Sunday, May 31 2020 | Time 17:37 Hrs(IST)
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
 • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
 • ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್
 • ದೇವಸ್ಥಾನ ತೆರೆಯುವ ಬಗ್ಗೆ ಆಕಾಶ್‌ ಛೋಪ್ರ ಅಸಂಬದ್ಧ ಹೇಳಿಕೆಗೆ ಅಭಿಮಾನಿಗಳು ಕೆಂಡಮಂಡಲ
 • ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ
 • ಕೋವಿಡ್-19: ರಾಯಚೂರಿನಲ್ಲಿ ಗುಣಮುಖರಾದ 34 ಮಂದಿ ಬಿಡುಗಡೆ
 • ಹೊಸಪೇಟೆಯಲ್ಲಿ 12 5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ: ಸಚಿವ ಆನಂದ್ ಸಿಂಗ್‌
 • ಷೇರುದಾರರ ಸಹಾಯಕ್ಕಾಗಿ ಆರ್ ಐಎಲ್ ಮೊದಲ ಎಐ ಚಾಟ್ ಬಾಟ್ ಆರಂಭ
 • ಮುಂಗಾರು ಹಂಗಾಮಿಗೆ ಸಿದ್ಧತೆ: ಬಿತ್ತನೆ ಬೀಜಗಳಿಗಿಲ್ಲ ಕೊರತೆ; 2 59 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
business economy Share

ಮೇಕ್ಇನ್ ಇಂಡಿಯಾ; ಮಾಲಿನ್ಯರಹಿತ ವಿನೂತನ ಸ್ಲೋ ಸ್ಪೀಡ್ ಇ-ಸ್ಕೂಟರ್ ‘ಲೈಟ್’ ಬಿಡುಗಡೆ

ಬೆಂಗಳೂರು, ನ.8 (ಯುಎನ್ಐ) ಯುವ ಪೀಳಿಗೆಗಾಗಿ ಒಕಿನವಾ ಸಂಸ್ಥೆಯು ಮಾಲಿನ್ಯರಹಿತ ವಿನೂತನ ಸ್ಲೋ ಸ್ಪೀಡ್ ಇ-ಸ್ಕೂಟರ್ ‘ಲೈಟ್’ (LITE) ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋರೂಮ್ ಬೆಲೆ 59,990 ರೂ. ಯಾಗಿದ್ದು, ಯುವ ಸಮೂಹವನ್ನು ಗುರಿಯಾಗಿಸಿ ಮಾರುಕಟ್ಟೆಗೆ ಪರಿಚಯಿಸಿರುವ ‘ಲೈಟ್’ ಇ-ಸ್ಕೂಟರ್ ಇಟಲಿಯನ್ ವಿನ್ಯಾಸ ಹೊಂದಿದೆ. ಪ್ರಕಾಶಮಾನ ಬಿಳಿ (Sparkle White) ಮತ್ತು ಪ್ರಕಾಶಮಾನ ನೀಲಿ (Sparkle Blue) ವರ್ಣಗಳಲ್ಲಿ ಲಭ್ಯವಿದೆ.
ಒನ್ ಫಾರ್ ಆಲ್ ಸಂದೇಶವನ್ನು ಸಾರುವ ‘ಲೈಟ್’ ಇ-ಸ್ಕೂಟರ್ ಯುವ ಸಮೂಹ ಸೇರಿದಂತೆ ಚಾಲನೆ ಮಾಡಲು ಎಲ್ಲಾರಿಗೂ ಸುಲಭ. ಕಳಚಬಹುದಾದ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಗ್ರಾಹಕರಿಗೆ ಹಣದ ಉಳಿತಾಯ ಮಾಡುವುದರ ಜತೆಗೆ ‘ಲೈಟ್’ ಪರಿಸರ ಸ್ನೇಹಿ ಕೂಡ ಆಗಿದೆ. 3 ವರ್ಷಗಳ ಮೋಟರ್ ಮತ್ತು ಬ್ಯಾಟರಿ ವಾರಂಟಿಯನ್ನು ಸಂಸ್ಥೆಯು ಗ್ರಾಹಕರಿಗೆ ಒದಗಿಸುತ್ತದೆ. ಬ್ಯಾಟರಿಯನ್ನು ಕಳ್ಳರಿಂದ ರಕ್ಷಿಸಲು ಆ್ಯಂಟಿ-ಥೆಫ್ಟ್ ವೈಶಿಷ್ಟ್ಯ ಅಳವಡಿಸಲಾಗಿದ್ದು ಬ್ಯಾಟರಿಯ ಕಳ್ಳತನ ಅಸಾಧ್ಯ.
ಎಲ್ಇಡಿ ಸ್ಪೀಡೊಮೀಟರ್, ಎಲ್ಇಡಿ ಹೆಡ್ಲೈಟ್, ಎಲ್ಇಡಿ ವಿಂಕರ್ಸ್, ಎಲ್ಇಡಿ ಹಿಂಬದಿ ಲೈಟ್, ಅಟೋಮ್ಯಾಟಿಕ್ ಎಲೆಕ್ಟ್ರಿಕ್ ಹ್ಯಾಂಡಲ್, ಸೆಲ್ಫ್ ಸ್ಟಾರ್ಟ್ ಪುಶ್ ಬಟನ್, ಫ್ರಂಟ್ ಸಸ್ಪೆಂಷನ್ ವೈಶಿಷ್ಟ್ಯಗಳನ್ನು ‘ಲೈಟ್’ನಲ್ಲಿ ಅಳವಡಿಸಲಾಗಿದ್ದು ಗಟ್ಟಿಮುಟ್ಟಾದ ಸ್ಟೀಲ್ ಮೇಲ್ಮೈಯನ್ನು ಹೊಂದಿದೆ.
“ಹೊಸ ‘ಲೈಟ್’ ಇ-ಸ್ಕೂಟರ್ ಬಿಡುಗಡೆ ಮಾಡುವುದರ ಮೂಲಕ ಪೆಟ್ರೋಲ್ ವಾಹನಗಿಂದ ಎಲೆಕ್ಟ್ರಿಕ್ ವಾಹನ ಕಡಿಮೆ ದಕ್ಷ ಎನ್ನುವ ನಂಬಿಕೆಯನ್ನು ಹೊಗಲಾಡಿಸಿದ್ದೇವೆ. ಯುವ ಸಮೂಹವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇದರ ವಿನ್ಯಾಸವನ್ನು ಮಾಡಲಾಗಿದೆ. ಮಹಿಳೆ ಮತ್ತು ವಯಸ್ಕರರಿಗೂ ಸಹ ‘ಲೈಟ್’ ಹೊಂದುವಂತೆ ತಯಾರಿಸಲಾಗಿದೆ” ಎಂದು ಒಕಿನವಾ ಆಟೋಟೆಕ್ ಪ್ರೈ ಲಿ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೀತೆಂದ್ರ ಶರ್ಮ ತಿಳಿಸಿದ್ದಾರೆ.
ಯುಎನ್ಐ ಎಎಚ್ 1154