Wednesday, Feb 26 2020 | Time 12:23 Hrs(IST)
  • ಗಲಭೆ ಕೋರರನ್ನು ಮಟ್ಟ ಹಾಕಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ
  • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೆ ಏರಿದೆ
  • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
  • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
  • ಕಾರ್ಮಿಕನ ಬರ್ಬರ ಹತ್ಯೆ
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
Entertainment Share

ಮಮ್ಮಿಯಾಗ್ತಿದ್ದಾರೆ ಚಿರು ಮನದನ್ನೆ ಮೆಘಾನರಾಜ್!

ಬೆಂಗಳೂರು, ಸೆ 10 (ಯುಎನ್‌ಐ) ಕಳೆದ ವರ್ಷವಷ್ಟೇ ಅದ್ದೂರಿಯಾಗಿ ಮದುವೆಯಾಗಿ ವೈವಾಹಿಕ ಬದುಕಿಗೆ ಕಾಲಿರಿಸಿರುವ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇದೀಗ ಮಮ್ಮಿಯಾಗಿ ಪ್ರಮೋಶನ್ ಪಡೆದುಕೊಳ್ತಿದ್ದಾರಂತೆ
ಓಹ್ ಚಿರಂಜೀವಿ ಸರ್ಜಾ ದಂಪತಿ ಸಿಹಿಸುದ್ದಿ ಕೊಡ್ತಿದ್ದಾರಾ ಅಂತ ಕೇಳ್ತೀದ್ದೀರಾ?.
ಈ ಸುದ್ದಿ ಪೂರ್ತಿ ಓದಿ ನಿಮಗೆ ಉತ್ತರ ಸಿಗುತ್ತೆ.
ಸಾಲು-ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಮೇಘನಾ ರಾಜ್, ತಾಯಿ ಆಗ್ತಿರೋದು ರಿಯಲ್ ನಲ್ಲಿ ಅಲ್ಲ. ಬದಲಾಗಿ ರೀಲ್ ನಲ್ಲಿ. ಹೌದು ಮೇಘನಾ ರಾಜ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ.
ಸತತ ನಾಲ್ಕು ತಿಂಗಳ ಹುಡುಕಾಟದ ಬಳಿಕ ಚಿತ್ರಕ್ಕೆ ಇಂತಹದೊಂದು ವಿಭಿನ್ನ ಟೈಟಲ್ ಆಯ್ಕೆ ಮಾಡಲಾಗಿದೆ. ಮೊದಲ ಬಾರಿಗೆ ಸೃಜನ್ ಲೊಕೇಶ್ ಮತ್ತು ಮೇಘರಾ ರಾಜ್ ನಟಿಸುತ್ತಿರುವ ಈ ಚಿತ್ರಕ್ಕೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂದು ಹೆಸರಿಡಲಾಗಿದೆ. ಅಲ್ಲದೇ ಟೈಟಲ್ ಜೊತೆಗೆ ಮಕ್ಕಳ ಕಥೆ ಕೇಳಲೇ ಬೇಡಿ ಎನ್ನುವ ಸಬ್ ಟೈಟಲ್ ಕೂಡ ನೀಡಲಾಗಿದೆ.
ಮಧುಚಂದ್ರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಮೊಬೈಲ್ ವ್ಯಸನಕ್ಕೆ ಸಂಬಂಧಿಸಿದ ಸಿನಿಮಾವಾಗಿದೆ.
ಸದ್ಯ ಟೈಟಲ್ ಮಾತ್ರ ರಿವೀಲ್ ಮಾಡಿರುವ ಮೇಘನಾ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದ್ದಾರಂತೆ.
‘ಮೇಘನಾ ಮತ್ತು ಸೃಜನ್ ಮುಖ್ಯ ಭೂಮಿಕೆಯಲ್ಲಿದ್ದು ಇವರ ಜೊತೆಗೆ ಸುಧಾ ಬರಗೂರು ಮತ್ತು ಅಚ್ಯುತ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಟೈಟಲ್ ಮೂಲಕವೆ ಗಮನ ಸೆಳೆಯುತ್ತಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಧ್ಯದಲ್ಲೇ ತೆರೆಗೆ ಬರಲಿದೆ.
ಯುಎನ್‌ಐ ಎಸ್‌ಎ ವಿಎನ್ 1701
More News
‘ಬೊಮ್ಮನಗುಡ್ಡೆ’ ಚಿತ್ರಕ್ಕೆ ಚಾಲನೆ

