Monday, Sep 16 2019 | Time 19:38 Hrs(IST)
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
 • ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ
 • ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ
 • ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ ಬಂಧನ: ಕೇಂದ್ರ ಸರ್ಕಾರ
 • ರೈಲು ನಿಲ್ದಾಣಗಳ ಮೇಲಿನ ಯಾವುದೇ ದಾಳಿ ತಡೆಯಲು ಹೆಚ್ಚಿನ ಭದ್ರತಾ ವ್ಯವಸ್ಥೆ
 • “ಶಕುಂತಲಾ ದೇವಿ” ಚಿತ್ರೀಕರಣ ಆರಂಭ
National Share

ಮಾನಸ ಸರೋವರ ಯಾತ್ರೆಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಚಾಲನೆ

ನವದೆಹಲಿ, ಜೂನ್ 11 (ಯುಎನ್ಐ) ಪ್ರಸಕ್ತ ಸಾಲಿನ ಐತಿಹಾಸಿಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಮೊದಲ ತಂಡದ ಪ್ರಯಾಣಕ್ಕೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಚಾಲನೆ ನೀಡಿದರು.

ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು, ಮೊದಲ ತಂಡದ ಕೈಲಾಸ ಮಾನಸ ಸರೋವರ ಯಾತ್ರೆಗೆ ಚಾಲನೆ ನೀಡಿದರು. ಮೊದಲ ಗುಂಪಿನಲ್ಲಿ ಇಬ್ಬರು ಸಂಪರ್ಕಾಧಿಕಾರಿಗಳು ಹಾಗೂ 58 ಯಾತ್ರಿಕರಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಯಾತ್ರಿಕರಿಗೆ ಸಚಿವರು ಸುರಕ್ಷತೆಯಿಂದ ಯಾತ್ರೆಯನ್ನು ಪೂರೈಸಿ ಹಿಂತಿರುಗುವಂತೆ ಹಾಗೂ ಪ್ರಯಾಣ ಸುಖಕರವಾಗಿರುವಂತೆ ಹಾರೈಸಿದ್ದಾರೆ.

ವಿದೇಶಾಂಗ ಸಚಿವರು ವಿವಿಧ ಸಚಿವಾಲಯಗಳು, ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಉತ್ತರ ಖಂಡದ ರಾಜ್ಯ ಸರ್ಕಾರ, ಸಿಕ್ಕಿಂ ಮತ್ತು ದೆಹಲಿ ಯಾತ್ರೆಯನ್ನು ಆಯೋಜಿಸುವಲ್ಲಿ ಇವರೆಲ್ಲರ ಪಾತ್ರ ಪ್ರಮುಖವಾದುದು ಎಂದು ಅವರು ತಿಳಿಸಿದರು.

ಕೈಲಾಸ ಯಾತ್ರೆಗೆ ಚೀನಾ ಸರ್ಕಾರ ಬಾಹ್ಯ ಸಹಕಾರ ನೀಡಲು ಮುಂದಾಗಿದ್ದು, ಎರಡು ದೇಶಗಳ ನಡುವಿನ ಸೌಹಾರ್ಧಯುತ ಸಂಬಂಧವನ್ನು ವೃದ್ಧಿಸಲು ಇದು ಸಹಕಾರಿಯಾಗಲಿದೆ. ಹಾಗೂ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ತೀರ್ಥಯಾತ್ರೆಯ ಆಸಕ್ತಿ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಭಾರತ ಮತ್ತು ಚೀನಾ ರಾಯಭಾರಿ ಜೈ ಶಂಕರ್ ವಿವರಿಸಿದರು.

