Saturday, Feb 29 2020 | Time 15:21 Hrs(IST)
 • ಮಲೇಷಿಯಾದ ನೂತನ ಪ್ರಧಾನಮಂತ್ರಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
 • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
 • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
 • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
 • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
 • ಮೈಸೂರಿನಲ್ಲಿ ಇಬ್ಬರು ಬಾಂಗ್ಲಾ ದೇಶ ಅಕ್ರಮ ವಲಸಿಗರ ಬಂಧನ
 • ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ
Sports Share

ಮನ್ ಪ್ರೀತ್ ಎಫ್ಐಎಚ್ ವರ್ಷದ ಆಟಗಾರ

ನವದೆಹಲಿ, ಫೆ.13 (ಯುಎನ್ಐ)- ಭಾರತೀಯ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಎಫ್‌ಐಹೆಚ್ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮತ್ತು ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಗೆದ್ದ ಮನ್‌ಪ್ರೀತ್‌ಗೆ ಹಾಕಿ ಇಂಡಿಯಾ ಅಭಿನಂದಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ ಒಡಿಶಾದ ಭುವನೇಶ್ವರದಲ್ಲಿ ನಡೆದ ಎಫ್‌ಐಹೆಚ್ ಪುರುಷರ ಹಾಕಿ ಸರಣಿ ಫೈನಲ್‌ನಲ್ಲಿ ಮೈದಾಕ್ಕೆ ಇಳಿಯುವ ಮೂಲಕ ಮನ್‌ಪ್ರೀತ್ ಭಾರತಕ್ಕಾಗಿ ತಮ್ಮ 250 ಅಂತರರಾಷ್ಟ್ರೀಯ ಪಂದ್ಯಗಳನ್ನು ಪೂರ್ಣಗೊಳಿಸಿದರು. ಅವರ ನಾಯಕತ್ವದಲ್ಲಿ ಭಾರತ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಭಾರತ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಎಫ್‌ಐಹೆಚ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ರಷ್ಯಾವನ್ನು ಸೋಲಿಸುವ ಮೂಲಕ ಟೋಕಿಯೊ ಒಲಿಂಪಿಕ್ ಪ್ರವೇಶಿಸಿತ್ತು.

2012 ರ ಲಂಡನ್ ಒಲಿಂಪಿಕ್ಸ್ ಮತ್ತು 2016 ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ ಮನ್‌ಪ್ರೀತ್ ಎಲ್ಲರಿಗಿಂತಲೂ ಹೆಚ್ಚಿನ ಅಂಕವನ್ನು ಗೆದ್ದರು. ವಿಶ್ವ ಚಾಂಪಿಯನ್ ಬೆಲ್ಜಿಯಂನ ವಿಕ್ಟರ್ ವೆಜೆನ್ಜ್ ಮತ್ತು ಆರ್ಥರ್ ವ್ಯಾನ್ ಡೋರೆನ್, ಎಫ್‌ಐಹೆಚ್ ಪ್ರೊ ಲೀಗ್ 2019 ರ ವಿಜೇತರು ಅರಾನ್ ಅಲೆ ಲೆವ್ಸ್ಕಿ ಮತ್ತು ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದ ಎಡ್ಡಿ ಒಕೆಂಡೆನ್ ಅವರು ಸಹ ಈ ರೇಸ್ ನಲ್ಲಿದ್ದರು.ಈ ಪಟ್ಟಿಯಲ್ಲಿ ಡೋರೀನ್ ಎರಡನೇ ಮತ್ತು ಲ್ಯೂಕಾಸ್ ವಿಲ್ಲಾ ಮೂರನೇ ಸ್ಥಾನ ಪಡೆದರು.

ಮನ್‌ಪ್ರೀತ್‌ಗೆ 35.2 ಶೇಕಡಾ, ಡೋರೀನ್ 19.7 ಶೇಕಡಾ ಮತ್ತು ವಿಲ್ಲಾ 16.5 ರಷ್ಟು ಮತಗಳನ್ನು ಪಡೆದರು. ಈ ಪ್ರಶಸ್ತಿಗಳು 1999 ರಲ್ಲಿ ಪ್ರಾರಂಭವಾದವು ಮತ್ತು ಅಂದಿನಿಂದ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯುಎನ್ಐ ವಿಎನ್ಎಲ್ 2302