‘ಬೊಮ್ಮನಗುಡ್ಡೆ’ ಚಿತ್ರಕ್ಕೆ ಚಾಲನೆ

25 Feb 2020 | 9:33 PM

ಬೆಂಗಳೂರು, ಫೆ 25 (ಯುಎನ್‍ಐ) ಜೆ ಕೆ ಪ್ರೊಡಕ್ಶನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಎಡೆಯೂರು ಸುರೇಶ್ ಹಾಗೂ ಭದ್ರಣ್ಣ ಸಹ ನಿರ್ಮಾಣವಿರುವ ‘ಬೊಮ್ಮನ ಗುಡ್ಡೆ‘ ಚಿತ್ರದ ಮುಹೂರ್ತ ಸಮಾರಂಭ ಮಹಾ ಶಿವರಾತ್ರಿ ಶುಭದಿನದಂದು ಬೊಮ್ಮನಗುಡ್ಡೆ ಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತು

 Sharesee more..
ಡ್ರಗ್ಸ್ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ‘ಕೆ 3’ ಟೆಲಿಚಿತ್ರ

ಡ್ರಗ್ಸ್ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ‘ಕೆ 3’ ಟೆಲಿಚಿತ್ರ

25 Feb 2020 | 8:53 PM

ಬೆಂಗಳೂರು, ಫೆ 25 (ಯುಎನ್‍ಐ) ಸಾಕಷ್ಟು ಭರವಸೆ ಹುಟ್ಟಿಸುವ ಕಿರುಚಿತ್ರಗಳು ಕನ್ನಡದಲ್ಲಿ ಬರುತ್ತಿದ್ದು, ಆ ಸಾಲಿಗೆ ಸೇರಿರುವ ಮತ್ತೊಂದು ಟೆಲಿಚಿತ್ರ ‘ಕೆ 3’ ಸುಮಾರು 23 ನಿಮಿಷಗಳ ಈ ಟೆಲಿಚಿತ್ರವನ್ನು ಶ್ರೀಸಾಯಿ ವೆಂಕಟೇಶ್ವರ ಟಾಕೀಸ್ ಲಾಂಛನದಲ್ಲಿ ಶಿಲ್ಪ ಶ್ರೀನಾಥ್ ನಿರ್ಮಿಸಿದ್ದಾರೆ.

 Sharesee more..
‘ನಿನ್ನ ಸನಿಹಕೆ’ ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರ ; ಸೂರಜ್ ಗೌಡ ಆಕ್ಸಿಡೆಂಟಲ್ ಡೈರೆಕ್ಟರ್!

‘ನಿನ್ನ ಸನಿಹಕೆ’ ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರ ; ಸೂರಜ್ ಗೌಡ ಆಕ್ಸಿಡೆಂಟಲ್ ಡೈರೆಕ್ಟರ್!

25 Feb 2020 | 8:49 PM

ಬೆಂಗಳೂರು, ಫೆ 25 (ಯುಎನ್‍ಐ) ಡಾ ರಾಜ್ ಕುಮಾರ್ ಕುಟುಂಬದ ಕುಡಿ, ನಟ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರೀಕರಣ ಮುಗಿದಿದ್ದು, ತೆರೆಹಿಂದಿನ ತುಣುಕುಗಳು ಬಿಡುಗಡೆಯಾಗಿದೆ ಏಪ್ರಿಲ್ ಕೊನೆಯ ವಾರದಲ್ಲಿ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ

 Sharesee more..
ರಘು ದೀಕ್ಷಿತ್ ಹಾಡಿದ ಕೆಟ್ಟ ಹಾಡು ಯಾವುದು?

ರಘು ದೀಕ್ಷಿತ್ ಹಾಡಿದ ಕೆಟ್ಟ ಹಾಡು ಯಾವುದು?

25 Feb 2020 | 7:52 PM

ಬೆಂಗಳೂರು, ಫೆ 25 (ಯುಎನ್‍ಐ) ವಿಶಿಷ್ಟ ಕಂಠಸಿರಿಯ, ‘ನಿನ್ನಾ ಪೂಜೆಗೆ ಬಂದೆ ಮಾದೇಶ್ವರ’ ಹಾಡಿನಿಂದ ಜನಪ್ರಿಯರಾಗಿರುವ ಖ್ಯಾತ ಗಾಯಕ ರಘು ದೀಕ್ಷಿತ್ ಇತ್ತೀಚಿಗೆ ದನಿಯಾಗಿರುವ ಕೆಲ ಗೀತೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ

 Sharesee more..

ಫೆ 28ರಂದು ‘ಜಗ್ಗಿ ಜಗನ್ನಾಥ್’ ತೆರೆಗೆ

25 Feb 2020 | 7:03 AM

 Sharesee more..