Saturday, Jul 11 2020 | Time 10:41 Hrs(IST)
  • ಪುಲ್ವಾಮದಲ್ಲಿ ಭದ್ರತಾ ಪಡೆಯಿಂದ ಶೋಧ ಕಾರ್ಯಾಚರಣೆ
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
National Share

ರಾಷ್ಟ್ರವನ್ನುದ್ದೇಶಿಸಿ ನಾಳೆ 4 ಗಂಟೆಗೆ ಪ್ರಧಾನಮಂತ್ರಿ ಭಾಷಣ

ನವದೆಹಲಿ, ಜೂನ್ 29 (ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಸೋಮವಾರ ತಿಳಿಸಿದೆ.
‘ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.’ ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯ ಟ್ವೀಟ್ ಮಾಡಿದೆ. ಮಾರ್ಚ್ 25 ರಂದು ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ನಾಲ್ಕನೇ ಬಾರಿಗೆ ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅನ್‍ಲಾಕ್‍ 2ನೇ ಹಂತ ಜುಲೈ 1 ರಿಂದ ಆರಂಭವಾಗುವ ಒಂದು ದಿನದ ಮೊದಲು ಪ್ರಧಾನಮಂತ್ರಿ ಭಾಷಣ ಮಾಲಿದ್ದಾರೆ. ಈ ಮಧ್ಯೆ, ಅನ್‍ಲಾಕ್‍ 2ಕ್ಕೆ ಗೃಹ ಸಚಿವಾಲಯ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಪ್ರಕಟಿಸಿದೆ. ಅದರಂತೆ, ಶಾಲಾ-ಕಾಲೇಜುಗಳು, ಸಿನಿಮಾಹಾಲ್‍ಗಳು, ಮೆಟ್ರೋಗಳು ಸೇರಿದಂತೆ ಇನ್ನಿತರ ಸ್ಥಳಗಳನ್ನು ಜುಲೈ 31ರವರೆಗೆ ಮುಚ್ಚುವಂತೆ ನಿರ್ದೇಶಿಸಲಾಗಿದೆ.
ಯುಎನ್‍ಐ ಎಸ್ಎಲ್‍ಎಸ್ 2349
More News
ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸೇನೆಗಳ ಸಂಪೂರ್ಣ ಹಿಂತೆಗೆತಕ್ಕೆ ಭಾರತ, ಚೀನಾ ಪುನರುಚ್ಛಾರ

ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸೇನೆಗಳ ಸಂಪೂರ್ಣ ಹಿಂತೆಗೆತಕ್ಕೆ ಭಾರತ, ಚೀನಾ ಪುನರುಚ್ಛಾರ

10 Jul 2020 | 9:30 PM

ನವದೆಹಲಿ, ಜುಲೈ(ಯುಎನ್‍ಐ)- ಪೂರ್ವ ಲಡಾಖ್‍ ನ ವಾಸ್ತವ ಗಡಿ ನಿಯಂತ್ರಣಾ ರೇಖೆಯಯಲ್ಲಿ ಮುಂದುವರೆದಿರುವ ಸೇನೆ ಹಿಂತೆಗೆತದ ನಡುವೆ ಭಾರತ ಮತ್ತು ಚೀನಾ ರಾಯಭಾರಿಗಳು ಶುಕ್ರವಾರ ಸಭೆ ನಡೆಸಿ, ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಗಡಿಯಲ್ಲಿ ಸೇನೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳುವುದನ್ನು ಎರಡೂ ದೇಶಗಳು ಖಚಿತಪಡಿಸುತ್ತವೆ ಎಂದು ಪುನರುಚ್ಛರಿಸಿದ್ದಾರೆ.

 Sharesee more..

ಶಾಸ್ತ್ರಿ ಭವನದಲ್ಲಿ ಅಗ್ನಿ ಆಕಸ್ಮಿಕ

10 Jul 2020 | 4:57 PM

 Sharesee more..