Friday, Dec 13 2019 | Time 02:38 Hrs(IST)
Sports Share

ರೋಶನಾರಾ ಕ್ಲಬ್‌ನ ಗೌರವ ಸದಸ್ಯತ್ವ ಪಡೆದ ಮೊಹಮ್ಮದ್ ಶಮಿ

ನವದೆಹಲಿ, ಡಿ 2 (ಯುಎನ್ಐ)- ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ರಾಜಧಾನಿಯ ಪ್ರಸಿದ್ಧ ಮತ್ತು ಹಳೆಯ ರೋಶನಾರಾ ಕ್ಲಬ್‌ನ ಗೌರವ ಸದಸ್ಯತ್ವ ನೀಡಲಾಗಿದೆ.

ಸೋಮವಾರ ರೋಶನಾರಾ ಕ್ಲಬ್‌ನಲ್ಲಿ ಶಮಿ ಅವರನ್ನು ಗೌರವಿಸಲಾಯಿತು ಮತ್ತು ಕ್ಲಬ್‌ನ ಗೌರವ ಸದಸ್ಯತ್ವವನ್ನು ನೀಡಲಾಯಿತು. ರೋಶನಾರಾ ಕ್ಲಬ್ ಕ್ರಿಕೆಟ್ ಕಾರ್ಯದರ್ಶಿ ಅರ್ಜುನ್ ಗುಪ್ತಾ ಮಾತನಾಡಿ, ಶಮಿಗೆ ಕ್ಲಬ್‌ನ ಸದಸ್ಯತ್ವ ನೀಡಲಾಗಿದೆ ಎಂಬುದು ತನಗೆ ಬಹಳ ಸಂತೋಷದ ಸಂಗತಿಯಾಗಿದೆ. ತಮ್ಮ ಕಂಪನಿ ಕ್ರಾಗ್‌ಬಾಜ್ ಸ್ಪೋರ್ಟ್ಸ್ ಈಗ ಶಮಿಯ ವ್ಯವಹಾರ ನಿರ್ವಹಣೆಯನ್ನು ನೋಡಿಕೊಳ್ಳಲಿದೆ ಎಂದು ಅರ್ಜುನ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಕ್ರಿಕೆಟ್ ಅಮಿತ್ ಗರ್ಗ್, ಸಹ-ಅಧ್ಯಕ್ಷ ಕುನಾಲ್ ವಂಜನಿ ಮತ್ತು ಕಾರ್ಯದರ್ಶಿ ಕ್ರಿಕೆಟ್ ಜಸ್ಪ್ರೀತ್ ಸಿಂಗ್ ಉಪಸ್ಥಿತರಿದ್ದರು.

ಕ್ಲಬ್‌ನ ಸೌಲಭ್ಯಗಳ ಬಗ್ಗೆ ಶಮಿ ಸಾಕಷ್ಟು ಸಂತಸಗೊಂಡಿದ್ದು, ರಾಜಧಾನಿಗೆ ಬಂದಾಗಲೆಲ್ಲಾ ಕ್ಲಬ್‌ನ ಜಿಮ್ ಮತ್ತು ಕ್ರಿಕೆಟ್ ಸೌಲಭ್ಯಗಳನ್ನು ಬಳಸುತ್ತೇನೆ ಎಂದು ಹೇಳಿದರು.

ಯುಎನ್ಐ ವಿಎನ್ಎಲ್ 1946