Wednesday, Dec 2 2020 | Time 07:58 Hrs(IST)
International Share

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣತೆಯ ಕರೆ ನೀಡಿದ ಭಾರತ; ಯುಎನ್‌ಎಸ್‌ಸಿ ಕ್ರಮಕ್ಕೆ ಒತ್ತಾಯ

ನ್ಯೂಯಾರ್ಕ್, ನ 21 (ಯುಎನ್ಐ) ಭಯೋತ್ಪಾದನೆಗೆ ಶೂನ್ಯ ಸಹಿಷ್ಣತೆಯ ಕರೆ ನೀಡಿರುವ ಭಾರತ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ (ಯುಎನ್‌ಎಸ್‌ಸಿ)ಗೆ ಮನವಿ ಮಾಡಿದೆ.
ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಟಿ.ಎಸ್‌.ತಿರುಮೂರ್ತಿ, ಅಫ್ಗಾನಿಸ್ತಾನದ ಶಾಂತಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಯುದ್ಧಪೀಡಿತ ದೇಶದಲ್ಲಿ ತಕ್ಷಣ ಹಿಂಸಾಚಾರಕ್ಕೆ ಕಡಿವಾಣಕ್ಕೆ ಕರೆ ನೀಡಿದರು.
ಅಪ್ಘಾನಿಸ್ತಾನ ಇಂದು ಪ್ರಮುಖ ತಿರುವಿನಲ್ಲಿದೆ ಮತ್ತು ಅಂತಾರಾಷ್ಟ್ರೀಯ ಸಮುದಾಯ ಅದರಲ್ಲೂ ಭದ್ರತಾ ಪರಿಷತ್, ಸಂಬಂಧಪಟ್ಟವರಿಗೆ ಸರಿಯಾದ ಸಂದೇಶ ರವಾನಿಸುವ ಅಗತ್ಯವಿದೆ. ಭದ್ರತಾ ಪರಿಷತ್‌ಗೆ ಹಿಂಸಾಚಾರ ಮತ್ತು ಭದ್ರತಾ ಪಡೆಗಳ ದುರ್ಬಳಕೆ ವಿರುದ್ಧ ಧ್ವನಿ ಎತ್ತಬೇಕು ಎಂದು ಸಲಹೆ ನೀಡಬೇಕು.
ಪಾಕಿಸ್ತಾನವನ್ನು ಉಲ್ಲೇಖಿಸದೆ, ಅದು ಭಯೋತ್ಪಾದಕರಿಗೆ ಸುರಕ್ಷತಾ ಸ್ವರ್ಗ ಎಂದು ಕರೆದ ತಿರುಮೂರ್ತಿ, ಶಾಂತಿ ಪ್ರಕ್ರಿಯೆ ಮತ್ತು ಹಿಂಸಾಚಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದರು.
ಯುಎನ್ಐ ಎಸ್ಎಚ್ 1906