Thursday, Oct 22 2020 | Time 19:59 Hrs(IST)
 • ಪ್ರಾದೇಶಿಕ ಭಾಷೆಗಳಲ್ಲಿ ಜೆ ಇ ಇ ಮುಖ್ಯ ಪರೀಕ್ಷೆ : ರಮೇಶ್ ಪೋಖ್ರಿಯಾಲ್
 • ಪದವಿಪೂರ್ವ ಪಠ್ಯ ಶೇ 30 ರಷ್ಟು ಕಡಿತ
 • ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
 • ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ: ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು… !!!
 • ಬಿಹಾರಿಗಳ ಆತ್ಮಗೌರವ ಮಾರಾಟಕ್ಕಿಲ್ಲ , ತೇಜಸ್ವಿ ಯಾದವ್ ವಾಗ್ದಾಳಿ
 • ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
National Share

ಲೋಕ ಜನಶಕ್ತಿ ಪಕ್ಷ ಎನ್‌ಡಿಎ ಭಾಗವಲ್ಲ- ಭೂಪೇಂದ್ರ ಯಾದವ್

ಪಾಟ್ನಾ, ಅ 17 (ಯುಎನ್‍ಐ)- ಲೋಕಜನಶಕ್ತಿ ಪಕ್ಷ(ಎಲ್‍ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್‍ ಇನ್ನು ಮುಂದೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ)ದ ಭಾಗವಾಗಿರುವುದಿಲ್ಲ ಬಿಹಾರ ಬಿಜೆಪಿ ಘಟಕದ ಉಸ್ತುವಾರಿ ಭೂಪೇಂದ್ರ ಯಾದವ್ ಪ್ರತಿಪಾದಿಸಿದ್ದಾರೆ.
ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಪಾಸ್ವಾನ್, ದೆಹಲಿ ಮಾಜಿ ಬಿಜೆಪಿ ಅಧ್ಯಕ್ಷ, ಸಂಸದ ಮನೋಜ್ ತಿವಾರಿ ಮತ್ತು ರಾಷ್ಟ್ರೀಯ ವಕ್ತಾರ ಸಂಜಯ್ ಮಯೂಕ್ ಅವರೊಂದಿಗೆ ಭೂಪೇಂದ್ರ ಯಾದವ್ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮೋದಿ ತರಂಗ ಮತ್ತು ಆ್ಯಪ್ ಸಂಗೀತವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದರು.
ಪಕ್ಷವನ್ನು ಎನ್‌ಡಿಎಗೆ ಸೇರ್ಪಡೆಗೊಳಿಸುವುದರ ಬಗ್ಗೆ ಯಾವುದೇ ಗೊಂದಲವನ್ನು ಸೃಷ್ಟಿಸದಂತೆ ಚಿರಾಗ್ ಪಾಸ್ವಾಗೆ ಯಾದವ್ ಇದೇ ಸಂದರ್ಭದಲ್ಲಿ ಹೇಳಿದರು.
ಪಾಸ್ವಾನ್ ಏನನ್ನೂ ಹೇಳ ಬೇಕಾದರೂ ಸ್ವತಂತ್ರರಾಗಿದ್ದಾರೆ. ಆದರೆ ವಾಸ್ತವವಾಗಿ ಅವರು ಎನ್‌ಡಿಎಯೊಂದಿಗೆ ಪರಿಪೂರ್ಣರಾಗಿಲ್ಲ ಎಂದು ಯಾದವ್ ಹೇಳಿದ್ದಾರೆ.
ಜನತಾದಳ (ಸಂಯುಕ್ತ) ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಬಿಜೆಪಿ ನಾಯಕ ಪಾಸ್ವಾನ್ ಅವರ ಸ್ವಂತ ಪಕ್ಷವನ್ನು ತಹಬದಿಗೆ ತರಬೇಕು ಎಂದು ಸೂಚಿಸಿರುವ ಯಾದವ್, ಎಲ್‍ ಜೆಪಿ ನಾಯಕ ಮತ್ತು ಹಾಜಿಪುರ್ ‍ಮೀಸಲು ಲೋಕಸಭಾ ಮೀಸಲು ಕ್ಷೇತ್ರದ ಸಂಸದ ಚಿರಾಗ್ ಪಾಸ್ವಾನ್ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಸಹ ಅವರ ನಿರ್ಧಾರಗಳಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ- ಮಾರ್ಕ್ಸ್‌ವಾದಿ ಲೆನಿನಿಸ್ಟ್ (ಸಿಪಿಐ-ಎಂಎಂಎಲ್) ಮೈತ್ರಿ ಕೂಟ ‘ಅಪವಿತ್ರ’ ಎಂದ ಅವರು, ಎಡಪಕ್ಷಗಳು ಮತ್ತು ಸಿಪಿಐ (ಎಂಎಲ್) ನೊಂದಿಗೆ ಕೈಜೋಡಿಸುವ ಹಿಂದಿರುವ ಕಾಂಗ್ರೆಸ್ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ.
ಯುಎನ್‍ಐ ಎಸ್ಎಸ್‍ಎಸ್ 2108
More News
ಅಮಿತ್ ಶಾ ಜನ್ಮದಿನ: ಪ್ರಧಾನಿ ಶುಭಹಾರೈಕೆ

ಅಮಿತ್ ಶಾ ಜನ್ಮದಿನ: ಪ್ರಧಾನಿ ಶುಭಹಾರೈಕೆ

22 Oct 2020 | 12:47 PM

ನವದೆಹಲಿ, ಅ, 22 (ಯುಎನ್ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ 56 ನೇ ವಸಂತಕ್ಕೆ ಕಾಲಿಟ್ಟಿದ್ದು , ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

 Sharesee more..