Saturday, Feb 29 2020 | Time 16:20 Hrs(IST)
 • ದುರುದ್ದೇಶದಿಂದ ಕಿರುಕುಳ; ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಪೊಲೀಸ್ ಅಧಿಕಾರಿ‌ಯೋರ್ವರ ದೂರು
 • ಯಡಿಯೂರಪ್ಪ ಹುಟ್ಟು ಹೋರಾಟಗಾರರೇ ಆದರೆ ಕೆಪಿಎಸ್ಸಿ ಅಕ್ರಮ ಬಯಲಿಗೆಳೆಯಲಿ; ಚಿಂತಕ ಪ್ರೊ ಮಹೇಶ್ ಚಂದ್ರ ಗುರು ಮುಖ್ಯಮಂತ್ರಿಗಳಿಗೆ ತಾಕೀತು
 • ಬಿಬಿಎಂಪಿ ಸಭೆ; ಇಂದಿರಾ ಕ್ಯಾಂಟೀನ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಕಿಡಿ
 • ಇರಾನ್ ನಲ್ಲಿರುವ ಕಾಶ್ಮೀರ ವಿದ್ಯಾರ್ಥಿಗಳು ವಾಪಸ್ಸಾಗಲು ಸೌಲಭ್ಯ ಕಲ್ಪಿಸಿ; ಸಚಿವ ಜೈಶಂಕರ್ ಗೆ ಸೋಜ್ ಮನವಿ
 • ಪ್ರತೀ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೇಲು: ಬಜೆಟ್ ನಲ್ಲಿ ಹೊಸ ಯೋಜನೆ ಘೋಷಣೆ
 • ಮಲೇಷಿಯಾ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
 • ಮಲೇಷಿಯಾದ ನೂತನ ಪ್ರಧಾನಮಂತ್ರಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
 • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
 • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
Parliament Share

ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ
ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

ನವದೆಹಲಿ, ಫೆ. 11 (ಯುಎನ್‌ಐ) ಜನವರಿ 31 ರಂದು ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಾಂಪ್ರದಾಯಿಕ ಭಾಷಣದೊಂದಿಗೆ ಪ್ರಾರಂಭವಾದ ಲೋಕಸಭೆಯ ಬಜೆಟ್ ಅಧಿವೇಶನದ ಮೊದಲ ಚರಣ ಮಂಗಳವಾರ ಮುಕ್ತಾಯಗೊಂಡಿದೆ.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದರು.

ಅಧಿವೇಶನದ ಎರಡನೇ ಭಾಗವು ಮಾರ್ಚ್ 2 ರಿಂದ ಪ್ರಾರಂಭವಾಗಿ ಏಪ್ರಿಲ್ 3 ರವರೆಗೆ ಮುಂದುವರಿಯುತ್ತದೆ.

ಆರ್ಥಿಕ ಸಮೀಕ್ಷೆಯನ್ನು ಜನವರಿ 31 ರಂದು ಮಂಡಿಸಲಾಯಿತು. ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದರು.

ದೇಶದ ವಿವಿಧ ಭಾಗಗಳಲ್ಲಿ ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ನಡೆದ ಹಿಂಸಾಚಾರದ ಮಧ್ಯೆಯೇ ಬಜೆಟ್ ಅಧಿವೇಶನ ನಡೆಯುತ್ತಿದೆ.

ಕರ್ನಾಟಕದ ಕೆಲವು ಬುಡಕಟ್ಟು ಸಮುದಾಯಗಳನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸುವ ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ಎರಡನೇ ತಿದ್ದುಪಡಿ) ಮಸೂದೆ 2019 ಅನ್ನು ಅಂಗೀಕರಿಸಿದ ನಂತರ ಜನರ ಸದನವನ್ನು ಮುಂದೂಡಲಾಯಿತು..

ಇಂದು ಬೆಳಗ್ಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಕುರಿತು ಚರ್ಚೆಗೆ ಉತ್ತರಿಸಿದರು.

