Thursday, Aug 22 2019 | Time 14:55 Hrs(IST)
 • ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ-ಎಚ್ ಡಿ ದೇವೇಗೌಡ
 • ಇಸ್ರೋ ಮುಖ್ಯಸ್ಥ ಸಿವನ್ ಗೆ, ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ
 • ಮಾದಕ ವಸ್ತು ಮಾರಾಟ ಯತ್ನ: ವ್ಯಕ್ತಿ ಬಂಧನ
 • ಕೋಕೇನ್ ಮಾರಾಟ: ನೈಜೀರಿಯಾ ದೇಶದ ನಾಗರಿಕನ ಬಂಧನ
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
 • ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಆರೋಪ
 • ಬಾರ್ಸಿಲೋನಾದಿಂದ ನೇಯ್ಮಾರ್‌ಗೆ ಎರೆಡನೇ ಬಾರಿ ಅವಕಾಶ ಬಂದಿರಲಿಲ್ಲ: ವರದಿಗಳು
Sports Share

ರಣತಂತ್ರ ರೂಪಿಸುವಲ್ಲಿ ಧೋನಿ, ರೋಹಿತ್‌ ಪ್ರಧಾನ ಪಾತ್ರ: ಕೊಹ್ಲಿ

ಮುಂಬೈ, ಮೇ 15 (ಯುಎನ್‌ಐ) ಮುಂಬರುವ ಐಸಿಸಿ ವಿಶ್ವಕಪ್‌ ಮಹತ್ವದ ಟೂರ್ನಿಯಲ್ಲಿ ಉಪ ನಾಯಕ ರೋಹಿತ್‌ ಶರ್ಮಾ ಹಾಗೂ ಮಾಜಿ ನಾಯಕ ಹಾಗೂ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರು ಭಾರತ ತಂಡದ ರಣತಂತ್ರ ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಲಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.
ಮೇ 30 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗುತ್ತಿರುವ ಟೂರ್ನಿಯಲ್ಲಿ ತಂಡಕ್ಕೆ ಧೋನಿ ಅವರ ಅನುಭವ ಸಿಗುತ್ತಿರುವುದು ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಂಎಸ್‌ಡಿ ತಂಡದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
"ಕ್ರಿಕೆಟ್‌ ಕಂಡ ಅತ್ಯಂತ ಚತುರ ಆಟಗಾರ ಎಂ.ಎಸ್‌ ಧೋನಿ. ವಿಕೆಟ್‌ ಹಿಂಬದಿಯಲ್ಲಂತೂ ಅವರ ಇರುವಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದರಿಂದ ನನ್ನ ಕೆಲಸವನ್ನು ಮುಕ್ತವಾಗಿ ಮಾಡಲು ಸಾಧ್ಯವಾಗುತ್ತದೆ. ಎಂಎಸ್‌ ಅವರಲ್ಲಿನ ಅನುಭವ ಅತ್ಯಮೂಲ್ಯವಾದದ್ದು,'' ಎಂದು ಸಂದರ್ಶನವೊಂದರಲ್ಲಿ ಧೋನಿ ಕುರಿತಾಗಿ ಕೊಹ್ಲಿ ಗುಣಗಾನ ಮಾಡಿದ್ದಾರೆ.
"ನಾನು ಅವರ ನಾಯಕತ್ವದ ಅಡಿಯಲ್ಲಿ ಬೆಳೆದವನು. ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಈಗ ತಂಡದಲ್ಲಿರುವ ಕೆಲವೇ ಆಟಗಾರರಲ್ಲಿ ನಾನೂ ಒಬ್ಬ. ಅವರ ಬಗ್ಗೆ ಹೇಳುವುದು ಸಾಕಷ್ಟಿದೆ. ಅವರಿಗೆ ಎಲ್ಲದಕ್ಕಿಂತ ತಂಡ ಮೊದಲು. ಸದಾ ತಂಡಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಅವರ ಉಪಸ್ಥಿತಿ ತಂಡದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ವಿಕೆಟ್‌ ಹಿಂಬದಿ ಅವರು ಮಾಡಿರುವ ಕೆಲವು ಸ್ಟಂಪಿಂಗ್‌ಗಳು ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿವೆ'' ಎಂದು ಹೇಳಿದ್ದಾರೆ.
ಇನ್ನು ವಿಶ್ವಕಪ್‌ನಲ್ಲಿ ಧೋನಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಅವರ ನಾಯಕತ್ವದ ಗುಣಗಳು ಪ್ರಯೋಜನಕ್ಕೆ ಬರಲಿವೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, "ಐಪಿಎಲ್‌ನಲ್ಲಿ ಈ ಇಬ್ಬರೂ ಆಟಗಾರರು ತಮ್ಮ ತಂಡಗಳಿಗೆ ನಾಯಕನ ಜವಾಬ್ದಾರಿ ನಿಭಾಯಿಸಿರುವುದನ್ನು ಗಮನಿಸಿದಲ್ಲಿ, ಅವರು ತಂದಿಡುವ ಗುಣಮಟ್ಟ ಏನೆಂದು ಅರ್ಥವಾಗುತ್ತದೆ. ಅದರಲ್ಲೂ ಎಂ.ಎಸ್‌ ಒಬ್ಬ ದಂತಕತೆ. ವಿಶ್ವಕಪ್‌ನಲ್ಲಿ ಈ ಇಬ್ಬರೂ ಕೂಡ ತಂಡವನ್ನು ಮುನ್ನಡೆಸಲು ನನಗೆ ನೆರವಾಗುತ್ತಾರೆ ಎಂಬುದರಲ್ಲಿ ಸಂಶಯವೇ ಬೇಡ,'' ಎಂದಿದ್ದಾರೆ.
ರಣತಂತ್ರ ರಚಿಸಲು ತಂಡ ವಿಶ್ವಕಪ್‌ ವೇಳೆ ಪ್ರತಿ ಪಂದ್ಯಕ್ಕೂ ರಣತಂತ್ರ ರಚಿಸಲು ಪ್ರತ್ಯೇಕ ತಂಡ ಹೊಂದುವಂತೆ ತಂಡದ ಮ್ಯಾನೇಜ್ಮೆಂಟ್‌ ಸೂಚಿಸಿದೆ. ಈ ಕುರಿತಾಗಿ ಮಾತನಾಡಿರುವ ಕೊಹ್ಲಿ, "ವಿಶ್ವಕಪ್‌ ವೇಳೆ ತಂಡದ ರಣತಂತ್ರ ರಚಿಸಲು ಎಂಎಸ್‌ ಮತ್ತು ರೋಹಿತ್‌ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸುವಂತೆ ಸೂಚಿಸಲಾಗಿದೆ,'' ಎಂದು ಕೊಹ್ಲಿ ತಿಳಿಸಿದರು.
ಯುಎನ್‌ಐ ಆರ್‌ಕೆ ಜಿಎಸ್‌ಆರ್ 2149