Tuesday, Oct 22 2019 | Time 08:44 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
National Share

ರಫೆಲ್ ಪೂಜಾ ವಿವಾದ : ಕಾಂಗ್ರೆಸ್ ಹಾದಿ ಕಳೆದುಕೊಂಡಿದೆ-ಜಾವಡೇಕರ್

ನವದೆಹಲಿ, ಅ ೦೯ (ಯುಎನ್‌ಐ) ಶರನ್ನವರಾತ್ರಿಯ ವಿಜಯದಶಮಿಯಂದು ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದ ರಫೆಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿರುವ ಎನ್ ಡಿಎ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತಿರುಗೇಟು ನೀಡಿದೆ
ಮೊದಲ ರಫೆಲ್ ವಿಮಾನ ಸ್ವೀಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೆರವೇರಿಸಿದ ಶಸ್ತ್ರ ಪೂಜೆಯನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ ತನ್ನ ಹಾದಿ ಕಳೆದುಕೊಂಡಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಡನೆ ಮಾತನಾಡಿದ ಜಾವ್ಡೇಕರ್, ಬಿಜೆಪಿ ಸರ್ಕಾರದ ನಡೆಗೆ ವ್ಯಂಗ್ಯವಾಡುವ ಕಾಂಗ್ರೆಸ್ ಬಗ್ಗೆ ಹೇಳುವುದಕ್ಕೇನೂ ಇಲ್ಲ. ಪಕ್ಷ ತನ್ನ ರಾಜಕೀಯ ಹಾದಿ ಕಳೆದುಕೊಂಡಿದೆ ಎಂದಿದ್ದಾರೆ.
ರಫೆಲ್ ಯುದ್ಧ ವಿಮಾನ ಹಸ್ತಾಂತರವನ್ನು ಕೇಸರೀಕರಣಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಸಂದೀಪ್ ದೀಕ್ಷಿತ್, ಅಲ್ಕಾ ಲಂಬಾ ಟೀಕಿಸಿದ ಬೆನ್ನಲ್ಲೇ ಪ್ರಕಾಶ್ ಜಾವಡೇಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಯುಎನೈ ಎಸ್‌ಎ ವಿಎನ್ ೧೬೪೧
More News
ವಿಶ್ವಾದ್ಯಂತದ ಸೌರಶಕ್ತಿಯ ಅಪಾರ ಸಾಮರ್ಥ್ಯವನ್ನು ಬಳಸಿಕೊಂಡು, ಕೈಗೆಟುಕುವಂತೆ ಮಾಡಿ-ಉಪರಾಷ್ಟ್ರಪತಿ

ವಿಶ್ವಾದ್ಯಂತದ ಸೌರಶಕ್ತಿಯ ಅಪಾರ ಸಾಮರ್ಥ್ಯವನ್ನು ಬಳಸಿಕೊಂಡು, ಕೈಗೆಟುಕುವಂತೆ ಮಾಡಿ-ಉಪರಾಷ್ಟ್ರಪತಿ

21 Oct 2019 | 8:59 PM

ನವದೆಹಲಿ, ಅಕ್ಟೋಬರ್ 21 (ಯುಎನ್‌ಐ) ಸೌರಶಕ್ತಿಯ ಅಪಾರ ಸಾಮರ್ಥ್ಯ ಬಳಸಿಕೊಂಡು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದ ನೀತಿ ನಿರೂಪಕರು ಮತ್ತು ತಜ್ಞರಿಗೆ ಕರೆ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.

 Sharesee more..

ನ ೧೮ ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ

21 Oct 2019 | 8:34 PM

 Sharesee more..
ಪಾಕಿಸ್ತಾನ ಇಡೀ ಜಗತ್ತಿಗೆ ಸಮಸ್ಯಾತ್ಮಕ ದೇಶ; ರಾಂ ಮಾಧವ್

ಪಾಕಿಸ್ತಾನ ಇಡೀ ಜಗತ್ತಿಗೆ ಸಮಸ್ಯಾತ್ಮಕ ದೇಶ; ರಾಂ ಮಾಧವ್

21 Oct 2019 | 7:49 PM

ನವದೆಹಲಿ, ಅ.21 (ಯುಎನ್‌ಐ) ಪಾಕಿಸ್ತಾನ ಕೇವಲ ನೆರೆಯ ಭಾರತಕ್ಕೆ ಮಾತ್ರ ಸಮಸ್ಯೆಯಾಗಿಲ್ಲ, ಇಡೀ ಜಗತ್ತಿಗೆ ಸಮಸ್ಯಾತ್ಮಕ ರಾಷ್ಟ್ರವಾಗಿ ಪರಿಣಮಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದು, ಪ್ರಸ್ತುತ ಭಯೋತ್ಪಾದನೆ ಉಗಮದ ಕೇಂದ್ರಬಿಂದುವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

 Sharesee more..
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ

21 Oct 2019 | 7:07 PM

ಲಡಾಖ್, ಅ 21 (ಯುಎನ್‌ಐ) ಕಳೆದ ಮೂರು ದಶಕಗಳಿಂದ ಭಾರತ ಮತ್ತು ಪಾಕಿಸ್ತಾನಿ ಸೇನೆಗಳು ಹೆಚ್ಚು ಪ್ರಾಮುಖ್ಯತೆ ನೀಡಿ ಅಷ್ಟೇ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿರುವ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನೀರ್ಗಲ್ಲು ಪ್ರದೇಶ ಪ್ರವಾಸಿಗರಿಗೆ ಸೋಮವಾರದಿಂದ ಮುಕ್ತವಾಗಿದೆ.

 Sharesee more..