Saturday, Jul 11 2020 | Time 11:22 Hrs(IST)
  • ಪುಲ್ವಾಮದಲ್ಲಿ ಭದ್ರತಾ ಪಡೆಯಿಂದ ಶೋಧ ಕಾರ್ಯಾಚರಣೆ
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
National Share

ಭೂತಾನ್ ನಲ್ಲಿ ಜಲವಿದ್ಯುತ್ ಯೋಜನೆ : ಭಾರತ - ಭೂತಾನ್ ಸಹಿ

ನವದೆಹಲಿ, ಜೂನ್ 29 (ಯುಎನ್ಐ) ಭೂತಾನ್‌ನಲ್ಲಿ ಭಾರತದ ಸಹಭಾಗಿತ್ವದೊಂದಿಗೆ 600 ಮೆಗಾವ್ಯಾಟ್ ಸಾಮರ್ಥ್ಯದ ಖೊಲೊಂಗ್ಚು ಜಲವಿದ್ಯುತ್ ಯೋಜನೆಯ ನಿರ್ಮಾಣಕ್ಕೆ ಭಾರತ ಮತ್ತು ಭೂತಾನ್ ಪರಸ್ಪರ ಸೋಮವಾರ ಸಹಿ ಹಾಕಿವೆ.

ವಿದೇಶಾಂಗ ಸಚಿವ ಡಾ|| ಎಸ್ ಜೈಶಂಕರ್ ಮತ್ತು ಭೂತಾನ್ ಪ್ರತಿನಿಧಿ ತಾಂಡಿ ಡೋರ್ಜಿ ಅವರ ಸಮ್ಮುಖದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಯೋಜನೆಗೆ ಸಹಿ ಹಾಕಲಾಗಿದ್ದು ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ
ಇದು ಭೂತಾನ್‌ನ ಡ್ರುಕ್ ಗ್ರೀನ್ ಪವರ್ ಕಾರ್ಪೊರೇಷನ್ ಮತ್ತು ಭಾರತದ ಸತ್ಲೇಜ್ ಜಲ್ ವಿದ್ಯುತ್ ನಿಗಮ್ ಲಿಮಿಟೆಡ್‌ನ ಜಂಟಿ ಉದ್ಯಮವಾಗಿದೆ. ಈ ಯೋಜನೆಯು 2025 ರ ದ್ವಿತೀಯಾರ್ಧದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಯೋಜನೆ ಭಾರತ-ಭೂತಾನ್ ಸಹಕಾರ ಕ್ಷೇತ್ರದೊಳಗಿನ ಜಲವಿದ್ಯುತ್ ಅಭಿವೃದ್ಧಿ ಪರಸ್ಪರ ಪ್ರಯೋಜನಕಾರಿ. ಇದು ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರಕ್ಕೆ ಪೂರಕ ಎಂದು ವಿದೇಶಾಂಗ ಸಚಿವ ಜೈಶಂಕರ್ ಬಣ್ಣಿಸಿದ್ದಾರೆ.
ಇದರೊಂದಿಗೆ ಭೂತಾನ್ ನಲ್ಲಿ ಭಾರತದ ಸಹಭಾಗಿತ್ವದೊಂದಿಗೆ ನಾಲ್ಕು ಜಲವಿದ್ಯುತ್ ಯೋಜನೆಗಳು ಕಾರ್ಯಾಚರಣೆಯಲ್ಲಿರಲಿವೆ.
ಯುಎನ್ಐ ಜಿಎಸ್ಆರ್ 2254
More News
ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸೇನೆಗಳ ಸಂಪೂರ್ಣ ಹಿಂತೆಗೆತಕ್ಕೆ ಭಾರತ, ಚೀನಾ ಪುನರುಚ್ಛಾರ

ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸೇನೆಗಳ ಸಂಪೂರ್ಣ ಹಿಂತೆಗೆತಕ್ಕೆ ಭಾರತ, ಚೀನಾ ಪುನರುಚ್ಛಾರ

10 Jul 2020 | 9:30 PM

ನವದೆಹಲಿ, ಜುಲೈ(ಯುಎನ್‍ಐ)- ಪೂರ್ವ ಲಡಾಖ್‍ ನ ವಾಸ್ತವ ಗಡಿ ನಿಯಂತ್ರಣಾ ರೇಖೆಯಯಲ್ಲಿ ಮುಂದುವರೆದಿರುವ ಸೇನೆ ಹಿಂತೆಗೆತದ ನಡುವೆ ಭಾರತ ಮತ್ತು ಚೀನಾ ರಾಯಭಾರಿಗಳು ಶುಕ್ರವಾರ ಸಭೆ ನಡೆಸಿ, ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಗಡಿಯಲ್ಲಿ ಸೇನೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳುವುದನ್ನು ಎರಡೂ ದೇಶಗಳು ಖಚಿತಪಡಿಸುತ್ತವೆ ಎಂದು ಪುನರುಚ್ಛರಿಸಿದ್ದಾರೆ.

 Sharesee more..

ಶಾಸ್ತ್ರಿ ಭವನದಲ್ಲಿ ಅಗ್ನಿ ಆಕಸ್ಮಿಕ

10 Jul 2020 | 4:57 PM

 Sharesee more..