Monday, Sep 16 2019 | Time 20:35 Hrs(IST)
 • ಐಐಟಿ ದೆಹಲಿ ಜೆಇಇ ( ಅಡ್ವಾನ್ಸ್ಡ್ ) ಪರೀಕ್ಷೆ 2020ರ ಮೇ 17 ಕ್ಕೆ; ಅಮೆರಿಕದಲ್ಲೂ ಪರೀಕ್ಷಾ ಕೇಂದ್ರ
 • ಇಡಿ ಸಮನ್ಸ್ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಮೇಲ್ಮನವಿ ತೀರ್ಪು ಕಾಯ್ದಿರಿಸಿ ಹೈಕೋರ್ಟ್ ; ನಾಳೆ ತೀರ್ಪು ಸಾಧ್ಯತೆ
 • ಸೇವೆಯಿಂದ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ; ಡಾ ಹರ್ಷವರ್ಧನ್
 • ರಾಷ್ಟ್ರಪತಿ, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು: ಡಿಸಿಎಂ ಲಕ್ಷ್ಮಣ ಸವದಿ
 • ಕೆಬಿಸಿ; ಕೋಟಿ ರೂಪಾಯಿ ಗೆದ್ದ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಕಾರ್ಯಕರ್ತೆ
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
Entertainment Share

ಮದುವೆಯಾಗೋಕೆ ಹೆಣ್ಣೇ ಸಿಕ್ತಿಲ್ಲ !

ಬೆಂಗಳೂರು, ಜೂನ್ 11 (ಯುಎನ್ಐ) ವಯಸ್ಸು 35 ಮೀರಿದರೂ, ಹೆಣ್ಣೇ ಸಿಕ್ತಿಲ್ಲ ಗುರು . ..ಅನ್ನೋದು ಇತ್ತೀಚಿನ ವರ್ಷಗಳಲ್ಲಿ ಕೇಳಿಬರುತ್ತಿರುವ ಮಾತು. ಈ ವಿಷಯವನ್ನೇ ಆಧರಿಸಿ ಶ್ರೀ ಕರುಮಾರಿಯಮ್ಮ ಕೃಪಾ ಲಾಂಛನದಲ್ಲಿ, ಅಥರ್ವ ಕ್ರಿಯೇಷನ್ಸ್ ಅಡಿಯಲ್ಲಿ ‘ನವ ಇತಿಹಾಸ’ ಚಿತ್ರ ಸಿದ್ಧಗೊಂಡಿದೆ. ಅಮೃತ ರಾಜ್ ನಿರ್ಮಿಸಿ, ನಾಯಕಿಯಾಗಿ ನಟಿಸುತ್ತಿರುವ ಚಿತ್ರ ‘ಹೆಣ್ಣೇ ಸಿಕ್ತಿಲ್ಲ’ ಎಂಬ ಟ್ಯಾಗ್ ಲೈನ್ ಹೊಂದಿದ್ದು, ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಹುಟ್ಟು ಹಾಕಿದೆ.

“ಹಿಂದಿನ ಕಾಲದಲ್ಲಿ ಕೆಲವರು ಎರಡೆರಡು ಮದುವೆಯಾಗೋರು. ಆದರೆ ಈಗ ಯಾಕೆ ವಿಳಂಬವಾಗ್ತಿದೆ ಅನ್ನೋದು ಬಹುದೊಡ್ಡ ಪ್ರಶ್ನೆ. ಇನ್ನೂ ಮದುವೆ ಆಗಿಲ್ಲ ಅನ್ನೋ ಪ್ರಶ್ನೆಗೆ ಸಾಮಾನ್ಯವಾಗಿ ಕೇಳಿಬರುವ ಉತ್ತರ, ‘ಹೆಣ್ಣು ಸಿಕ್ತಿಲ್ಲ’ ಎಂಬುದು. ಹೋಗ್ಲಿ, ಯಾರನ್ನಾದ್ರೂ ಲವ್ ಮಾಡಿ ಮದುವೆಯಾಗಿ ಅಂದ್ರೆ, ಕಾಳು ಹಾಕಿ ಬಲೆಗೆ ಬೀಳಿಸಿಕೊಳ್ಳೋಕೂ ಹುಡುಗೀರೇ ಇಲ್ಲ, ಚಿಕ್ಕವರಿದ್ದಾಗಲೇ ಬುಕ್ ಆಗ್ಬಿಟ್ಟಿರ್ತಾರೆ ಎಂಬ ಪ್ರತಿಕ್ರಿಯೆ ದೊರೆಯುತ್ತದೆ. ವಿವಾಹವಾಗ ಬಯಸುವವರ ಇಂತಹ ಸಮಸ್ಯೆಗಳನ್ನೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ” ಎಂದು ನಿರ್ದೇಶಕ ಶ್ರೀ ರಜಿನಿ ಹೇಳಿದ್ದಾರೆ.

ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆಯಾಗಿದ್ದು, ಒಟ್ಟು 5 ಹಾಡುಗಳಿವೆ. ‘ಹಲ್ಲಲು ಬಿಟ್ಟಾಗ ಲವ್ ಆಗುತ್ತೆ, ಕೈ ಕೊಟ್ಟಾಗ ನೋವಾಗುತ್ತೆ’ ಎಂಬ ಕ್ಯಾಚಿ ಲೈನ್ ಮೂಲಕ ಪ್ರೀತೀಲಿ ಬಿದ್ದೋರ ಪಡಿಪಾಟಲು ಹೇಳಲಾಗಿದೆ. ಚಿತ್ರ ಸೆನ್ಸಾರ್ ಆಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಂಡ ಮಾಹಿತಿ ನೀಡಿದೆ.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಶ್ರೀರಜಿನಿ ಮತ್ತು ಸಮರ್ಥ್ ವಹಿಸಿಕೊಂಡಿದ್ದು, ವಿನುಮನಸು ಅವರ ಸಂಗೀತ ಸಂಯೋಜನೆಯಿದೆ. ವಿಕ್ರಮ್ , ಅಮೃತ ವಿ ರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ.

ಯುಎನ್ಐ ಎಸ್ಎ ಎಸ್ಎಚ್ 1815