Wednesday, Dec 2 2020 | Time 08:18 Hrs(IST)
business economy Share

ರಿಲಯನ್ಸ್ ರೀಟೇಲ್ ನಲ್ಲಿ ಶೇ. 10.09ರಷ್ಟು ಷೇರು ಮಾರಿ, 47,265 ಕೋಟಿ ರೂ.ಸಂಗ್ರಹ

ಮುಂಬೈ, ನವೆಂಬರ್ 19 (ಯುಎನ್ಐ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿಎಲ್ )ನಿಂದ ಸಹಭಾಗಿಗಳ ಸೇರ್ಪಡೆ ಹಾಗೂ ಹಣ ಸಂಗ್ರಹ ಮುಗಿಸಿವೆ. ರಿಲಯನ್ಸ್ ರೀಟೇಲ್ ವೆಂಚರ್ಸ್ ಒಟ್ಟಾರೆಯಾಗಿ 69,27,81,234 ಈಕ್ವಿಟಿ ಷೇರುಗಳನ್ನು ವಿತರಿಸಿ, 47,265 ಕೋಟಿ ರೂಪಾಯಿಯನ್ನು ಸಂಗ್ರಹಿಸಿದೆ. ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ಈಕ್ವಿಟಿ ಷೇರುಗಳ ವಿತರಣೆ ಮಾಡಲಾಗಿದೆ.
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಿರ್ದೇಶಕಿ ಇಶಾ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಇಂಥ ಪ್ರಬಲ ಹಾಗೂ ಗೌರವಾನ್ವಿತ ಸಹಭಾಗಿಗಳನ್ನು ಹೊಂದಿರುವುದಕ್ಕೆ ಹೆಮ್ಮೆ ಆಗುತ್ತದೆ. ನಮ್ಮ ಉದ್ಯಮದ ಬಗ್ಗೆ ಹೂಡಿಕೆದಾರರು ಇಂಥ ಅಭೂತಪೂರ್ವ ಆಸಕ್ತಿ ತೋರಿರುವುದು ನಮಗೆ ಸಿಕ್ಕ ಗೌರವ ಎನಿಸುತ್ತದೆ. ಜಾಗತಿಕ ಸಂಪರ್ಕ ಹಾಗೂ ಅವರ ಅನುಭವದ ಅನುಕೂಲ ಪಡೆದು ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಹೊಸ ವಾಣಿಜ್ಯ ವ್ಯವಹಾರಗಳ ಮೇಲೆ ನಮ್ಮ ಗಮನ ಇದ್ದು, ಹತ್ತಾರು ಲಕ್ಷ ವರ್ತಕರು ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಭಾರತದ ರೀಟೇಲ್ ವಲಯದಲ್ಲಿ ಬದಲಾವಣೆ ತರುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಯುಎನ್ಐ ಎಎಚ್ 2051
More News
27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

01 Dec 2020 | 4:31 PM

ಮುಂಬೈ, ಡಿ.1 (ಯುಎನ್ಐ) ಜಿಯೋ ಗೇಮ್ಸ್ 27 ದಿನಗಳ ಕ್ಲಾಷ್ ರಾಯಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ವಿಜೇತರಿಗೆ ‘ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

 Sharesee more..

ಸೆಕೆಂಡ್‌ ಹ್ಯಾಂಡ್‌ ಕಾರುಗಳ ದಾಖಲೆ ಮಾರಾಟ

01 Dec 2020 | 11:23 AM

 Sharesee more..