Monday, Feb 24 2020 | Time 17:40 Hrs(IST)
 • ಅಯೋಧ್ಯೆ: ಐದು ಎಕರೆ ಪರ್ಯಾಯ ಭೂಮಿ ಸ್ವೀಕರಿಸಲು ಸುನ್ನಿ ಮಂಡಳಿ ನಿರ್ಧಾಋ
 • ರವಿ ಪೂಜಾರಿ ವಿರುದ್ಧ 97 ಪ್ರಕರಣ ದಾಖಲು; ಮಾರ್ಚ್ 7ರವರೆಗೆ ಸಿಸಿಬಿ ಕಸ್ಟಡಿಗೆ: ಎಡಿಜಿಪಿ ಅಮರ್ ಕುಮಾರ್ ಪಾಂಡೆ
 • 21 ನೇ ಶತಮಾನದಲ್ಲಿ ಭಾರತ-ಅಮೆರಿಕ ಸಂಬಂಧಗಳದ್ದು ಮಹತ್ವದ ಪಾತ್ರ-ಪ್ರಧಾನಿ ಮೋದಿ
 • ಮಹದಾಯಿ ತೀರ್ಪು: ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಎಚ್ ಕೆ ಪಾಟೀಲ್ ಸರ್ಕಾರಕ್ಕೆ ಒತ್ತಾಯ
 • ಟ್ರಂಪ್ ಭೇಟಿ ಹಿನ್ನೆಲೆ-ಕಾಶ್ಮೀರದಾದ್ಯಂತ ಭದ್ರತಾಪಡೆ ಹದ್ದಿನ ಕಣ್ಣು
 • ಕೆ2 ಸಮಸ್ಯೆಯಿಂದ ಶಿಕ್ಷಕರ ವೇತನ ವಿಳಂಬ: ರಮೇಶ್ ಬಾಬು ಆರೋಪ
 • ಭೂಗತ ಪಾತಕಿ ರವಿ ಪೂಜಾರಿಗೆ ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ
 • ಗೌತಮ್ ಸ್ಪಿನ್ ಮೋಡಿ : ಸತತ ಮೂರನೇ ಬಾರಿ ಸೆಮಿಫೈನಲ್ ತಲುಪಿದ ಕರ್ನಾಟಕ
 • ಮೂರು ಶತಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ನಾಳೆ ಸಹಿ: ಟ್ರಂಪ್
 • ಬನ್ನೇರುಘಟ್ಟ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕುಗ್ಗಿಸುವ ಪ್ರಸ್ತಾವನೆಗೆ ಬೆಂಗಳೂರು ಪ್ರತಿಷ್ಠಾನ ವಿರೋಧ
 • ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ
 • ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ನೂರು ಕೋಟಿ : ದೇಶಕ್ಕೆ ಲಾಭವಿಲ್ಲ -ರಾಜ್ಭರ್
 • ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಯುವಜನತೆಗೆ ಉಪರಾಷ್ಟ್ರಪತಿ ಕರೆ
 • ಡಿ ವೈ ಪಾಟೀಲ್ ಟಿ20 ಆಡಲು ಸಜ್ಜಾದ ಹಾರ್ದಿಕ್ ಪಾಂಡ್ಯ
 • ಕಾರನ್ನು ವಿದ್ಯುತ್ ಕಂಬಕ್ಕೆ ಗುದ್ದಿ, ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾದ ಶಾಸಕರ ಮೊಮ್ಮಗ
International Share

ಯು.ಕೆ.ಕ್ಯಾಬಿನೆಟ್‌ ಪುನರ್ರಚನೆ: ಮೂವರು ಭಾರತೀಯ ಮೂಲದ ಸಂಸದರಿಗೆ ಸಚಿವ ಸ್ಥಾನ

ಯು.ಕೆ.ಕ್ಯಾಬಿನೆಟ್‌ ಪುನರ್ರಚನೆ: ಮೂವರು ಭಾರತೀಯ ಮೂಲದ ಸಂಸದರಿಗೆ ಸಚಿವ ಸ್ಥಾನ
ಯು.ಕೆ.ಕ್ಯಾಬಿನೆಟ್‌ ಪುನರ್ರಚನೆ: ಮೂವರು ಭಾರತೀಯ ಮೂಲದ ಸಂಸದರಿಗೆ ಸಚಿವ ಸ್ಥಾನ