ಯುಎನ್ಐ ಡಿಸಿ ಎಎಸ್ 2047
More News
ಕಾಶ್ಮೀರ ಅಭಿವೃದ್ಧಿ ವಿಷಯ ಕುರಿತು ಮಲಿಕ್- ಮೋದಿ ಮಾತುಕತೆ

ಕಾಶ್ಮೀರ ಅಭಿವೃದ್ಧಿ ವಿಷಯ ಕುರಿತು ಮಲಿಕ್- ಮೋದಿ ಮಾತುಕತೆ

16 Sep 2019 | 3:47 PM

ನವದೆಹಲಿ, ಸೆ 16 (ಯುಎನ್ಐ) ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

 Sharesee more..

"ಹೌಡಿ ಮೋದಿ" ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟ್ರಂಪ್ ಸಮ್ಮತಿ: ಪ್ರಧಾನಿ ಮೋದಿ ಹರ್ಷ

16 Sep 2019 | 3:39 PM

ನವದೆಹಲಿ, ಸೆ 16 (ಯುಎನ್ಐ) ಇದೇ ತಿಂಗಳ 22ರಂದು ಹೂಸ್ಟನ್‌ನಲ್ಲಿ ನಡೆಯಲಿರುವ 'ಹೌಡಿ ಮೋದಿ' ಎಂಬ ವಿಶೇಷ ಸಮುದಾಯ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಸ ವ್ಯಕ್ತಪಡಿಸಿದ್ದಾರೆ.

 Sharesee more..
ಪತ್ರದ ಮೂಲಕ ತಂದೆಗೆ ಹುಟ್ಟುಹಬ್ಬದ ಶುಭ ಕೋರಿದ ಕಾರ್ತಿ

ಪತ್ರದ ಮೂಲಕ ತಂದೆಗೆ ಹುಟ್ಟುಹಬ್ಬದ ಶುಭ ಕೋರಿದ ಕಾರ್ತಿ

16 Sep 2019 | 3:03 PM

ನವದೆಹಲಿ, ಸೆ.16 (ಯುಎನ್ಐ) ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂಗೆ ಸೋಮವಾರ ದೆಹಲಿಯ ತಿಹಾರ್ ಜೈಲಿನಲ್ಲೇ ಹುಟ್ಟುಹಬ್ಬದ ದಿನ ಕಳೆದಿದ್ದು,ಅವರ ಪುತ್ರ, ಸಂಸದ ಕಾರ್ತಿ ತಮ್ಮ ತಂದೆಗೆ ಪತ್ರದ ಮೂಲಕವೇ ಶುಭಾಶಯ ಕೋರಿದ್ದಾರೆ.

 Sharesee more..

ಜಮ್ಮು-ಕಾಶ್ಮೀರ ರಾಜ್ಯಪಾಲರಿಂದ ಪ್ರಧಾನಿ ಭೇಟಿ

16 Sep 2019 | 1:34 PM

 Sharesee more..
ದೂರದರ್ಶನಕ್ಕೆ 60ರ ಸಂಭ್ರಮ: ಅಂಚೆ ಚೀಟಿ ಬಿಡುಗಡೆ ಮಾಡಿದ ಜಾವಡೇಕರ್

ದೂರದರ್ಶನಕ್ಕೆ 60ರ ಸಂಭ್ರಮ: ಅಂಚೆ ಚೀಟಿ ಬಿಡುಗಡೆ ಮಾಡಿದ ಜಾವಡೇಕರ್

16 Sep 2019 | 12:52 PM

ನವದೆಹಲಿ, ಸೆ 16 (ಯುಎನ್ಐ) ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನಕ್ಕೆ 60 ವರ್ಷ ಪೂರ್ಣಗೊಂಡ ನೆನಪಿಗಾಗಿ ಸೋಮವಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.ದೂರದರ್ಶನದ 60ನೇ ವರ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೂರದರ್ಶನದ ಸುದ್ದಿ ನಿಖರವಾಗಿದ್ದು, ಯಾವುದೇ ಭಾವನೆಗಳನ್ನು ಕೆದಕುವ ವಿಷಯಗಳಿರುವುದಿಲ್ಲ ಎಂದು ಹೇಳಿದರು.

 Sharesee more..