ಖಾಸಗಿ ಮತ್ತು ಸರ್ಕಾರಿ ಹೂಡಿಕೆ, ಬಳಕೆ ಸಾಮರ್ಥ್ಯ ಹೆಚ್ಚಳ ಮತ್ತು ರಫ್ತು ಹೆಚ್ಚಿಸಿ ಸದೃಢ ಆರ್ಥಿಕತೆಯನ್ನು ನಿರ್ಮಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲಾ ಕ್ಷೇತ್ರಗಳಿಗೆ ಸರ್ಕಾರ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದ್ದು, ಇದರ ಫಲಿತಾಂಶಗಳು ಈಗಾಗಲೇ ಗೋಚರಿಸಲಾರಂಭಿಸಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಯುಎನ್ಐ ಎಎಚ್ 1710

More News
ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

11 Feb 2020 | 5:27 PM

ನವದೆಹಲಿ, ಫೆ.11 (ಯುಎನ್‌ಐ) ಜನವರಿ 31 ರಂದು ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಾಂಪ್ರದಾಯಿಕ ಭಾಷಣದೊಂದಿಗೆ ಪ್ರಾರಂಭವಾದ ಲೋಕಸಭೆಯ ಬಜೆಟ್ ಅಧಿವೇಶನದ ಮೊದಲ ಚರಣ ಮಂಗಳವಾರ ಮುಕ್ತಾಯಗೊಂಡಿದೆ.

 Sharesee more..
ಎಸ್ ಸಿ/ ಎಸ್ ಟಿ ಉಪ ಯೋಜನೆ ಪುನರಾರಂಭಿಸಿ; ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒತ್ತಾಯ

ಎಸ್ ಸಿ/ ಎಸ್ ಟಿ ಉಪ ಯೋಜನೆ ಪುನರಾರಂಭಿಸಿ; ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒತ್ತಾಯ

11 Feb 2020 | 4:52 PM

ನವದೆಹಲಿ, ಫೆ 11(ಯುಎನ್ಐ) ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಸರ್ಕಾರ 2020-21ನೇ ಸಾಲಿನ ಮುಂಗಡಪತ್ರದಲ್ಲಿ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಸಮುದಾಯದ ಅಭಿವೃದ್ದಿಗೆ ಎಸ್ ಸಿ/ಎಸ್ ಟಿ ಉಪ ಯೋಜನೆಗಳನ್ನು ಪುನರಾರಂಭಿಸಬೇಕು ಎಂದು ಮಂಗಳವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದೆ.

 Sharesee more..
ಸದೃಢ ಆರ್ಥಿಕತೆಗಾಗಿ ಸರ್ಕಾರ ಕಾರ್ಯಮಗ್ನ: ನಿರ್ಮಲಾ ಸೀತಾರಾಮನ್ ಭರವಸೆ

ಸದೃಢ ಆರ್ಥಿಕತೆಗಾಗಿ ಸರ್ಕಾರ ಕಾರ್ಯಮಗ್ನ: ನಿರ್ಮಲಾ ಸೀತಾರಾಮನ್ ಭರವಸೆ

11 Feb 2020 | 4:48 PM

ನವದೆಹಲಿ, ಫೆ 11(ಯುಎನ್ಐ)- ಸರ್ಕಾರಿ ಮತ್ತು ಖಾಸಗಿ ಹೂಡಿಕೆ, ಬಳಕೆ ಮತ್ತು ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಸದೃಢ ಆರ್ಥಿಕತೆ ರೂಪಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಭರವಸೆ ನೀಡಿದ್ದು, ಎಲ್ಲಾ ವಲಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಿರುವುದರಿಂದ ಫಲಿತಾಂಶಗಳು ಈಗಾಗಲೇ ಗೋಚರಿಸಲಾರಂಭಿಸಿವೆ ಎಂದು ಹೇಳಿದ್ದಾರೆ.

 Sharesee more..