Wednesday, Jun 3 2020 | Time 09:58 Hrs(IST)
  • ನಿಸರ್ಗಚಂಡಮಾರುತ ಬೀತಿ: ಮುಂಬೈನಗರದಲ್ಲಿ ನಿಷೇಧಾಜ್ಞೆ
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
Sports Share

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್: ಮೇರಿ ಕೋಮ್ ಸೇರಿ ಐವರು ಕ್ವಾರ್ಟರ್ ಫೈನಲ್‍ಗೆ

ನವದೆಹಲಿ, ಅ 9 (ಯುಎನ್‍ಐ) ಭಾರತದ ಮೇರಿ ಕೋಮ್(51 ಕೆ.ಜಿ), ಮಂಜು ರಾಣಿ (48 ಕೆ.ಜಿ), ಕವಿತಾ (81+ಕೆ.ಜಿ), ಲೊವ್ಲೀನಾ(69 ಕೆ.ಜಿ), ಜುಮುನಾ ಬೊರೊ (54 ಕೆ.ಜಿ) ಅವರು ರಷ್ಯಾದ ಉಲಾನ್-ಉಡೆಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಕ್ವಾರ್ಟರ್ ಫೈನಲ್‍ಗೆ ತಲುಪಿದ್ದಾರೆ.
ಬುಧವಾರ ಮೊದಲನೇ ಬೌಲ್ಟ್‍ನಲ್ಲಿ ಅಲ್ಗೇರಿಯಾದ ಬಾಕ್ಸರ್ ಔಯುದಾಡ್ ವಿರುದ್ಧ ಭಾರತದ ಜಮುನಾ ಬೊರೊ ಅವರು 5-0 ಅಂತರದಲ್ಲಿ ಗೆದ್ದು ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು. 69 ಕೆ.ಜಿ ವಿಭಾಗದಲ್ಲಿ ಭಾರತದ ಮತ್ತೊಬ್ಬ ಬಾಕ್ಸರ್ ಲೊವ್ಲೀನಾ ಅವರು ಔಮೈಮಾ ಬಿ ಎಲ್ ಅಹ್ಬಿಬ್ ವಿರುದ್ಧ 5-0 ಅಂತರದಲ್ಲಿ ಜಯ ಸಾಧಿಸಿದರು.
ಆರು ಬಾರಿ ಚಾಂಪಿಯನ್ ಮೇರಿ ಕೋಮ್ ಅವರು ಅಂತಿಮ ಎಂಟರ ಘಟ್ಟದಲ್ಲಿ ಕೊಲಂಬಿಯಾದ ಲೊರೆನಾ ವಿಕ್ಟೋರಿಯಾ ವ್ಯಾಲೆನ್ಸಿಯಾ ವಿರುದ್ಧ ಗುರುವಾರ ಕಾದಾಟ ನಡೆಸಲಿದ್ದಾರೆ. ಇನ್ನು, ಆರನೇ ಶ್ರೇಯಾಂಕದ ಮಂಜು ರಾಣಿ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೋರಿಯಾದ ಅಗ್ರ ಶ್ರೇಯಾಂಕಿತೆ ಕಿಮ್ ಹ್ಯೂಂಗ್ ವಿರುದ್ಧ ಕಠಿಣ ಸವಾಲು ಎದುರಾಗಲಿದೆ.
ಕವಿತಾ ಚಾಹಲ್ ಅವರು ಬೆಲಾರಸ್‍ನ ಕಟ್ಸಿಯಾರ್ಣ ಕವಾಲೆಯ ವಿರುದ್ಧ ಆಡಲಿದ್ದಾರೆ. ಭಾರತದ ಈ ಐದು ಬಾಕ್ಸರ್‍ಗಳಿಗೆ ಮೊದಲನೇ ಸುತ್ತಿನಲ್ಲಿ ಬೈ ಸಿಕ್ಕಿತ್ತು.
ಯುಎನ್‍ಐ ಆರ್ ಕೆ 0825