದಾಯ ಬೆಂಬಲ ತುರ್ತು ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ. 'ಆಫ್ರಿಕಾದ ಜನರು "ಭಯೋತ್ಪಾದನೆ ಮತ್ತು ಈ ಪಿಡುಗಿನ ಹರಡುವಿಕೆ ಹಾಗೂ ಹಿಂಸಾಚಾರ ಉಗ್ರವಾದ ಹರಡುವಿಕೆ ಎದುರಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ.'ಎಂದು ಗುಟೇರಸ್ ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1324