Tuesday, Jan 21 2020 | Time 00:13 Hrs(IST)
Health -Lifestyle Share

ಮಿಸೆಸ್ ಇಂಡಿಯಾ ಐಯಾಮ್ ಫವರ್ ಫುಲ್ ಕರ್ನಾಟಕ 2020 ಸೌಂದರ್ಯ ಸ್ಪರ್ಧೆ: ಗ್ರ್ಯಾಂಡ್ ಫಿನಾಲೆಗೆ 20 ಗೃಹಣಿಯರ ಆಯ್ಕೆ

ಬೆಂಗಳೂರು, ಜ 6 [ಯುಎನ್ಐ] ಮದುವೆಯಾಗಿ ಸಂಸಾರದ ನೊಗ ಹೊತ್ತ ಆ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಪುಟಿದೇಳುತ್ತಿತ್ತು. ದಾಂಪತ್ಯ ಬದುಕಿಗೆ ಕಾಲಿಟ್ಟ ನಂತರ ಎಲ್ಲವೂ ಮುಗಿದು ಹೋಯಿತು ಎನ್ನುವವರಿಗೆ ಈ ಮಹಿಳೆಯರು ಜ್ವಲಂತ ನಿದರ್ಶನವಾಗಿದ್ದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ “ ಮಿಸೆಸ್ ಇಂಡಿಯಾ ಐಯಾಮ್ ಫವರ್ ಪುಲ್ ಕರ್ನಾಟಕ 2020 ಸೌಂದರ್ಯ ಸ್ಪರ್ಧೆಯ ಅಂತಿಮ ಆಡಿಷನ್” ನಲ್ಲಿ ಈ ಮಹಿಳೆಯರು ಥಳಕು ಬಳುಕಿನಿಂದ ಹಾಕುತ್ತಿದ್ದ ಹೆಜ್ಜೆ ಹಲವಾರು ಮಂದಿಗೆ ಸ್ಫೂರ್ತಿಯ ಸೆಲೆಯಾಗಿತ್ತು. ಹೊಸ ಕನಸು ಕಾಣಲು, ಹೊಸ ಬದುಕು ಕಟ್ಟಿಕೊಳ್ಳಲು, ಹೊಸ ಅವಕಾಶಗಳನ್ನು ಹುಡುಕಿಕೊಳ್ಳಲು ಈ ಆಡಿಷನ್ ಪ್ರೇರಣೆ ನೀಡುತ್ತಿತ್ತು.
ಮದುವೆಯಾದ ಮಹಿಳೆಯರಿಗಾಗಿ ಆಯೋಜಿಸಲಾದ ಸೌಂದರ್ಯ ಸ್ಪರ್ಧೆ ಇದಾಗಿದ್ದು, ಒಟ್ಟು 40 ಮಂದಿ ಸುಂದರ ಮಹಿಳೆಯರು ಭಾಗವಹಿಸಿದ್ದರು. ಈ ಪೈಕಿ 20 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಗಿದೆ. ಇವರು ಗ್ರ್ಯಾಂಡ್ ಫಿನಾಲೆಯ ಅಂತಿಮ ಹಣಾಹಣಿಯಲ್ಲಿ ಪಾಲ್ಗೊಳ್ಳಲು ವೇದಿಕೆ ಅಣಿಯಾಗಿದೆ.
ಮದುವೆಯಾದ ಮಹಿಳೆಯರ ಪ್ರತಿಭೆ ಗುರುತಿಸಿ ಮಾಡೆಲಿಂಗ್, ಜಾಹೀರಾತು, ಸಿನಿಮಾ ಮತ್ತಿತರ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ನಂದಿನಿ ನಾಗರಾಜ್ ಅವರು ಈ ಸ್ಪರ್ಧೆಯನ್ನು ಆಯೋಜಿಸಿದ್ದರು. ಮದುವೆಯಾದ ಮಹಿಳೆಯರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಉತ್ತೇಜನ ನೀಡುವುದೇ ಇದರ ಉದ್ದೇಶವಾಗಿದೆ.
ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಿಂದ ಬಂದಿದ್ದ ಗೃಹಿಣಿಯರನ್ನು ಹೆಸರಾಂತ ಚಿತ್ರನಟರು, ಜ್ಯೂರಿ ಆಗಿ ಪಾಲ್ಗೊಂಡು ಅಂತಿಮ ಸುತ್ತಿಗೆ ಆಯ್ಕೆಮಾಡಿದರು. ಚಿತ್ರನಟ ಮಯೂರ್ ಪಟೇಲ್, ಮಿಸೆಸ್ ಗ್ಲೋಬೆಲ್ ಯೂನಿವರ್ಸಲ್ ಸಾತ್ವಿ ರೆಡ್ಡಿ, ಮಿಸೆಸ್ ವರ್ಲ್ಡ್ ವೈಡ್ ಶ್ವೇತಾ ನಿರಂಜನ್ ಮಿಸೆಸ್ ಇಂಡಿಯಾ ಮಧುರ ವಿ ಆಚಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಯುಎನ್ಐ ವಿಎನ್ 1117
More News
ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

25 Dec 2019 | 4:06 PM

ನವದೆಹಲಿ, ಡಿ 25 [ಯುಎನ್ಐ] ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು, ಬರಹ, ರಾಜಕೀಯ ಜೀವನ ಕುರಿತು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವರಾಗಿದ್ದ ಸಂದರ್ಭದಲ್ಲಿ ಈಗಿನ ಉಪ ರಾಷ್ಟ್ರಪತಿ ಎಂ.

 Sharesee more..

ಉತ್ತರ ಯೆಮೆನ್‍: ಹಂದಿ ಜ್ವರಕ್ಕೆ 8 ಜನರ ಸಾವು

19 Dec 2019 | 10:36 AM

 Sharesee more..