Monday, May 27 2019 | Time 09:38 Hrs(IST)
Entertainment Share

ರಾಜಕೀಯಕ್ಕೆ ಬರೋಲ್ವಂತೆ ಅಜಯ್ ದೇವಗನ್!

ಮುಂಬಯಿ, ಮೇ 15 (ಯುಎನ್ಐ) ತಾವೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಬಾಲಿವುಡ್ ನಟ ಅಜಯ್ ದೇವಗನ್ ತಿಳಿಸಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನ ಅನೇಕ ತಾರೆಯರು ಚಿತ್ರರಂಗದ ಹೊರತಾಗಿ ರಾಜಕೀಯಕ್ಕೂ ಪ್ರವೇಶಿಸುತ್ತಿದ್ದಾರೆ. ಈ ಕುರಿತು ಸುದ್ದಿಗಾರರು ಅಜಯ್ ಗೆ ಪ್ರಶ್ನಿಸಿದಾಗ, ''ನಾನ್ಯಾವತ್ತು ರಾಜಕೀಯ ಪ್ರವೇಶಿಸುವುದಿಲ್ಲ. ಜನರೊಂದಿಗೆ ಬೆರೆಯಲು ತುಂಬಾ ನಾಚಿಕೆ ಆಗುತ್ತದೆ. ರಾಜಕೀಯದಲ್ಲಿ ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲವೆಂದು ಭಾವಿಸುತ್ತೇನೆ. ತುಂಬಾ ಜನರೊಂದಿಗೆ ಬೆರೆಯುವುದು ನನಗೆ ಕಷ್ಟ. ಕ್ಯಾಮೆರಾ ಎದುರಿಗೆ ಸಹಜವಾಗಿದ್ದೇನೆ. ಆದರೆ, ನಾನು ಅಂತರ್ಮುಖಿ. ರಾಜಕೀಯದಲ್ಲಿ ಜನರೊಂದಿಗೆ ಬೆರೆಯುವ ಮೂಲಕ ವಿಶ್ವಾಸವಿಟ್ಟ ಜನತೆಯ ಜೊತೆ ಬೆರೆಯುವುದು ಅಗತ್ಯವಾಗಿದೆ. ಆದರೆ, ನಾನು ತುಂಬಾ ನಾಚಿಕೆ ಸ್ವಭಾವಯುಳ್ಳವನಾಗಿದ್ದರಿಂದ ಉತ್ತಮ ಮುಖಂಡನಾಗಲು ಸಾಧ್ಯವಿಲ್ಲ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಎನ್ಐ ಪಿಕೆ ಡಿಸಿ 1711
More News

ಬೋಳು ತಲೆಯ ಪಾತ್ರದಲ್ಲಿ ಆಯುಷ್ಮಾನ್

26 May 2019 | 1:57 PM

 Sharesee more..
ಮುಹೂರ್ತ ಆಚರಿಸಿಕೊಂಡ “ಬುದ್ಧಿವಂತ-2”

ಮುಹೂರ್ತ ಆಚರಿಸಿಕೊಂಡ “ಬುದ್ಧಿವಂತ-2”

25 May 2019 | 4:27 PM

ಬೆಂಗಳೂರು, ಮೇ 25 (ಯುಎನ್ಐ) ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮೇಘನಾ ರಾಜ್ ಜೋಡಿಯಾಗಿ ಅಭಿನಯಿಸುತ್ತಿರುವ “ಬುದ್ಧಿವಂತ-2” ಚಿತ್ರಕ್ಕೆ ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ,ಇತ್ತೀಚೆಗೆ ಮುಹೂರ್ತ ನೆರವೇರಿದೆ.

 Sharesee more..

ಟೈಗರ್ ಗಾಗಿ ನನ್ನ ಹೃದಯದಲ್ಲಿ ಸ್ಥಾನವಿದೆ : ಕೃತಿ

25 May 2019 | 4:04 PM

 Sharesee more..