Monday, May 27 2019 | Time 09:17 Hrs(IST)
International Share

ಮೆಡಿಟೇರಿಯನ್‍ನಲ್ಲಿ ದೋಣಿ ದುರಂತ: 45 ಬಾಂಗ್ಲಾದೇಶಿ ಪ್ರಜೆಗಳು ಇನ್ನೂ ನಾಪತ್ತೆ

ಢಾಕಾ, ಮೇ 15 (ಐಎನ್ಐ) ಲಿಬಿಯಾದಿಂದ ಯುರೋಪ್ ತಲುಪಲು ಪ್ರಯತ್ನಿಸುವಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಶುಕ್ರವಾರ ದೋಣಿ ಮಗುಚಿದ ದುರಂತದಲ್ಲಿ ಇನ್ನೂ 40ರಿಂದ 45 ಬಾಂಗ್ಲಾದೇಶಿ ಪ್ರಜೆಗಳು ಕಾಣೆಯಾಗಿದ್ದಾರೆ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 50 ಜನರಿದ್ದ ಒಂದು ದೋಣಿ ಹಾಗೂ 70 ಜನರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ದೋಣಿ ಮೇ 9 ರ ರಾತ್ರಿ ಒಂದೇ ಸಮಯಕ್ಕೆ ಹೊರಟಿವೆ. 50 ಜನರಿದ್ದ ದೋಣಿ ಇಟಲಿಯನ್ನು ಸೇರಿರುವ ಸಾಧ್ಯತೆ ಇದ್ದು, ಎರಡನೇ ದೋಣಿ ಸಮುದ್ರದಲ್ಲಿ ಮುಳುಗಿದೆ ಎಂದು ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿರುವ ಬಾಂಗ್ಲಾದೇಶದ ದೂತಾವಾಸ ಕಚೇರಿಯ ಕಾರ್ಮಿಕ ಸಲಹೆಗಾರ ಎಎಸ್ಎಂ ಅಶ್ರಫುಲ್ ಇಸ್ಲಾಂ ತಿಳಿಸಿದ್ದಾರೆ.
ಮುಳುಗಿದ ದೋಣಿಯಿಂದ 14 ಬಾಂಗ್ಲಾ ಪ್ರಜೆಗಳನ್ನು ರಕ್ಷಿಸಲಾಗಿದ್ದು, ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತನನ್ನು ಶರಿಯತ್‍ ಪುರದ ನರಿಯಾ ಗ್ರಾಮದ ಉತ್ತಮ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುಮಾರು 30-35 ಬಾಂಗ್ಲಾ ದೇಶೀಯರು ದೋಣಿ ದುರಂತದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಈ ಮುನ್ನ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ತಿಳಿಸಿದ್ದರು. ದುರಂತಕ್ಕೀಡಾದ ದೋಣಿ ಲಿಬಿಯಾದ ಝೌರಾದಿಂದ ಹೊರಟಿತ್ತು ಎನ್ನಲಾಗಿದೆ.
ಲಿಬಿಯಾದ ಬಾಂಗ್ಲಾದೇಶದ ರಾಯಭಾರಿ ಎಸ್.ಕೆ.ಸಿಕಂದರ್ ಅಲಿ ಮತ್ತು ಕಾರ್ಮಿಕ ಸಲಹೆಗಾರರಾದ ಅಶ್ರಸುಲ್ ಇಸ್ಲಾಂ ಅವರು ಪರಿಸ್ಥಿತಿಯನ್ನು ಪರಾಮರ್ಶಿಸಲು ಟುನಿಷಿಯಾದಲ್ಲಿದ್ದಾರೆ.
ಮೆಡಿಟರೇನಿಯನ್ ಸಮುದ್ರದಲ್ಲಿ ಶುಕ್ರವಾರ ಸಂಭವಿಸಿದ ದೋಣಿ ದುರಂತದಲ್ಲಿ 27 ಬಾಂಗ್ಲಾ ದೇಶಿ ಪ್ರಜೆಗಳು ಸಾವನ್ನಪ್ಪಿರುವ ಶಂಕೆ ಇದೆ ಎಂದು ಬಾಂಗ್ಲಾದೇಶ ರೆಡ್ ಕ್ರೆಸೆಂಟ್ ಸೊಸೈಟಿ ದೃಢಪಡಿಸಿದೆ.
ಕಳೆದ ಜನವರಿಯಿಂದ ನಡೆದ ದೋಣಿ ದುರಂತಗಳಲ್ಲಿ ಶುಕ್ರವಾರ ಸಂಭವಿಸಿರುವ ದುರಂತ ಘೋರವೆನಿಸಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಘಟನೆ ತಿಳಿಸಿದೆ.
ಪ್ರತಿ ವರ್ಷ ಸಾವಿರಾರು ಬಾಂಗ್ಲಾದೇಶಿ ವಲಸಿಗರು ಯೂರೋಪ್‍ನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಅಪಾಯಕಾರಿ ಮೆಡಿಟೇರಿಯನ್‍ ಸಮುದ್ರ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪ್ರಯತ್ನಗಳಲ್ಲಿ ಅನೇಕರು ತಲುಪುವ ಮೊದಲೇ ಸಮುದ್ರದಲ್ಲೇ ಸಾವನ್ನಪ್ಪುತ್ತಾರೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 2029
More News
ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

26 May 2019 | 5:45 PM

ನವದೆಹಲಿ, ಮೆ 26 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ದಕ್ಷಿಣ ಏಷಿಯಾ ಭಾಗದ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಯ ಧ‍್ಯೇಯವನ್ನು ಪುನರುಚ್ಚರಿಸಿದ್ದು, ಜನರ ಬದುಕಿನ ಸುಧಾರಣೆಗಾಗಿ ಒಟ್ಟಿಗೆ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

 Sharesee more..

ಪೆರುವಿನಲ್ಲಿ ಭೂಕಂಪನ; 7 5 ಕಂಪನಾಂಕ ದಾಖಲು

26 May 2019 | 2:53 PM

 Sharesee more..

ಥೈಲ್ಯಾಂಡ್ ಮಾಜಿ ಪ್ರಧಾನಿ ನಿಧನ

26 May 2019 | 12:08 PM

 Sharesee more..

ಪಿಎನ್‌ಜಿ ಪ್ರಧಾನಿ ಪೀಟರ್ ಒನೀಲ್‌ ರಾಜೀನಾಮೆ

26 May 2019 | 11:37 AM

 Sharesee more..