Thursday, Apr 9 2020 | Time 23:44 Hrs(IST)
 • ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ
 • ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ
 • ಕರೋನದಿಂದ ಹೆಚ್ಚಿದ ಡಿಡಿ ನ್ಯಾಷನಲ್ ವಾಹಿನಿ ಜನಪ್ರಿಯತೆ
 • ಎಸ್ ಎಸ್ ಎಲ್ ಸಿ ಪರೀಕ್ಷೆ, ವಿದ್ಯಾರ್ಥಿ, ಪೋಷಕರಿಗೆ ಮಂಡಳಿ ಅಭಯ
 • ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ತಂದೆ
 • ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಭಾರತದ ತಕ್ಕ ಪ್ರತ್ಯುತ್ತರ
 • ತಮಿಳುನಾಡಿನಲ್ಲಿ ಕೊರೊನವೈರಸ್‍ನ ಹೊಸ 96 ಪ್ರಕರಣಗಳು ದೃಢ, ಒಟ್ಟು ಸೋಂಕಿತರ ಸಂಖ್ಯೆ 834ಕ್ಕೆ ಏರಿಕೆ
 • ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ 50 ವಿದೇಶಿ ಸದಸ್ಯರ ಪತ್ತೆ; ಸರ್ಕಾರ
 • ಮೃಗಾಲಯದಲ್ಲಿ ಪ್ರಾಣಿಗಳಿಗೆ ಸೋಂಕು ತಗುಲದಂತೆ ಅಗತ್ಯ ಕ್ರಮ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ
 • ಕೋವಿಡ್; ದೇಶದಲ್ಲಿ ಒಂದೇ ದಿನದಲ್ಲಿ 663 ಹೊಸ ಪ್ರಕರಣ, 20 ಸಾವು; ಒಟ್ಟು 5865 ಸೋಂಕಿತರು
 • ಕೇವಲ 8 ದಿನಗಳಲ್ಲಿ 97 ಕೊರೋನಾ ಸೋಂಕಿನ ಪ್ರಕರಣ ಪತ್ತೆ: ಸುರೇಶ್ ಕುಮಾರ್
 • ಕೊವಿದ್ -19: ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
 • ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದವರಿಗೂ ಪಡಿತರ ವಿತರಣೆ : ಸಂಪುಟದ ಮಹತ್ವದ ನಿರ್ಣಯ
 • ಕೊರೋನಾಗೆ ಯಾವುದೇ ಜಾತಿ,ಧರ್ಮ, ಮತ, ಪಂಥ ಇಲ್ಲ: ನಳೀನ್ ಕುಮಾರ್ ಕಟೀಲ್
 • ಲಾಕ್‌ಡೌನ್ ವಿಸ್ತರಣೆ: ಪ್ರಧಾನಿ ಜೊತೆ ಚರ್ಚಿಸಿ ಮುಂದಿನ ತೀರ್ಮಾನಕೈಗೊಳ್ಳಲು ಸಚಿವ ಸಂಪುಟ ನಿರ್ಧಾರ
International Share

ಭಾರತ-ಚೀನಾ ಸಂಬಂಧಗಳು ಜಾಗತಿಕ ಆಯಾಮಗಳನ್ನು ಹೊಂದಿವೆ: ಜೈಶಂಕರ್

ಭಾರತ-ಚೀನಾ ಸಂಬಂಧಗಳು ಜಾಗತಿಕ ಆಯಾಮಗಳನ್ನು ಹೊಂದಿವೆ: ಜೈಶಂಕರ್
ಭಾರತ-ಚೀನಾ ಸಂಬಂಧಗಳು ಜಾಗತಿಕ ಆಯಾಮಗಳನ್ನು ಹೊಂದಿವೆ: ಜೈಶಂಕರ್

ಬೀಜಿಂಗ್, ಆಗಸ್ಟ್ 13 (ಯುಎನ್ಐ) ಭಾರತ-ಚೀನಾ ಸಂಬಂಧಗಳು ದ್ವಿಪಕ್ಷೀಯವಾಗಿರದೆ, ಜಾಗತಿಕ ಆಯಾಮಗಳನ್ನು ಪಡೆದುಕೊಂಡಿದ್ದು ಉಭಯ ದೇಶಗಳು ಸಂಬಂಧಗಳ ದಿಕ್ಕಿನ ಬಗ್ಗೆ ಕಾರ್ಯತಂತ್ರದ ದೃಷ್ಟಿಕೋನವನ್ನು ಹೊಂದಬೇಕಾದ ಅಗತ್ಯವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

'ನಮ್ಮ ನಡುವಿನ ಸಂಬಂಧ ತುಂಬಾ ವಿಶಾಲದ್ದಾಗಿದೆ. ಇದು ಇನ್ನು ಮುಂದೆ ದ್ವಿಪಕ್ಷೀಯ ಸಂಬಂಧವಾಗಿರದೆ ಜಾಗತಿಕ ಆಯಾಮಗಳನ್ನು ಹೊಂದಿದೆ" ಎಂದು ಜೈಶಂಕರ್ ಅವರು

ಸರ್ಕಾರಿ ಸ್ವಾಮ್ಯದ ಕ್ಸಿನುವಾ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆರ್ಥಿಕವಾಗಿ ಹೊರಹೊಮ್ಮುತ್ತಿರುವ ಎರಡು ಅತಿದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ನಡುವಿನ ಸಹಕಾರ ವಿಶ್ವಕ್ಕೆ ಬಹಳ ಮಹತ್ವದ್ದಾಗಿದೆ. ವಿಶ್ವ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಲು ಉಭಯ ದೇಶಗಳು ಸಂವಹನ ಮತ್ತು ಸಮನ್ವಯತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಜೈಶಂಕರ್‌ ಹೇಳಿದ್ದಾರೆ.

ಉಭಯ ದೇಶಗಳು ಪ್ರಮುಖ ಕಾಳಜಿಯನ್ನು ಪರಸ್ಪರ ಗೌರವಿಸುವುದು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

2009 ರಿಂದ 2013 ರವರೆಗೆ ಚೀನಾದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಜೈಶಂಕರ್, ಬೀಜಿಂಗ್‌ನಲ್ಲಿ ಭಾರತದ ಸುದೀರ್ಘ ಅವಧಿಯ ರಾಯಭಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವರಾದ ನಂತರ ತಮ್ಮ ಹೊಸ ಪಾತ್ರದ ಆರಂಭದಲ್ಲಿ ಚೀನಾಕ್ಕೆ ಭೇಟಿ ನೀಡಿರುವುದಕ್ಕೆ ಸಂತಸವಾಗಿದೆ ಎಂದು ಜೈಶಂಕರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಯುಎನ್‌ಐ ಎಸ್‌ಎಲ್‌ಎಸ್ ಕೆವಿಆರ್ 2025

More News
ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

09 Apr 2020 | 3:28 PM

ಜಿನಿವಾ, ಏ ೯(ಯುಎನ್‌ಐ) ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಾಮೂಹಿಕ ಪ್ರಯತ್ನ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರೆಯೇಸಸ್ ಕರೆ ನೀಡಿದ್ದಾರೆ.

 Sharesee more..

ಮಾಲ್ಟಾದಲ್ಲಿ ಕೋವಿಡ್ 19 ಕ್ಕೆ ಮೊದಲ ಬಲಿ

09 Apr 2020 | 10:05 AM

 Sharesee more..