Tuesday, Oct 22 2019 | Time 09:22 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
International Share

ರಸಾಯನಶಾಸ್ತ್ರ; ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಕಟ

ಸ್ಟಾಕ್‌ಹೋಂ, ಅ ೯(ಯುಎನ್‌ಐ) ರಸಾಯನ ಶಾಸ್ತ್ರದಲ್ಲಿ ವಿಶೇಷ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ನೊಬೆಲ್ ಪುರಸ್ಕಾರ ಪ್ರಕಟಿಸಲಾಗಿದೆ.
೨೦೧೯ನೇ ಸಾಲಿಗಾಗಿ ಕಳೆದ ಎರಡು ದಿನಗಳಲ್ಲಿ ವೈದ್ಯಕೀಯ, ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪುರಸ್ಕೃತರನ್ನು ನೊಬೆಲ್ ಅಸೆಂಬ್ಲಿ ಪ್ರಕಟಿಸಿತ್ತು.
ಇಂದು ಹೊಸದಾಗಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಜಾನ್ ಬಿ. ಗುಡ್ನಫ್, ಸ್ಟಾನ್ಲಿ ವಿಟ್ಟಿಂಗ್ಹ್ಯಾಮ್ ಮತ್ತು ಅಕಿರಾ ಯೋಷಿನೊ ಅವರಿಗೆ ಜಂಟಿಯಾಗಿ ನೊಬೆಲ್ ಪುರಸ್ಕಾರ ಪ್ರಕಟಿಸಲಾಗಿದೆ.
ಲಿಥಿಯಂ ಅಯಾನ್ ಬ್ಯಾಟರಿ ಅಭಿವೃದ್ಧಿಗಾಗಿ ನಡೆಸಿದ ವಿಶೇಷ ಸಂಶೋಧನೆಗಾಗಿ ಈ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ. ಇವರು ಅಭಿವೃದ್ಧಿಪಡಿಸಿದ ಲಿಥಿಯಂ-ಐಯಾನ್ ಬ್ಯಾಟರಿಗಳು ಪೋರ್ಟಬಲ್ ತಂತ್ರಜ್ಞಾನದಲ್ಲಿ ಬಹುದೊಡ್ಡ ಕ್ರಾಂತಿಗೆ ಕಾರಣವಾಗಿದೆ.
ಯುಎನ್ ಐ ಕೆವಿಆರ್ 1927