Monday, Jul 13 2020 | Time 01:28 Hrs(IST)
Sports Share

ರಿಷಭ್ ಬೆನ್ನಿಗೆ ನಿಂತ ವಿಕ್ರಮ್‌ ರಾಥೋಡ್‌

ನವದೆಹಲಿ, ಜೂನ್ 29 (ಯುಎನ್ಐ)
ದೆಹಲಿ ಮೂಲದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಭಾರತ ತಂಡಕ್ಕೆ ಪ್ರವೇಶ ಮಾಡಿದಾಗ ಮಹೇಂದ್ರ ಸಿಂಗ್‌ ಧೋನಿ ಸ್ಥಾನ ತುಂಬಲಿದ್ದಾರೆಂಬ ಬಲವಾದ ನಿರೀಕ್ಷೆ ಇಡಲಾಗಿತ್ತು. ವಿದೇಶಿ ನೆಲಗಳಲ್ಲಿ ರಿಷಭ್‌ ಪಂತ್ ಸ್ಫೋಟಿಸಿದ್ದ ಬ್ಯಾಟಿಂಗ್‌, ನಿಜವಾಗಲೂ ಹಿರಿಯ ವಿಕೆಟ್‌ ಕೀಪರ್‌ ಧೋನಿಯ ಪಾತ್ರಕ್ಕೆ ಸೂಕ್ತ ಎಂದೇ ಹೇಳಲಾಗಿತ್ತು.
ದಿಲ್ಲಿಯ ಆಟಗಾರ 2019ರ ವಿಶ್ವಕಪ್‌ ಬಳಿಕ ಆಡಿದ್ದ ಕೆಲವು ಸರಣಿಗಳಲ್ಲಿ ವಿಕೆಟ್‌ ಕೀಪಿಂಗ್‌ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ. ಜತೆಗೆ, ಬ್ಯಾಟಿಂಗ್‌ನಲ್ಲೂ ಅನಗತ್ಯ ಹೊಡೆತಗಳಿಂದ ಕೈ ಸುಟ್ಟುಕೊಂಡಿದ್ದರು. ಒಟ್ಟಾರೆ, ಪಂತ್‌ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯಲ್ಲಿ ಕೆ.ಎಲ್‌ ರಾಹುಲ್‌ ವಿಕೆಟ್‌ ಕೀಪಿಂಗ್‌ ಮಾಡಿದ್ದರು. ಆದಾಗ್ಯೂ, ಟೀಮ್‌ ಇಂಡಿಯಾ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌ ಅವರು ಎಡಗೈ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಪರ ಬ್ಯಾಟ್‌ ಬೀಸಿದ್ದಾರೆ.
"ರಿಷಭ್‌ ಪಂತ್‌ ಕಳೆದ ವರ್ಷ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರಿನ್ನೂ ಏನೂ ಸಾಧನೆ ಮಾಡಿಲ್ಲ. ಆದರೆ ಅವರ ಮೇಲೆ ಇನ್ನೂ ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಇನ್ನೂ ಒಲವಿದೆ. ಅವರೊಬ್ಬ ವಿಶೇಷ ಆಟಗಾರ ಎಂಬುದನ್ನು ಬಲವಾಗಿ ನಂಬಿದೆ. ಪಂತ್‌ ಒಮ್ಮೆ ರನ್‌ ಗಳಿಸಲು ಆರಂಭಿಸಿದರೆ, ಖಂಡಿತಾ ಭಾರತ ತಂಡಕ್ಕೆ ಅಪಾರ ಕೊಡುಗೆ ನೀಡಲಿದ್ದಾರೆ," ಎಂದು ವಿಕ್ರಮ್‌ ರಾಥೋಡ್‌ ಅಭಿಪ್ರಾಯ ವ್ಯಕ್ತಪಡಿಸಿದರು.
"ಮಾಜಿ ನಾಯಕ ಎಂ.ಎಸ್‌ ಧೋನಿ ಇನ್ನೂ ನಮ್ಮ ಸಮೀಪವೇ ಇದ್ದಾರೆ, ಅವರ ಭಿವಿಷ್ಯದಲ್ಲಿ ಮುಂದೇ ಏನಾಗಲಿದೆ ಎಂಬ ಬಗ್ಗೆ ಸದ್ಯ ಗೊತ್ತಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಬಗ್ಗೆ ಅವರು ಹೊಂದಿದ್ದ ನಿಲುವು ಅದ್ಭುತವಾದ್ದು, ಅವರ ಸ್ಥಾನ ತುಂಬುವುದು ನಿಜಕ್ಕೂ ಸಾಧ್ಯವಿಲ್ಲ. ರಿಷಭ್‌ ಪಂತ್‌ ಕೆಲ ವೈಫಲ್ಯಗಳನ್ನು ಅನುಭವಿಸಿದ್ದಾರೆ, ಏಕೆಂದರೆ ಅವರ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಬಲಿಷ್ಠ ಹಾಗೂ ಅತ್ಯುತ್ತಮ ಆಟಗಾರರಾಗಿ ಅವರು ಹೊರಹೊಮ್ಮಲಿದ್ದಾರೆ," ಎಂದು ಸ್ಪೋರ್ಟ್ಸ್‌ಕೀಡಾದೊಂದಿಗೆ ಟೀಮ್‌ ಇಂಡಿಯಾ ಬ್ಯಾಟಿಂಗ್‌ ಕೋಚ್‌ ವಿಶ್ವಾಸ ವ್ಯಕ್ತಪಡಿಸಿದರು.
ಯುಎನ್ಐಆರ್ ಕೆ 1842
More News
ವಿವಿಧ ರಾಜ್ಯಗಳ ಕ್ರೀಡಾ ಸಚಿವರೊಂದಿಗೆ ರಿಜಿಜು 2 ದಿನ ವಿಡಿಯೋ ಕಾನ್ಫರೆನ್ಸ್

ವಿವಿಧ ರಾಜ್ಯಗಳ ಕ್ರೀಡಾ ಸಚಿವರೊಂದಿಗೆ ರಿಜಿಜು 2 ದಿನ ವಿಡಿಯೋ ಕಾನ್ಫರೆನ್ಸ್

12 Jul 2020 | 8:53 PM

ನವದೆಹಲಿ, ಜುಲೈ 12 (ಯುಎನ್ಐ) ದೇಶಾದ್ಯಂತ ಕ್ರೀಡೆಗಳನ್ನು ಬೇರು ಮಟ್ಟದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಸಂಬಂದಿಸಿದಂತೆ ನೀಲನಕ್ಷೆ ಸಿದ್ಧಪಡಿಸಲು ಹಾಗೂ ನೆಹರೂ ಯುವ ಕೇಂದ್ರ ಸಂಘಟನೆ (ಎನ್ ವೈಕೆಎಸ್)ಯ ಚಟುವಟಿಕೆಗಳನ್ನು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕುರಿತು ಸಮಾಲೋಚನೆ ನಡೆಸುವುದಕ್ಕಾಗಿ ಕೇಂದ್ರ ಕ್ರೀಡಾ ಸಚಿವಾ ಕಿರಣ್ ರಿಜಿಜು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಸಚಿವರೊಂದಿಗೆ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಸಭೆ ನಡೆಸಲಿದ್ದಾರೆ.

 Sharesee more..