Wednesday, Jun 3 2020 | Time 09:38 Hrs(IST)
  • ನಿಸರ್ಗಚಂಡಮಾರುತ ಬೀತಿ: ಮುಂಬೈನಗರದಲ್ಲಿ ನಿಷೇಧಾಜ್ಞೆ
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
National Share

ರಫೇಲ್ ಯುದ್ದ ವಿಮಾನಕ್ಕೆ ಆಯುಧ ಪೂಜೆಯೇ..?; ಕಾಂಗ್ರೆಸ್ ಲೇವಡಿ

ನವದೆಹಲಿ, ಅ 9 (ಯುಎನ್‌ಐ) ರಫೇಲ್ ಯುದ್ಧ ವಿಮಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧ ಪೂಜೆ ನೆರವೇರಿಸಿರುವುದನ್ನು ಆಕ್ಷೇಪಿಸಿ ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಆಯುಧ ಪೂಜೆ ಹೆಸರಿನಲ್ಲಿ ರಕ್ಷಣಾ ಸಚಿವರು ಮಂಗಳವಾರ ಫ್ರಾನ್ಸ್‌ನಲ್ಲಿ ತಮಾಷೆ ನಡೆಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಭಾರತೀಯ ವಾಯುಪಡೆ ಮಂಗಳವಾರ ಫ್ರಾನ್ಸ್ ನಿಂದ ಹೊಸ ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸಿದೆ. ವಿಜಯದಶಮಿ ಕೂಡಾ ಆಗಿದ್ದ ಕಾರಣ ಭಾರತೀಯ ಸಂಪ್ರದಾಯ ಪ್ರಕಾರ ರಾಜನಾಥ್ ಸಿಂಗ್ ಅವರು, ಆಯುಧ ಪೂಜೆಯನ್ನು ನೆರವೇರಿಸಿದ್ದರು. ಈ ಕುರಿತು ಮಲ್ಲಿಕಾರ್ಜನ ಖರ್ಗೆ ಪ್ರತಿಕ್ರಿಯಿಸಿ...
ಇಂತಹ ತಮಾಷೆಗಳನ್ನು ನಡೆಸುವ ಅಗತ್ಯವಿರಲಿಲ್ಲ.. ಇದಕ್ಕೂ ಮೊದಲು ನಾವು(ಕಾಂಗ್ರೆಸ್ ಆಡಳಿತದಲ್ಲಿ) ಬೋಫೋರ್ಸ್ ಗನ್‌ಗಳನ್ನು ತಂದಾಗ ... ಯಾರೂ ಕೂಡ ಈ ರೀತಿಯ ಆರ್ಭಟಗಳನ್ನು ಮಾಡಿರಲಿಲ್ಲ. ಶಸ್ತ್ರಾಸ್ತ್ರಗಳು ಸಮರ್ಥವೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸುವ ವಿಷಯ ವಾಯುಪಡೆಗೆ ಸೇರಿದ್ದಾಗಿದೆ. ಬದಲಾಗಿ, ರಕ್ಷಣಾ ಸಚಿವರು ಆರ್ಭಟಮಾಡುತ್ತಾರೆ. ಆಯುಧಪೂಜೆ ನೆರವೇರಿಸುತ್ತಾರೆ, ವಿಮಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ಯುದ್ಧ ವಿಮಾನ ಸ್ವೀಕಾರ ಕಾರ್ಯಕ್ರಮದಲ್ಲಿ ಪೂಜೆ ಪುನಸ್ಕಾರದಂತಹ ಧಾರ್ಮಿಕ ಅಂಶ ಸೇರಿಸುವುದು ಸೂಕ್ತವಾದುದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದೀರ್ಘ ನಿರೀಕ್ಷೆಯ ನಂತರ, ಮೊದಲ ರಫೇಲ್ ಯುದ್ಧವಿಮಾನ ಅಂತಿಮವಾಗಿ ಭಾರತೀಯ ವಾಯುಪಡೆಗೆ ನಿನ್ನೆ ಹಸ್ತಾಂತರಿಸಲಾಗಿದೆ. ರಕ್ಷಣಾ ಸಚಿವರು ರಾಜನಾಥ್ ಸಿಂಗ್ ಮಂಗಳವಾರ ವಿಮಾನಕ್ಕೆ ಪೂಜೆ ನಡೆಸಿದರು. ವಿಮಾನದ ಮೇಲೆ ಓಂ ಎಂದು ಬರೆದು, ಹೂವು ತೆಂಗಿನಕಾಯಿ ಇರಿಸಿ ಪೂಜೆ ಸಲ್ಲಿಸಿದರು. ನಂತರ ಈ ದೃಶ್ಯಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಜಯದಶಮಿಯಂದು ಆಯುಧಗಳ ಪೂಜಿಸುವುದು ಭಾರತೀಯ ಸಂಪ್ರದಾಯ ಎಂದು ರಾಜನಾಥ್ ಸಿಂಗ್ ಸಮರ್ಥಿಸಿಕೊಂಡಿದ್ದರು.
ಯುಎನ್ ಐ ಕೆವಿಆರ್ ವಿಎನ್ 1800