ಲಂಡನ್, ಫೆ. 14 (ಯುಎನ್‌ಐ) ತನ್ನ ಐತಿಹಾಸಿಕ ಗೆಲುವಿನ ಎರಡು ತಿಂಗಳ ನಂತರ, ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮೂವರು ಭಾರತೀಯ ಮೂಲದ ಸಂಸದರೊಂದಿಗೆ ಸಚಿವ ಸಂಪುಟವನ್ನು ಪುನರ್ರಚಿಸಿದ್ದಾರೆ.

ಇನ್ಫೋಸಿಸ್ ಸಹ ಸಂಸ್ಥಾಪಕ ರಾಮರಾವ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ (39) ಗುರುವಾರ ಯುನೈಟೆಡ್ ಕಿಂಗ್‌ಡಂನ ಹಣಕಾಸು ಮಂತ್ರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ಮೊದಲು ಈ ಸ್ಥಾನದಲ್ಲಿ ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಇದ್ದರು. ಅಲೋಕ್ ಶರ್ಮಾ ಅವರನ್ನು ಬ್ರಿಟಿಷ್ ಕ್ಯಾಬಿನೆಟ್‌ನಲ್ಲಿ ವ್ಯವಹಾರ ಕಾರ್ಯದರ್ಶಿಯಾಗಿ ಹಾಗೂ ಪ್ರೀತಿ ಪಟೇಲ್ ಅವರನ್ನು ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಜಾನ್ಸನ್ ಕಳೆದ ಜುಲೈನಲ್ಲಿ ಪಟೇಲ್ ಅವರನ್ನು ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಿಸಿದ್ದರು.

ಯುಕೆಯಲ್ಲಿ ಉನ್ನತ ಹುದ್ದೆ ಹೊಂದಿರುವ ಮೊದಲ ಬ್ರಿಟಿಷ್ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಾಜಿದ್ ಜಾವಿದ್ ಅವರು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಮತ್ತು ಅವರ ಮುಖ್ಯ ಸಲಹೆಗಾರ ಡೊಮಿನಿಕ್ ಕಮ್ಮಿಂಗ್ಸ್ ಅವರೊಂದಿಗೆ ದೇಶದ ಆರ್ಥಿಕತೆಯನ್ನು ನಿಯಂತ್ರಿಸುವ ವಿಷಯದಲ್ಲಿ ನಡೆದ ಆಂತರಿಕ ಹೋರಾಟದಲ್ಲಿ ಸೋತಿದ್ದಾರೆ ಎನ್ನಲಾಗಿದೆ.

ಸಾಜಿದ್ ಜಾವಿದ್ ಅವರ ಚಾನ್ಸಲರ್ ಆಗುತ್ತಾರೆ ಎಂದು ಪ್ರಧಾನಿಯವರು ಮಾಧ್ಯಮಗಳು ಮತ್ತು ಸಾರ್ವಜನಿಕರ ಮುಂದೆ ಕೆಲವು ದಿನಗಳ ಹಿಂದೆ ಭರವಸೆ ನೀಡಿದ್ದರು.

"ನಾನು ನಿಮಗೆ ಸಂಪೂರ್ಣ ಖಚಿತವಾದ ಭರವಸೆ ನೀಡಲಿದ್ದೇನೆ, ನಾನು ಸಾಜಿದ್ ಜಾವಿದ್‌ ರನ್ನು ನನ್ನ ಚಾನ್ಸಲರ್ ಆಗಿ ನೇಮಕ ಮಾಡಿಕೊಳ್ಳುತ್ತೇನೆ. ಅವರು ಒಬ್ಬ ಮಹಾನ್ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ, ಮತ್ತು ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಯುಎನ್ಐ ಎಎಚ್