Sunday, Apr 5 2020 | Time 14:53 Hrs(IST)
 • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
 • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಪ್ರಧಾನಿ ಗೌರವ ಸಲ್ಲಿಕೆ
 • ಕೋವಿಡ್‌-19: ಸೋಂಕು ಪ್ರಕರಣಗಳ ಸಂಖ್ಯೆ 3374ಕ್ಕೇರಿಕೆ: 77 ಸಾವು, 266 ಮಂದಿ ಗುಣಮುಖ
Parliament Share

ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ: ಅನಿರ್ದಿಷ್ಟಾವಧಿಗೆ ಸದನ ಮುಂದೂಡಿಕೆ

ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ: ಅನಿರ್ದಿಷ್ಟಾವಧಿಗೆ ಸದನ ಮುಂದೂಡಿಕೆ
ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ: ಅನಿರ್ದಿಷ್ಟಾವಧಿಗೆ ಸದನ ಮುಂದೂಡಿಕೆ

ನವದೆಹಲಿ, ಮಾರ್ಚ್ 23 (ಯುಎನ್‌ಐ)- 2020-21 ಆರ್ಥಿಕ ವರ್ಷದ ಕೇಂದ್ರ ಸರ್ಕಾರದ ಹಣಕಾಸು ಪ್ರಸ್ತಾವಗಳನ್ನು ಜಾರಿಗೆ ತರುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ರ ಹಣಕಾಸು ಮಸೂದೆಯನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದರು.

ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳ ಮಹಡಿ ನಾಯಕರು ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕರಿಸಲು ಒಪ್ಪಿದ್ದಾರೆ.

ಮಾರಣಾಂತಿಕ ಕೊರೊನಾವೈರಸ್ ರೋಗ ಹರಡುವಿಕೆಯನ್ನು ತಡೆಯಲು ಘೋಷಿಸಲಾಗಿರುವ ಲಾಕ್ ಡೌನ್ ಮತ್ತು ಉದ್ಭವಿಸಿರುವ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮಸೂದೆ ಅಂಗೀಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸರ್ಕಾರ ಮಾಡಿದ ತಿದ್ದುಪಡಿಗಳನ್ನು ಅಂಗೀಕರಿಸಿದ ನಂತರ ಸದನ ಮತ ಹಾಕುವ ಮೂಲಕ ಹಣಕಾಸು ಮಸೂದೆಯನ್ನು ಅಂಗೀಕರಿಸಿತು.

ವೈದ್ಯರು, ಶುಶ್ರೂಷಕಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸದನ ಕೃತಜ್ಞತೆ ಸಲ್ಲಿಸಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು. ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಸದನ ಮುಂದೂಡುತ್ತಿರುವುದಾಗಿ ಸ್ಪೀಕರ್ ಘೋಷಿಸಿದರು.

ಯುಎನ್‍ಐ ಎಸ್ಎಲ್‍ಎಸ್ 1634

There is no row at position 0.