Wednesday, Jun 3 2020 | Time 09:30 Hrs(IST)
  • ನಿಸರ್ಗಚಂಡಮಾರುತ ಬೀತಿ: ಮುಂಬೈನಗರದಲ್ಲಿ ನಿಷೇಧಾಜ್ಞೆ
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
Health -Lifestyle Share

ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ
ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

ಬೆಂಗಳೂರು, ಸೆ 13 [ಯುಎನ್ಐ]ಬೆಂಗಳೂರು ನಗರ ಡೆಂಘೀ ಜ್ವರದ ರಾಜಧಾನಿಯಾಗಿ ಪರಿವರ್ತನೆಯಾಗಿದ್ದು, ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ 60ಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಪತ್ತೆಯಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ಕೇಂದ್ರದ ವರದಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 6500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 948 ಪ್ರಕರಣಗಳು ದಾಖಲಾಗಿವೆ. ಮಲೆನಾಡು, ಪಶ್ಚಿಮಘಟ್ಟ ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿಲ್ಲ. ಒಟ್ಟಾರೆ ರಾಜ್ಯದಲ್ಲಿ ಈ ವರ್ಷ 10,524 ಡೆಂಘೀ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ.ಬೆಂಗಳೂರಿನಲ್ಲಿ ಜೂನ್ ನಲ್ಲಿ 1548, ಜುಲೈನಲ್ಲಿ ಅತಿ ಹೆಚ್ಚು ಅಂದರೆ 2563 ಮತ್ತು ಆಗಸ್ಟ್ ನಲ್ಲಿ 1376 ಪ್ರಕರಣಗಳು ದಾಖಲಾಗಿವೆ. ಈ ತಿಂಗಳ ಮೊದಲ ವಾರದಲ್ಲೇ 322 ಪ್ರಕರಣಗಳು ಪತ್ತೆಯಾಗಿರುವುದು ವಿಶೇಷ.

ಡೆಂಘೀ ಜ್ವರದಿಂದ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದ್ದು, ಕಳೆದ ವರ್ಷ ನಾಲ್ವರು ಮೃತಪಟ್ಟಿದ್ದರು. ಆದರೆ ಬೆಂಗಳೂರಿನಲ್ಲಿ ಡೆಂಘೀ ಜ್ವರದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ಕೇಂದ್ರದ ವರದಿ ತಿಳಿಸಿದೆ.

ಕಳೆದ ವರ್ಷ ರಾಜ್ಯದಲ್ಲಿ 4,427 ಮಂದಿಗೆ ಡೆಂಘೀ ಜ್ವರ ಕಂಡು ಬಂದಿತ್ತು. ಅತಿ ಹೆಚ್ಚು ವ್ಯಾಪಿಸುವ ಜೂನ್, ಜುಲೈ ಮತ್ತು ಆಗಸ್ಟ್ ನಲ್ಲಿ ಕ್ರಮವಾಗಿ ಕೇವಲ 93, 102 ಮತ್ತು 145 ಪ್ರಕರಗಳು ದಾಖಲಾಗಿತ್ತು. ರಾಜ್ಯದಲ್ಲಿ ಒಟ್ಟಾರೆ 4,427 ಪ್ರಕರಣಗಳು ದಾಖಲಾಗಿತ್ತು.

ಬೆಂಗಳೂರು ನಗರದಲ್ಲಿ ಡೆಂಘೀ ಜ್ವರದ ಬಗ್ಗೆ ಹೆಚ್ಚು ಅರಿವು ಮೂಡಿದ್ದು, ಮೈಕೈ ನೋವು, ತಲೆ ನೋವು, ಮಾಂಸಖಂಡಗಳಲ್ಲಿ ಅಸನೀಯ ನೋವು ಕಂಡು ಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಹೀಗಾಗಿ ಡೆಂಘೀ ಜ್ವರದಿಂದ ಈ ವರ್ಷ ಯಾರೂ ಮೃತಪಟ್ಟಿಲ್ಲ ಎಂದು ಬಿಬಿಎಂಪಿ ವರದಿ ತಿಳಿಸಿದೆ.

ಪ್ರತಿ ವಾರ್ಡ್‌ನಲ್ಲಿಯೂ ಡೆಂಘೀ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳ ನಿಯಂತ್ರಣ ಮತ್ತು ನಿರ್ಮೂಲನೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿರುವುದರಿಂದ ವಾರದಿಂದ ವಾರಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಡೆಂಘೀ ಜ್ವರ ದೇಶದ ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ ರಾಜ್ಯಗಳನ್ನು ಹೆಚ್ಚು ಆವರಿಸಿದೆ. ದೆಹಲಿಯಲ್ಲಿಯೂ ಸದ್ಯದ ಸ್ಥಿತಿಯಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯೂ ಡೆಂಘೀ ಪೀಡಿತವಾಗಿದೆ. ಒಟ್ಟಾರೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಡೆಂಘೀ ಪ್ರಕರಣಗಳು ವರದಿಯಾಗುತ್ತಿವೆ. ಆಗಸ್ಟ್ ಸೆಪ್ಟೆಂಬರ್ ನಂತರ ಡೆಂಘೀ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಯುಎನ್ಐ ವಿಎನ್ 1539

More News

ಕೆ ಆರ್ ಪೇಟೆ : ವೈದ್ಯರಿಗೆ ಕೋವಿಡ್ ಸೋಂಕು

02 Jun 2020 | 3:59 PM

 Sharesee more..

ದೇಶದ ಕೋವಿಡ್ 19 ಪ್ರಕರಣ 1,98,706ಕ್ಕೆ ಏರಿಕೆ!

02 Jun 2020 | 12:27 PM

 Sharesee more..

ಬ್ರೆಜಿಲ್: ಕೊರೋನಾಗೆ ಬಲಿಯಾದವರ ಸಂಖ್ಯೆ 29,937

02 Jun 2020 | 10:52 AM

 Sharesee more..
ಕೋವಿಡ್ 19 : ವಿಶ್ವಾದ್ಯಾಂತ ಸೋಂಕಿತರ ಸಂಖ್ಯೆ 6 ದಶಲಕ್ಷ

ಕೋವಿಡ್ 19 : ವಿಶ್ವಾದ್ಯಾಂತ ಸೋಂಕಿತರ ಸಂಖ್ಯೆ 6 ದಶಲಕ್ಷ

01 Jun 2020 | 4:40 PM

ವಾಷಿಂಗ್ಟನ್, ಜೂನ್ 01 (ಯುಎನ್‍ಐ) ಜಗತ್ತಿನಾದ್ಯಂತ ಕೋವಿಡ್-19 ಪ್ರಕರಣಗಳು ಆರು ದಶಲಕ್ಷದ ಸಮೀಪದಲ್ಲಿದ್ದರೆ, ಸಾವುಗಳು 371,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

 Sharesee more..